ಸಿದ್ದಾಪುರ: ಪತಂಜಲಿ ಯೋಗ ಸಮಿತಿ ಮತ್ತು ಮಹಿಳಾ ಪತಂಜಲಿ ಯೋಗ ಸಮಿತಿ ಸಿದ್ದಾಪುರ ಇದರ ಸಹಯೋಗದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇದೇ ಬರುವ ಜೂನ್ 17 ರಿಂದ 21ರವರೆಗೆ ಪ್ರತಿದಿನ ಮುಂಜಾನೆ 5.30 ರಿಂದ 7.00 ರ ವರೆಗೆ ಸಿದ್ದಾಪುರದ ರಾಘವೇಂದ್ರ ಮಠದಲ್ಲಿ ಉಚಿತ ಯೋಗ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಮತ್ತು 21ರಂದು 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುವುದು ಎಂದು ಪತಂಜಲಿ ಯೋಗ ಸಮಿತಿ ಪ್ರಭಾರಿಗಳಾದ ಮಂಜುನಾಥ್ ನಾಯಕ್ ಮತ್ತು ಮಹಿಳಾ ಪ್ರಭಾರಿ ಶ್ರೀಮತಿ ವೀಣಾ ಆನಂದ್ ಶೇಟ್ ಇವರ ಉಪಸ್ಥಿತಿಯಲ್ಲಿ ಶಂಕರ ಮಠದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಬಾವಿ ಸಭೆಯಲ್ಲಿ ಸಮಿತಿಯ ಎಲ್ಲಾ ಯೋಗ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸಲಾಯಿತು.
ಪತಂಜಲಿ ಯೋಗ ಸಮಿತಿ ಸಿದ್ದಾಪುರ ಕಳೆದ 10 ವರ್ಷಗಳಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು ಪ್ರತಿ ವರ್ಷವೂ ಐದು ದಿನಗಳ ವಿಶೇಷ ಯೋಗ ಶಿಬಿರವನ್ನು ಆಯೋಜಿಸುತ್ತಾ ಬಂದಿರುತ್ತದೆ. ಮಕ್ಕಳು ಮಹಿಳೆಯರು ಪುರುಷರು ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಅವಕಾಶವಿರುತ್ತದೆ. ಸಿದ್ದಾಪುರ ಪಟ್ಟಣದಲ್ಲಿ ಮುರುಗರಾಜೇಂದ್ರ ಅಂದರ ಶಾಲೆ, ಟಿಎಂಎಸ್ ಸಭಾಭವನ, ನಿವೇದಿತಾ ಮಹಿಳಾ ಮಂಡಳಿ, ಶೃಂಗೇರಿ ಶಂಕರ ಮಠ ಮತ್ತು ಪ್ರಜಾಪಿತ ಈಶ್ವರಿ ವಿದ್ಯಾಲಯ ಸೇರಿ ಒಟ್ಟು 5 ಕಡೆಗಳಲ್ಲಿ ನಿರಂತರ ಉಚಿತ ಯೋಗ ತರಗತಿಗಳನ್ನು ಪ್ರತಿನಿತ್ಯ ನಡೆಯುತ್ತಿವೆ. ಹಳ್ಳಿಗಳಲ್ಲಿ ಯೋಗ ಶಿಬಿರಗಳನ್ನು ಆಯೋಜಿಸಿ ಎಲ್ಲರಿಗೂ ಯೋಗದ ಲಾಭ ಸಿಗುವಂತೆ ಮಾಡುತ್ತಿದ್ದೇವೆ. ಪತಂಜಲಿ ಯೋಗ ಸಮಿತಿ ಇಲ್ಲಿಯವರೆಗೆ 250 ಕ್ಕೂ ಹೆಚ್ಚು ಜನರಿಗೆ ಸಹಶಿಕ್ಷಕ ತರಬೇತಿ ನೀಡಿದ್ದು. ಸಾವಿರಾರು ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.ಅದರಂತೆ ಈ ವರ್ಷವೂ ಸಹ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿಕೊಡಬೇಕೆಂದು ವಿನಂತಿಸಿದ್ದಾರೆ.