ಯಲ್ಲಾಪುರ: ಮೂವತ್ತೊಂಬತ್ತು ವರ್ಷಗಳ ಕಾಲ ಸುಧೀರ್ಘವಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಕಾರ್ಯನಿರ್ವಹಿಸಿದ ಪುಷ್ಪಾ ನಾಯರ್ ಅವರ ಸೇವೆ ಮಾದರಿಯಾಗಿದೆ ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಹೇಳಿದರು.
ಅವರು ಪಟ್ಟಣದ ಪಿಎಲ್ಡಿ ಬ್ಯಾಂಕ್ ಸಭಾಭವನದಲ್ಲಿ ಬುಧವಾರ ನಿವೃತ್ತಿ ಹೊಂದಿದ ವ್ಯವಸ್ಥಾಪಕಿ ಪುಷ್ಪಾ ನಾಯರ್ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಸಿಬ್ಬಂದಿ ಹಾಗೂ ಸದಸ್ಯರೊಂದಿಗೆ ಉತ್ತಮ ಬಾಂದವ್ಯಹೊಂದಿ ಪ್ರೀತಿ ವಿಶ್ವಾಸದಿಂದ ಕಾರ್ಯನಿರ್ವಹಿಸಿದಾಗ ಬ್ಯಾಂಕು ಉತ್ತಮವಾಗಿ ಕೆಲಸ ನಿರ್ವಹಿಸಲು ಸಾಧ್ಯ ಎಂದರು.
ಸನ್ಮಾನ ಸ್ವೀಕರಿಸಿ ಮುಖ್ಯ ಕಾರ್ಯನಿರ್ವಾಹಕಿ ಪುಪ್ಪಾ ನಾಯರ್ ಮಾತನಾಡಿ, ಸುಧೀರ್ಘ ಅವಧಿಯಲ್ಲಿ ಸೇವೆ ಸಲ್ಲಿಸಲು ಕಾರಣೀಕರ್ತರಾದ ಆಡಳಿತ ಮಂಡಳಿ,ನಿರ್ದೇಶಕರು,ಸದಸ್ಯರ ಸಹಕಾರ ಮರೆಯಲಾಗದು ಎಂದರು.
ಟಿಎಂಎಸ್ ಕಾರ್ಯನಿರ್ವಾಹಕ ಸಿ.ಎಸ್.ಹೆಗಡೆ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗ.ನಾ.ಕೋಮಾರ, ಉಪಾಧ್ಯಕ್ಷ ನಾಗೇಂದ್ರ ಭಟ್ಟ, ನಿರ್ದೇಶಕರಾದ ಸದಾನಂದ ಭಟ್ಟ ಮಲವಳ್ಳಿ, ಮಹಾಬಲೇಶ್ವರ ಗುಳ್ಳಾಪುರ,ಎನ್.ಸಿ.ಗಾಂವ್ಕಾರ, ಲಾರೆನ್ಸ್ ಸಿದ್ದಿ
ರಾಮಕೃಷ್ಣ ಅಳ್ವೆಗದ್ದೆ, ಪ್ರಮುಖರಾದ ಎಂ.ಎನ್. ಭಟ್ಟ, ಕೃಷ್ಣ ಭಟ್ಟ ಅಗ್ಗಾಶಿಮನೆ, ಜ್ಯೋತಿ,ವಿ.ಆರ್. ನಾಯ್ಕ, ಎಂ.ಎಸ್.ಹೆಗಡೆ,ಉಮೇಶ ಕಳಚೆ, ಗಣಪತಿ, ಪಿಎಲ್ಡಿ ಬ್ಯಾಂಕಿನ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕಿ ಉಷಾ ಎಸ್. ನೂತನ ಮುಖ್ಯಕಾರ್ಯನಿರ್ವಾಹಕ ಟೈಸನ್
ಮುಂತಾದವರು ಭಾಗವಹಿಸಿದ್ದರು.