Slide
Slide
Slide
previous arrow
next arrow

ಶ್ರೀ ವಿಷ್ಣುಸಹಸ್ರನಾಮ ಶ್ಲೋಕ           

300x250 AD

ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾ ದಿಜಃ|
ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ|

ಭಾವಾರ್ಥ:-

 ಪ್ರಕಾಶವೊಂದೇ ಈತನ ಸ್ವರೂಪವಾಗಿದ್ದರಿಂದ   ‘ಭ್ರಾಜಿಷ್ಣು’ ಭೋಜ್ಯ (ಭಕ್ಷ್ಯ) ರೂಪದಿಂದ ಪ್ರಕೃತಿಯು ಅಥವಾ ಮಾಯೆಯು ಭೋಜನವೆನಿಸಿರುತ್ತದೆ.ಈ ಪ್ರಕೃತಿಯನ್ನು ಪುರುಷ ರೂಪದಿಂದ ಭುಂಜಿಸುತ್ತಾನಾದ್ದರಿಂದ ‘ಭೋಕ್ತ’ನಿವನು.ಹಿರಣ್ಯಾಕ್ಷನೇ ಮುಂತಾದವರನ್ನು(ಸಹತೇ)  ಸೋಲಿಸುತ್ತನಾದ್ದರಿಂದ ‘ಸಹಿಷ್ಣು’ ಹಿರಣ್ಯಗರ್ಭನ ರೂಪದಿಂದ ಜಗತ್ತಿನ(ಸೃಷ್ಠಿಯ)ಆದಿಯಲ್ಲಿ ತಾನೇ ಹುಟ್ಟುತ್ತಾನೆ.ಆದ್ದರಿಂದ ‘ಜಗದಾದಿಜ’ನು .ಅಘವು ಎಂದರೆ ಪುಣ್ಯ ಪಾಪ  ಲಕ್ಷಣವಾದದ್ದು ಈತನಿಗೆ ಇಲ್ಲವಾದ್ದರಿಂದ ‘ಅನಘನು’ ಜ್ಞಾನ,ವೈರಾಗ್ಯ, ಐಶ್ವರ್ಯಾದಿ ಗುಣಗಳಿಂದ ಸರ್ವವನ್ನೂ,ವಿಶ್ವವನ್ನೇ ಗೆದ್ದವನಾದ್ದರಿಂದ ‘ವಿಜಯನು’ ಸ್ವಭಾವದಿಂದಲೇ ಸರ್ವಪ್ರಾಣಿಗಳಿಗಿಂತಲೂ (ಅತೀತ)ಮಿಗಿಲಾಗಿರುತ್ತಾನೆ.ಆದ್ದರಿಂದ ‘ಜೇತೃ’. ವಿಶ್ವವು ಈತನಿಗೆ ಯೋನಿ,ಅಥವಾ ವಿಶ್ವನೂ (ಎಲ್ಲವೂ) ಯೋನಿಯೂ(ಕಾರಣರೂಪನೂ) ಆಗಿರುವದರಿಂದ ‘ವಿಶ್ವಯೋನಿ’ ಮತ್ತೆ ಮತ್ತೆ ಶರೀರಗಳಲ್ಲಿ ಕ್ಷೇತ್ರಜ್ಞರೂಪದಿಂದ ವಾಸಮಾಡಿಕೊಂಡಿರುತ್ತಾನೆ.ಆದ್ದರಿಂದ ಈತನು ‘ಪುನರ್ವಸು’.

300x250 AD

ಈ ಶ್ಲೋಕದ ವೈಶಿಷ್ಟ್ಯ:-

ಹೊಟ್ಟೆನೋವು,ಅಜೀರ್ಣ, ವಾಂತಿ,ಕರಳುಬೇನೆ, ಮಕ್ಕಳಿಗೆ ಜಂತು ಉಪದ್ರವ, ತಿಂದ ಅನ್ನ ಮೈಗೆ ಹತ್ತದಿರುವುದು, ಅಪಚನ ಮುಂತಾದ ಉದರ ಶೂಲೆ ಸಂಬಂಧದ ಎಲ್ಲಾ ರೋಗಗಳ ನಿವಾರಣೆಗೆ ಈ ಸ್ತೋತ್ರವನ್ನು ಪ್ರತಿ ನಿತ್ಯ 11ಬಾರಿ ಹೇಳಿ ಕೊಳ್ಳಬೇಕು. ಹಾಗೂ ರೋಹಿಣಿ ನಕ್ಷತದ 4 ನೇ ಪಾದದಲ್ಲಿ ಜನಿಸಿದವರು ಪ್ರತಿ ನಿತ್ಯವೂ 11ಬಾರಿ ಹೇಳಿಕೊಳ್ಳಬೇಕು. (ಸಂಗ್ರಹ:-ಡಾ. ಚಂದ್ರಶೇಖರ.ಎಲ್.ಭಟ್.ಬಳ್ಳಾರಿ)

Share This
300x250 AD
300x250 AD
300x250 AD
Back to top