Slide
Slide
Slide
previous arrow
next arrow

ಡಿಸೆಂಬರ್ ಮಾಹೆಯ ಹಾಲಿನ ಪ್ರೋತ್ಸಾಹಧನ ಜಮಾ: ಕೆಶಿನ್ಮನೆ ಮಾಹಿತಿ

300x250 AD

ಶಿರಸಿ: ಡಿಸೆಂಬರ್-2023ನೇ ಮಾಹೆಯ ರೂ.5 ಪ್ರೋತ್ಸಾಹಧನವು ಜು.22,ಸೋಮವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉಪಾಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.

ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು ಇದೇ ಜು.20ರಂದು ಅಕ್ಟೋಬರ್ ಹಾಗೂ ನವೆಂಬರ್-2023‌ ನೇ ಮಾಹೆಗಳ ಪ್ರೋತ್ಸಾಹಧನ ಜಮಾ ಆಗಿದ್ದು, ಈಗ ಡಿಸೆಂಬರ್-2023 ನೇ ಮಾಹೆಯ ರೂ. 5 ಪ್ರೋತ್ಸಾಹಧನ ಕೂಡ ಹಾಲು ಉತ್ಪಾದಕರ ರೈತರ ಖಾತೆಗೆ ಜಮಾ ಆದಂತಾಗಿದೆ ಎಂದರು. ಇನ್ನುಳಿದಂತೆ 2023-2024 ನೇ ಸಾಲಿನಲ್ಲಿ ಜನವರಿ ಹಾಗೂ ಫೆಬ್ರವರಿ ಮಾಹೆಗಳು ಮತ್ತು 2024-2025 ನೇ ಸಾಲಿನಲ್ಲಿ ಮೇ ಹಾಗೂ ಜೂನ್ ಮಾಹೆಗಳ ರೂ. 5 ಪ್ರೋತ್ಸಾಹಧನ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಸರ್ಕಾರದಿಂದ ಜಮಾ ಆಗಬೇಕಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಕೂಡ ಮನವಿ ಸಲ್ಲಿಸಲಾಗಿದ್ದು, ಬಾಕಿ ಇರುವ ಮಾಹೆಗಳ ರೂ.5 ಪ್ರೋತ್ಸಾಹಧನ ‌ಕೂಡ ಶ್ರೀಘ್ರವೇ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗುವ ನೀರಿಕ್ಷೆಯಿದೆ ಎಂದು ಮಾಹಿತಿ ನೀಡಿದರು. ಡಿಸೆಂಬರ್-2023 ನೇ ಮಾಹೆಯ ರೂ.5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.

300x250 AD
Share This
300x250 AD
300x250 AD
300x250 AD
Back to top