ಸಿದ್ದಾಪುರ: ವಿಪರೀತ ಗಾಳಿ-ಮಳೆಯಿಂದಾಗಿ ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಗುಲ್ಲುಮನೆಯ ಶಿವಾನಂದ ನಾರಾಯಣ ನಾಯ್ಕ ಅವರ ಕೊಟ್ಟಿಗೆಮನೆಯ ಮೇಲೆ ಕಾಡು ಜಾತಿಯ ಮರವೊಂದು ಬಿದ್ದು ಒಂದು ಆಕಳು ಮಣಕ ಹಾಗೂ ಒಂದು ಹೋರಿ ಸಾವನ್ನಪ್ಪಿದ್ದು ಎರಡು ಆಕಳು ಅಪಾಯದಿಂದ ಪಾರಾಗಿದೆ. ಹೆಗ್ಗರಣಿ ಸಮೀಪದ ಉಂಚಳ್ಳಿಯ ಯಂಕಿ ಚೌಡು ಗೌಡ ಅವರ ವಾಸ್ತವ್ಯದ ಕಚ್ಚಾಮನೆ ಕುಸಿದು ಬಿದ್ದಿದೆ.
ಕೊಟ್ಟಿಗೆ ಮೇಲೆ ಬಿದ್ದ ಮರ: ಜಾನುವಾರುಗಳ ಸಾವು
