Slide
Slide
Slide
previous arrow
next arrow

ವಿಷ್ಣು ಸಹಸ್ರನಾಮ ಸ್ತೋತ್ರ

300x250 AD

“ಅಸಂಖ್ಯೇಯೋ ಅಪ್ರಮೇಯಾತ್ಮಾವಿಶಿಷ್ಟಃ ಶಿಷ್ಟಕೃಚ್ಛುಚಿಃ|
ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿ ಸಾಧನಃ”||

ಶ್ಲೋಕದ ಭಾವಾರ್ಥ:-

‘ಅಸಂಖ್ಯೇಯಃ’ ಎಂದರೆ ಎಣಿಸಲಿಕ್ಕಾಗದಷ್ಟು ರೂಪಗಳಿರುವವನು.ಇಲ್ಲಿರುವ ಸ್ಥಾವರ, ಜಂಗಮ ವಸ್ತುಗಳೆಲ್ಲವೂ ಅವನೇ ಆಗಿದ್ದಾನೆ. ಅಥವಾ ಯಾವನಲ್ಲಿ ಸಂಖ್ಯೆಯು ಎಂದರೆ ನಾಮ,ರೂಪ,ಭೇದ ಮುಂತಾದದ್ದು ಇಲ್ಲವೋ ಅವನು ಸಂಖ್ಯೆ ಇಲ್ಲದವನು.ಆದ್ದರಿಂದ
ಅಸಂಖ್ಯೇಯನು ಪ್ರಮಾಣದಿಂದ ಗೊತ್ತು ಮಾಡುವುದಕ್ಕೆ ಆಗದ ಆತ್ಮವು ಅಥವಾ ಸ್ವರೂಪವು ಈತನದ್ದು. ಆದ್ದರಿಂದ ಇವನು ಅಪ್ರಮೇಯಾತ್ಮನು.ಅಂದರೆ ಎಲ್ಲವನ್ನೂ ಮೀರಿದವನು, ಆದ್ದರಿಂದ ‘ವಿಶಿಷ್ಟನು ಶಿಷ್ಟವು’ ಎಂದರೆ ಶಾಸನವು ಅದನ್ನು ಆಳುವಿಕೆಯನ್ನು ಮಾಡುತ್ತಾನೆ. ಆದ್ದರಿಂದ ಶಿಷ್ಟರನ್ನಾಗಿ ಮಾಡುತ್ತಾನೆ, (ಪಾಲಿಸುತ್ತಾನೆ) ಅದರಿಂದಾಗಿ ‘ಶಿಷ್ಟಕೃತ್’ಎಂದೂ ಅರ್ಥೈಸಬಹುದು. ಶುಚಿಯು ಅಂದರೆ (ಅತ್ಯಂತ) ಪರಿಶುದ್ಧನು.’ಸಿದ್ಧಾರ್ಥನು’ ಅಂದರೆ ಪಡೆಯಬೇಕಾದ ಎಲ್ಲವನ್ನೂ ಪಡೆದವನು ಮತ್ತು ಸಾಧಿಸಬೇಕಾದ ಸರ್ವವನ್ನೂ ಸಾಧಿಸಿದವನು. ಸಂಕಲ್ಪವೆಂದರೆ ಬೌದ್ಧಿಕವಾಗಿ ಇಚ್ಛಿಸುವುದು ಅಥವಾ ಆಶಿಸುವುದು.ಯಾರು ತಾನು ಆಶಿಸುವೆಲ್ಲವನ್ನೂ ಪಡೆಯುತ್ತಾನೋ ಅಥವಾ ತಾನು ಇಚ್ಛಿಸುವುದೆಲ್ಲವನ್ನೂ ಕೂಡಲೇ ಗಳಿಸುತ್ತಾನೋ ಅವನು ‘ಸಿದ್ಧಸಂಕಲ್ಪನು’. ಕರ್ಮವನ್ನು ಅದಕ್ಕೆ ತಕ್ಕುದಾದಫಲವನ್ನು ಕೊಡುವವವನು.’ಸಿದ್ಧಿಸಾಧನಃ’ ಎಂದರೆ ತಾನು ಕೈಕೊಂಡ ಕಾರ್ಯಗಳನ್ನು ಸಾಧಿಸುತ್ತಾನೆ.

300x250 AD

ಈ ಮೇಲಿನ ಸ್ತೋತ್ರವನ್ನು ಪುನರ್ವಸು 3ನೇ ಪಾದದವರು ಹೇಳಿಕೊಳ್ಳಬಹುದಾದ ವಿಷ್ಣು ಸಹಸ್ರನಾಮದ ಒಂದು ಸ್ತೋತ್ರವಾಗಿರುತ್ತದೆ. ಆದರೆ ಯಾವುದೇ ನಕ್ಷತ್ರದದವರು ಈ ಸ್ತೋತ್ರವನ್ನು ಪ್ರತಿದಿನ ಹೇಳಿಕೊಳ್ಳುವದರಿಂದ ನಮ್ಮ ಎಲ್ಲಾ ಸಂಕಲ್ಪಗಳು ಸಿದ್ಧಿಸುತ್ತವೆ. ನಾವು ಅಂದುಕೊಂಡಂತಹ ಎಲ್ಲ ಕಾರ್ಯಗಳು,ಕೈಹಿಡಿದ ಕೆಲಸ ಕಾರ್ಯಗಳು ಫಲಪ್ರದವಾಗುತ್ತದೆ.
(ಸಂ:-ಡಾ. ಚಂದ್ರಶೇಖರ ಎಲ್ ಭಟ್.ಬಳ್ಳಾರಿ)

Share This
300x250 AD
300x250 AD
300x250 AD
Back to top