Slide
Slide
Slide
previous arrow
next arrow

‘ಜಿಲ್ಲೆಯ ಪರಿಸರ ಸಂಪತ್ತು ಪ್ರವಾಸಿಗರ ಮುಖ್ಯ ಆಕರ್ಷಣೆ, ಅದನ್ನು ಉಳಿಸಬೇಕಾಗಿದೆ’

300x250 AD

ಸಿದ್ದಾಪುರ : ನಮ್ಮ ತಾಲೂಕಿನಲ್ಲಿರುವ ನೈಸರ್ಗಿಕ ತಾಣವನ್ನು ನೋಡಲು ಹೊರ ಜಿಲ್ಲೆ, ರಾಜ್ಯ ಹಾಗೂ ದೇಶ ವಿದೇಶಗಳಿಂದ ಬರುತ್ತಾರೆ ಎಂದರೆ ಅದಕ್ಕೆ ಕಾರಣವೆ ಇಲ್ಲಿನ ಪರಿಸರ ಸಂಪತ್ತು. ಇದನ್ನ ಇನ್ನಷ್ಟು ಬೆಳೆಸಿ ಉಳಿಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಪರಿಸರ ಮುಂದಿನ ತಲೆಮಾರಿನವರಿಗೆ ಉಳಿಯುವ ಉದ್ದೇಶದಿಂದ ಇಂದಿನ ಕಾರ್ಯಕ್ರಮದ ಮೂಲಕ ನಮ್ಮ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸೋಣ ಎಂದು ದೊಡ್ಮನೆ ಗ್ರಾಮ ಪಂಚಾಯತ್ ಸದಸ್ಯ ಬೀರ ಗೌಡ ಹೇಳಿದರು.

