Slide
Slide
Slide
previous arrow
next arrow

ಸಾಮಾನ್ಯ ಸಭೆ: ಪಟ್ಟಣ ಪಂಚಾಯತ್ ನೌಕರರ ಮೇಲೆ ಸಾರ್ವಜನಿಕರ ಆರೋಪ

300x250 AD

ಸಿದ್ದಾಪುರ: ಪಟ್ಟಣದ ಪಪಂ ಸಭಾಭವನದಲ್ಲಿ ಸೋಮವಾರ ಆಡಳಿತಾಧಿಕಾರಿ ತಹಸೀಲ್ದಾರ ಮಧುಸೂಧನ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಪಪಂ ಸಾಮಾನ್ಯ ಸಭೆ ನಡೆಯಿತು.

ಪಪಂ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಬರುತ್ತಿದ್ದು ಏಜಂಟರ್ ಮೂಲಕ ಬಂದರೆ ಮಾತ್ರ ಪಪಂ ಕೆಲಸವಾಗುತ್ತದೆ ಎಂದು ಹೇಳಲಾಗುತ್ತಿದೆ ಕೆಲವು ನೌಕರರ ವರ್ತನೆ ಅದೇ ರೀತಿಯಲ್ಲಿದೆ ಎಂದು ಹಿರಿಯ ಸದಸ್ಯ ಕೆ.ಜಿ.ನಾಯ್ಕ ಹಣಿಜೀಬೈಲ್ ಆರೋಪಿಸಿದರು.
ಪಪಂ ವ್ಯಾಪ್ತಿಯಲ್ಲಿ 4500ಕ್ಕಿಂತ ಹೆಚ್ಚು ಖಾಸಗಿ ಆಸ್ತಿಗಳಿದೆ ಆದರೆ ಪಪಂ ದಾಖಲೆಯಲ್ಲಿ ಕೇವಲ 1300 ಆಸ್ತಿಗಳಿವೆ. ಉಳಿದ ಆಸ್ತಿಗಳ ಆದಾಯ ಪಪಂಗೆ ಬರುತ್ತಿಲ್ಲ ಇದಕ್ಕೆ ಕಾರಣ ಇಲ್ಲಿಯ ನೌಕರರ ವರ್ತನೆ. ಯಾರಾದರೂ ಆಸ್ತಿ ನೊಂದಣಿ ಬಗ್ಗೆ ಬಂದರೆ ಇಲ್ಲದ ಕಾನೂನನ್ನು ತೋರಿಸಿ ಪುನಃ ಅವರು ಪಪಂಗೆ ಬರದಂತೆ ಮಾಡುತ್ತಾರೆ ಅವರು ಅಕ್ರಮ ಕಟ್ಟಡ ಕಟ್ಟಿಕೊಂಡು ವಾಸ ಮಾಡುತ್ತಾರೆ ಹೀಗಾಧರೆ ಪಪಂಗೆ ಆದಾಯ ಹೇಗೆ ಬರುತ್ತದೆ?? ಇದನ್ನು ತಪ್ಪಿಸ ಬೇಕಾದರೆ ಪಪಂಗೆ ಬರುವ ಸಾರ್ವಜನಿಕರಿಗೆ ಸರಿಯಾದ ತಿಳುವಳಿಕೆ ನೀಡಿ ಆಸ್ತಿನೊಂದಣಿ ಸರಳವಾಗುವಂತೆ ಮಾಡಬೇಕು.ಫಾರಂ ನಂ.3 ಬಗ್ಗೆ ಸಾಕಷ್ಟು ಗೊಂದಲವಿದೆ ಆದರೆ ಕೆಲವರಿಗೆ ಸುಲಭವಾಗಿ ಆಗುತ್ತದೆ ಇದು ಜನರ ಸಂಶಯಕ್ಕೆ ಕಾರಣವಾಗುತ್ತಿದೆ ಇದಕ್ಕೆ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು ಎಂದು ಎಂದು ಕೆ.ಜಿ.ನಾಯ್ಕ ಹೇಳಿದರು.
ಪಪಂಗೆ ಕೆಲವು ವ್ಯಕ್ತಿಗಳು ಬರುತ್ತಾರೆ ಅವರು ತಾವು ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದೆವೆ ಎಂದು ಹೇಳುತ್ತಾರೆ ನಮ್ಮದು ಸಮಾಜಸೇವೆ ಎಂದು ಹೇಳುತ್ತಾರೆ ನಾವು ಸಾಕಷ್ಟು ಬಾರಿ ಅವರಿಗೆ ಹೇಳಿದ್ದೆವೆ ಆದರೆ ಪ್ರಯೋಜನವಿಲ್ಲವಾಗಿದೆ ಎಂದು ಪಪಂ ಅಧಿಕಾರಿ ಸಭೆಗೆ ತಿಳಿಸಿದರು.
ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೆವಹಿಸಲಾಗಿದೆ ಅವರು ಸರ್ವೆ ನಡೆಸಲು ಬಂದಾಗ ಅವರಿಗೆ ಹಾಲಿ ಇರುವ ಬೀದಿ ದೀಪಗಳ ಬಗ್ಗೆ ಮಾಹಿತಿ ನೀಡದೆ ಹಿಂದಿನ ಮಾಹಿತಿ ನೀಡಲಾಗಿದೆ. ಹಾಲಿ 1594 ಬೀದಿದೀಪಗಳಿದ್ದು ಅವರ ಸರ್ವೆ ಪ್ರಕಾರ 1372 ಎನ್ನುತ್ತಾರೆ ಉಳಿದ ದೀಪಗಳ ನಿರ್ವಹಣೆ ಯಾರೂ ಮಾಡಬೇಕು ಅಧಿüಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ ಇಂತಹ ಪರಿಸ್ಥಿತಿಗಳು ಉದ್ಭವಿಸುತ್ತದೆ ಎಂದು ಸದಸ್ಯರು ಕಿಡಿಕಾರಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ ಸದಸ್ಯರಾದ ವಿನಯ ಹೊನ್ನೆಗುಂಡಿ,ರವಿಕುಮಾರ ನಾಯ್ಕ,ನಂದನ ಬೋರ್ಕರ್, ವೆಂಕೋಬಾ, ಯಶೋಧಾ ಮಡಿವಾಳ, ಕವಿತಾ ಹೆಗಡೆ,ಚಂದ್ರಕಲಾ ನಾಯ್ಕ, ರಾಧಿಕಾ ಕಾನಗೋಡ, ಪಪಂ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top