ದಾಂಡೇಲಿ : ಕರವೇ (ನಾ) ಬಣದ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ ಅವರ 57ನೇ ಜನ್ಮದಿನದ ನಿಮಿತ್ತವಾಗಿ ಕರವೇ (ನಾ) ಬಣದ ದಾಂಡೇಲಿ ತಾಲೂಕು ಘಟಕದ ವತಿಯಿಂದ ನಗರದ ಕುಳಗಿ ರಸ್ತೆಯಲ್ಲಿರುವ ವನವಾಸಿ ಕಲ್ಯಾಣ ಕೇಂದ್ರದ ರುಕ್ಮಿಣಿ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ಮತ್ತು ಕಲಿಕಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ (ನಾ) ಬಣದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಅಶೋಕ್ ಮಾನೆ ಅವರು ಕರವೇ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಅವರು ನಾಡು, ನುಡಿ ಸಂರಕ್ಷಣೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡವರು. ಕನ್ನಡ ನಾಡು, ನುಡಿ, ಜಲದ ವಿಚಾರ ಬಂದಾಗ ಕ್ರಾಂತಿಕಾರಿ ಹೋರಾಟವನ್ನು ಮಾಡಿದ ನಾಡಿನ ಒಬ್ಬ ಆದರ್ಶ ಹಾಗೂ ಮಹಾನ್ ಕನ್ನಡ ಪರ ಹೋರಾಟಗಾರ ಎಂದರು. ಕನ್ನಡ ನಾಡು ನುಡಿಗಾಗಿ ಸದಾ ಸೇವೆಗೈಯುವ ನಾರಾಯಣ ಗೌಡ ಅವರ ಜನ್ಮದಿನದ ಈ ಸಂದರ್ಭದಲ್ಲಿ ರುಕ್ಮಿಣಿ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ವನವಾಸಿ ಕೇಂದ್ರದ ರುಕ್ಮಿಣಿ ಬಾಲಿಕ ವಸತಿ ನಿಲಯದಲ್ಲಿರುವ ಅಚ್ಚುಕಟ್ಟುತನ, ಶಿಸ್ತು ಶ್ಲಾಘನೀಯವಾಗಿದೆ ಎಂದರು
ಈ ಸಂದರ್ಭದಲ್ಲಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರಾದ ಮುಜಿಬಾ ಛಬ್ಬಿ, ಉಪಾಧ್ಯಕ್ಷರಾದ ರವಿ ಮಾಳಿ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ಶಹೆಜಾದಿ ಕುಲಷಾಪುರ್,ಕಾರ್ಯದರ್ಶಿ ಮಂಜುಳಾ ಆಲೂರ್, ಪ್ರಮುಖರುಗಳಾದ ಶಾಮ್ ಬೆಂಗಳೂರ್, ವಿಜಯ ಲಕ್ಷ್ಮೀ ಅಕ್ಕಿ, ಸಮೀರ ಅಂಕೋಲೇಕರ್,
ಉಮೇಶ್ ಬಡಿಗೇರ್, ಮುಸ್ತಾಕ್ ಶೇಖ, ಸೋಮು ಮತ್ತು ವಸತಿ ನಿಲಯದ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ರುಕ್ಮಿಣಿ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿಯ ಜೊತೆಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.