ಅವರು ಸರಕಾರಿ ಪ್ರೌಢ ಶಾಲೆ ವಂದಾನೆಯಲ್ಲಿ ನಾಡದೇವಿ ಹೋರಾಟ ವೇದಿಕೆ ಹಾಗೂ ಶಾಲೆಯವರ ಸಹಕಾರದಲ್ಲಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಗಿಡ ನೆಟ್ಟು ಸಭಾ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು. ಮುಖ್ಯ ಅತಿಥಿ ಸಮಾಜ ಸೇವಕ ಹರೀಶ್ ನಾಯ್ಕ್ ಹಸ್ವಿಗುಳಿ ಮಾತನಾಡಿ ಇಂದು ನಮಗೆ ನಮ್ಮ ಸುತ್ತಮುತ್ತಲಿನಲ್ಲಿ ಸಾಕಷ್ಟು ಅರಣ್ಯ ಇದೆ ಎಂದು ಎನಿಸಬಹುದು ಆದರೆ ದಶಕಗಳು ಕಳೆದ ಮೇಲೆ ಹೆಚ್ಚಿದ ಜನಸಂಖ್ಯೆ ಹಾಗೂ ಪ್ಯಾಕ್ಟರಿ, ಪ್ಲಾಸ್ಟಿಕ್ ಉತ್ಪನ್ನ ಬಳಕೆಯಿಂದ ಅರಣ್ಯ ಅನಿವಾರ್ಯ ಎನಿಸಬಹುದು. ಶುದ್ಧ ಗಾಳಿ, ನೀರನ್ನು ಹಣ ನೀಡಿ ಖರೀದಿಸುವಂತ ಸ್ಥಿತಿ ಬರಬಹುದು. ಆ ಸ್ಥಿತಿಗೆ ತಲುಪಬಾರದು ಎಂದರೆ ನಾವು ಪ್ರತಿಯೊಬ್ಬರು ಇಂದಿನಿಂದಲೇ ಒಂದೊಂದು ಗಿಡ ನೆಡಬೇಕು ಅದರ ಪಾಲನೆ ಮಾಡಬೇಕು ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಈ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.
ಶಾಲಾ ಎಸ್‌ಡಿಎಂಸಿ ಸದಸ್ಯ ಸುಭಾಶ್ಚಂದ್ರ ಆರ್. ನಾಯ್ಕ್ ಮಾತನಾಡಿ ವಿವಿಧ ಸೌಲಭ್ಯ ಒದಗಿಸಲು ಜಮೀನು ನಿರ್ಮಿಸಲು ಅಂದು ಸರಕಾರವೆ ಮರ ಗಿಡ ಕಡಿಯಲು ಜನರಿಗೆ ಅವಕಾಶ ನೀಡಿತ್ತು. ಕ್ರಮೇಣ ಕಾಡು ನಾಶವಾಗುವ ಹಂತಕ್ಕೆ ತಲುಪಿದಾಗ ಪರಿಸರ ನಾಶದಿಂದ ವಾತಾವರಣದಲ್ಲಿ ವ್ಯತ್ಯಾಸ ಆರಂಭವಾಗತೊಡಗಿದ ಮೇಲೆ ಕೊಟ್ಟ ಅವಕಾಶ ಹಿಂಪಡೆದು ಕಾಡನ್ನು ಸಂರಕ್ಷಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಮೂಲಕ ಹಲವಾರು ಯೋಜನೆ ರೂಪಿಸಿ ಕಾಡನ್ನು ಬೆಳೆಸಲು ಮುಂದಾಗಿತು. ಹಾಗಾಗಿ ವನಮಹೋತ್ಸವ ಕಾರ್ಯಕ್ರಮ ಜಾರಿಗೆ ಬಂದಿತು ಇಂದು ನಾವು ಅರ್ಥ ಪೂರ್ಣವಾಗಿ ಈ ಕಾರ್ಯಕ್ರಮ ಆಚರಿಸುವ ಮೂಲಕ ಜನರಲ್ಲಿ ಪರಿಸರ ರಕ್ಷಣೆಯಿಂದಾಗುವ ಪ್ರಯೋಜನ ಕುರಿತು ಜಾಗೃತಿ ಮೂಡಿಸುವುದು ಅವಶ್ಯ ಇದೆ, ಪ್ರತಿಯೊಬ್ಬರೂ ಪರಿಸರ ರಕ್ಷಣೆ ಗೆ ಕೈಲಾದ ಕೊಡುಗೆ ನೀಡೋಣ ಎಂದರು.
ಶಾಲಾ ಆವರಣದಲ್ಲಿ ಕೈತೋಟ ಹಾಗೂ ಮರ ಗಿಡ ಬೆಳೆಸಲು ರಕ್ಷಣೆ ಮಾಡಲು ಶಿಕ್ಷಕರು ವಿದ್ಯಾರ್ಥಿಗಳು ಮಾತ್ರವಲ್ಲದೆ ಊರಿನ ಜನತೆ ಸಂಘಟನೆಗಳು ಪಾಲಕರು ಕೈ ಜೋಡಿಸಿದಾಗ ಸುಂದರ ವಾತಾವರಣ ನಿರ್ಮಾಣವಾಗಲು ಸಾದ್ಯ, ಪ್ರಕೃತಿ ವಿಕೋಪದ ಘಟನೆಗಳನ್ನ ನೋಡಿದಾಗ ಪರಿಸರ ರಕ್ಷಣೆ ಎಷ್ಟು ಅವಶ್ಯಕತೆ ಇದೆ ಎನ್ನುವುದು ನಮಗೆ ತಿಳಿಯುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯ ಟಿ.ಎನ್.ಗೌಡ ಹೇಳಿದರು.

300x250 AD

ನಾಡದೇವಿ ಹೋರಾಟ ವೇದಿಕೆಯ ಅನಿಲ್ ಕೊಠಾರಿ, ಪತ್ರಕರ್ತ ದಿವಾಕರ್ ಸಂಪಖಂಡ ಮಾತನಾಡಿ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸಿದರು.ಎಸ್‌ಡಿಎಂಸಿ ಅಧ್ಯಕ್ಷ ವೆಂಕಟರಮಣ ಎಂ.ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಕ ಎಂ.ಆರ್. ಗೌಡ ಸ್ವಾಗತಿಸಿದರು. ಶಿಕ್ಷಕರಾದ ಮಹೇಶ್ ಭಟ್ ನಿರೂಪಿಸಿದರು.ರಮೇಶ್ ನಾಯ್ಕ್ ವಂದಿಸಿದರು.

Share This
300x250 AD
300x250 AD
300x250 AD
Back to top