Slide
Slide
Slide
previous arrow
next arrow

ಶ್ರೀ ವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕ

300x250 AD

“ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ | ಅನಿರ್ದೇಶ್ಯವಪುರಗವಿಷ್ಣುರ್ ವೀರೋSನಂತೋ ಧನಂಜಯಃ”

ಭಾವಾರ್ಥ:- ಧರ್ಮ,ಅರ್ಥ, ಕಾಮ,ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಬಯಸುವವವರು ಈತನನ್ನು ಕಾಮಿಸುತ್ತಾರೆ. ಆದ್ದರಿಂದ ‘ಕಾಮನು’. ಕಾಮನು ದೇವನೂ ಆಗುವುದರಿಂದ ‘ಕಾಮದೇವನು’. ತನ್ನ ಭಕ್ತರಿಗೆ ಇಷ್ಟಾರ್ಥಗಳನ್ನು ಪೂರೈಸುವವನೂ ಮತ್ತು ಪೂರ್ತಿಗೊಳಿಸುವವನು. ತಾನು ಕಾಮಿಸುವ (ಇಷ್ಟ ಪಡುವ)ತನ್ನ ಭಕ್ತರನ್ನು ಪಾಲಿಸುವ ಹಾಗೂ ರಕ್ಷಿಸುವವನು.ಆದ್ದರಿಂದ ‘ಕಾಮಪಾಲನು’. ಪೂರ್ಣಕಾಮನಾಗಿರುವ ಸ್ವಭಾದವನಾಗಿರುವದರಿಂದ ‘ಕಾಮಿಯು’. ಸುಂದರತರವಾದ ದೇಹವನ್ನು ವಹಿಸುವವನಾದ್ದರಿಂದ ‘ಕಾಂತನು’.ಶ್ರುತಿ, ಸ್ಮೃತಿ ಇತ್ಯಾದಿ ಶಾಸ್ತ್ರಗ್ರಂಥ (ಆಗಮ)ವನ್ನು ರಚಿಸಿದವನು. ಪ್ರಳಯದ ನಂತರ ಪುನಃ ಕೃತಯುಗವನ್ನು ಪ್ರಾರಂಭಿಸುವವನು. ಆದ್ದರಿಂದ ‘ಕೃತಾಗಮನು’ ಎನಿಸಿದ್ದಾನೆ. ನಿರ್ದೇಶಿಸಲಾಗದ ಶರೀರವಿರುವವನು. ವಿವರಿಸಲಾಗದ, ಸ್ವರೂಪನು. ಕರಣಗಳಾದ ದೇಹ, ಮನಸ್ಸು ಮತ್ತು ಬುದ್ಧಿಗಳನ್ನು ಮೀರಿರುವುದನ್ನು ವರ್ಣಿಸಲಾಗುವದಿಲ್ಲ. ತಿಳಿಸಿ ಹೇಳಲಾಗುವದಿಲ್ಲ. ಈತನ ಕಾಂತಿ,ತೇಜಸ್ಸು,ಚೈತನ್ಯವು ಭೂಮಿ, ಅಂತರಿಕ್ಷಗಳನ್ನು ವ್ಯಾಪಿಸಿಕೊಂಡಿರುವದರಿಂದ ಈತನು ‘ವಿಷ್ಣುವು’. ವಿಶಿಷ್ಟಗತಿಯೇ ಮುಂತಾದವುಗಳುಳ್ಳವನಾದ್ದರಿಂದ ‘ವೀರನು’. ವ್ಯಾಪಿಸುಕೊಂಡಿರುವುದರಿಂದಲೂ, ನಿತ್ಯವಾಗಿರುವುದರಿಂದಲೂ, ದೇಶ, ಕಾಲವಸ್ತುಗಳ ಪರಿಚ್ಚೇದವಿಲ್ಲದಿರುವದರಿಂದಲೂ ‘ಅನಂತನು’. ದಿಗ್ವಿಜಯ ಕಾಲದಲ್ಲಿ ಹೇರಳವಾಗಿ ಧನವನ್ನು ಗೆದ್ದುಕೊಂಡನು ಆದ್ದರಿಂದ  ‘ಧನಂಜಯನು’ಎಂದರೆ ಅರ್ಜುನನು. ‘ಪಾಂಡವರಲ್ಲಿ ಧನಂಜಯನು (ಗೀ.೧೦-೩೭)ಎಂಬ ಭಗವದ್ವಚನದಿಂದ ‘ಧನಂಜಯನು.

ವೈಶಿಷ್ಟ್ಯತೆ:-

300x250 AD

ಇದನ್ನು ಜ್ಯೇಷ್ಠಾ ನಕ್ಷತ್ರದ ೨ನೇ ಪಾದದವರು ಪ್ರತಿನಿತ್ಯ ೧೧ ಬಾರಿ ಹೇಳಿಕೊಳ್ಳುವ ವಿಷ್ಣು ಸಹಸ್ರನಾಮದ ಶ್ಲೋಕ.ಇದನ್ನು ಇತರರೂ ಪಠಿಸಬಹುದಾಗಿದೆ. ಕೆಟ್ಟ ಬಯಕೆಗಳನ್ನು (ಕಾಮನೆ)ದೂರ ಅಟ್ಟಲು. ಕಾಮನೆಗಳಿಂದ ಮನಸ್ಸು ವಿಕಾರವಾಗದಂತೆ, ಮನೋರೋಗಗಳಿಂದ ಮುಕ್ತವಾಗಲು, ಉತ್ತಮ ಆಕಾಂಕ್ಷೆ, ಸದಾಶಯಗಳು ಆ ಸ್ಥಳದಲ್ಲಿ ಮೂಡಿಬರುವಂತೆ ಮಾಡಲು ಎಲ್ಲರೂ ಹೇಳಿಕೊಳ್ಳಬೇಕಾದ ಸ್ತೋತ್ರವೇ ಮೇಲಿನದು ಇರುತ್ತದೆ.

(ಸಂ :-ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ.)

Share This
300x250 AD
300x250 AD
300x250 AD
Back to top