Slide
Slide
Slide
previous arrow
next arrow

ಜು‌.2ಕ್ಕೆ ಗವ್ಯೋತ್ಪನ್ನ ವಸ್ತುಗಳ ಲೋಕಾರ್ಪಣೆ

300x250 AD

ಶಿರಸಿ: ಗೋ ಸೇವಾ ಗತಿವಿಧಿ ಶಿರಸಿ ವಿಭಾಗ ಹಾಗೂ ಶ್ರೀರಾಮಕೃಷ್ಣ ಕಾಳಿಕಾ ಮಠ ಭಕ್ತವೃಂದದ ಸಹಕಾರದಲ್ಲಿ ಶ್ರೀದೇವೀ ಮಹಾತ್ಮೆ ಕೀರ್ತನೆ ಹಾಗೂ ವಿವಿಧ ಗವ್ಯೋತ್ಪನ್ನ ವಸ್ತುಗಳ ಲೋಕಾರ್ಪಣೆ ಜು.2 ಮಧ್ಯಾಹ್ನ 3.30ಕ್ಕೆ ಅಂಬಾಗಿರಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಉಪಾಧ್ಯಕ್ಷ ಜಿ.ಎಂ.ಮುಳಖಂಡ, ಕ್ಯಾಂಪ್ಕೊ ನಿರ್ದೇಶಕ ಶಂಭುಲಿಂಗ ಹೆಗಡೆ, ಆರ್‌ಎಸ್ಎಸ್ ವಿಭಾಗ ವ್ಯವಸ್ಥಾ ಪ್ರಮುಖ ಸತ್ಯನಾರಾಯಣ ಭಟ್ಟ ಭಾಗವಹಿಸುವರು. ಗವ್ಯೋತ್ಪನ್ನಗಳ ಪರಿಚಯವನ್ನು ದತ್ತಾತ್ರೆಯ ಭಟ್ಟ ಮಾಡಿಕೊಡಲಿದ್ದಾರೆ. ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ವಹಿಸಿಕೊಳ್ಳಲಿದ್ದಾರೆ. ಬಳಿಕ ನಾರಾಯಣ ದಾಸ್ ಅವರಿಂದ ಕೀರ್ತನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top