ಕಾರವಾರ: ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ, ಕುಟುಂಬ ಯೋಜನೆ ಅಳವಡಿಕೆಯ ಪ್ರತಿ ದಂಪತಿಗಳಿಗೆ ಹೆಮ್ಮೆ ತರುತ್ತದೆ” ಎಂಬ ಘೋಷ ವಾಕ್ಯದೊಂದಿಗೆ ಸಮುದಾಯ ಜಾಗೃತೀಕರಣ ಪಾಕ್ಷಿಕ ಜೂನ್ 27 ರಿಂದ ಜುಲೈ 10ರ ರವರೆಗೆ ಹಾಗೂ ಸೇವಾ ಪಾಕ್ಷಿಕ ಜು.1ರಿಂದ ಜು. 24ರವರೆಗೆ ವಿಶ್ವ ಜನಸಂಖ್ಯಾ ದಿನಾಚರಣೆ'” ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಆಚರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ ಕೆ. ತಿಳಿಸಿದ್ದಾರೆ.
ಕುಟುಂಬ ಕಲ್ಯಾಣ ಯೋಜನೆಗಳು ಸಮುದಾಯ ಜಾಗೃತೀಕರಣ ಪಾಕ್ಷಿಕ ಕಾರ್ಯಕ್ರಮದಡಿ ಜು.11 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಜನಸಂಖ್ಯಾ ನಿಯಂತ್ರಣ ಕುರಿತು ಸಾರ್ವಜನಿಕ ಅರಿವು ಮೂಡಿಸಲಾಗುವುದು. ಕುಟುಂಬ ಯೋಜನೆಗೆ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳನ್ನು ಪಾಲಿಸಲಾಗುತ್ತಿದೆ. ಮಹಿಳೆಯರಿಗೆ ತಾತ್ಕಾಲಿಕ ಗರ್ಭ ನಿರೋಧಕ ಮಾತ್ರೆಗಳು, ಪಿ.ಪಿ.ಐ.ಯು.ಸಿ.ಡಿ, ಪಿ.ಎ.ಐ.ಯು.ಸಿಡಿ, ಛಾಯಾ ಹಾಗೂ ಅಂತರ ಚುಚ್ಚುಮದ್ದುಗಳಿವೆ. ಪುರುಷರಿಗಾಗಿ ನಿರೋಧಗಳಿವೆ. ಈ ವಿಧಾನಗಳನ್ನು ಅನುಸರಿಸುವುದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಜನನದ 3ವರ್ಷ ಅಂತರವನ್ನು ಕಾಪಾಡಿಕೊಳ್ಳಬಹುದು. ಶಾಶ್ವತ ವಿಧಾನದಲ್ಲಿ ಮಹಿಳೆಯರಿಗಾಗಿ ಲ್ಯಾಪ್ರೋಸ್ಕೋಫಿಕ್ ಮತ್ತು ಟ್ಯೂಬೆಕ್ಟೋಮಿ ಎಂಬ ಎರಡು ವಿಧಾನಗಳಿವೆ. ಪುರುಷರಿಗಾಗಿ ನೋಸ್ಮಾರೈಲ್ ವ್ಯಾಸೆಕ್ಟೋಮಿ ವಿಧಾನಗಳಿವೆ. ಎರಡು ಮಕ್ಕಳ ನಂತರ ಶಾಶ್ವತವಾಗಿ ಶಸ್ತ್ರಚಿಕಿತ್ಸೆ ತಡೆಗಟ್ಟಬಹುದು ಮತ್ತು ಜನಸಂಖ್ಯಾ ಸ್ಫೋಟದಿಂದ ಆಗುವ ಸಮಸ್ಯೆಗಳನ್ನು ತಡೆಗಟ್ಟಬಹುದು. ಮಹಿಳೆಯರಿಗಾಗಿ ಲ್ಯಾಪ್ರೋಸ್ಕೋಪಿಕ್ ಮತ್ತು ಟ್ಯೂಬೆಕ್ಟೋಮಿ ಮಾಡಿಸಿಕೊಳ್ಳುವ ಪ್ರತಿ ಬಿ.ಪಿ.ಎಲ್ ಕಾರ್ಡ್ ಫಲಾನುಭವಿಗಳಿಗೆ ರೂ. 600/-ಗಳನ್ನು ಹಾಗೂ ಎ.ಪಿ.ಎಲ್ ಕಾರ್ಡ್ ಫಲಾನುಭವಿಗಳಿಗೆ ರೂ. 250/- ಗಳನ್ನು ಮತ್ತು ಪುರುಷರು ಮಾಡಿಸಿಕೊಳ್ಳುವ ನೋಸ್ಕಾಲ್ಲೆಲ್ ವ್ಯಾಸೆಕ್ಟೋಮಿ ಫಲಾನುಭವಿಗಳಿಗೆ ರೂ. 1100/- ಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಲಾಗುವುದು.
ಸದರಿ ಮಾಸಿಕ ಆಚರಣೆಯಲ್ಲಿ ಜಿಲ್ಲೆಯಾದ್ಯಂತ ಕೈಗೊಳ್ಳಬಬೇಕಾದ ಶಾಶ್ವತ ಮತ್ತು ತಾತ್ಕಾಲಿಕ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ಯೋಚಿತ ಗುರಿಗಳನ್ನು ತಾಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಆದ್ದರಿಂದ ಜಿಲ್ಲೆಯ ಆಸಕ್ತ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಮಹಿಳಾ/ಪರುಷ ಕ್ಷೇತ್ರ ಅಧಿಕಾರಿಗಳು ಹಾಗೂ ಆಶಾಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.