Slide
Slide
Slide
previous arrow
next arrow

ಕೇಂದ್ರ ಸರಕಾರದ ಜನವಿರೋಧಿ ನೀತಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪೂರಕ

300x250 AD

ಶಿರಸಿ:- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿ ಹಾಗು ಮಿತಿ ಮೀರಿದ ಬೆಲೆ ಏರಿಕೆ ಸುಳ್ಳು ಭರವಸೆಗಳಿಂದ ಬೇಸತ್ತು ಮತದಾರರು ಬಿಜೆಪಿಯನ್ನು ತಿರಸ್ಕರಿಸುವ ಮನೋಭಾವನೆ ಹೊಂದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾದ ವಿನಯ ಸೊರಕೆ ಹೇಳಿದರು.

ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಕೊಟ್ಟು ಕ್ಷೇತ್ರದ ಚುನಾವಣೆಯ ಪ್ರಚಾರ ಕಾರ್ಯವನ್ನು ಪರಿಶೀಲಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಾಲಕ್ಷ್ಮಿ ಯುವ ನ್ಯಾಯ ರೈತ ನ್ಯಾಯ ಶ್ರಮಿಕ ನ್ಯಾಯ ಎನ್ನುವ ಸಾಮಾನ್ಯ ನ್ಯಾಯಗಳ ಗ್ಯಾರಂಟಿ ಮತದಾರರನ್ನು ಆಕರ್ಷಿಸಿದೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಗ್ಯಾರೆಂಟಿಗಳೊಂದಿಗೆ ಅತಿ ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕಾರಣ ಹರ್ಷ ವ್ಯಕ್ತಪಡಿಸಿದರು. ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ರವೀಂದ್ರ ನಾಯ್ಕ ಶಾಲು ಹೊದೆಸಿ ಸನ್ಮಾನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಶ ಗೌಡರು ಸ್ವಾಗತಿಸಿದರು.
ಪ್ರಚಾರ ಸಮಿತಿಯ ಉಪಾಧ್ಯಕ್ಷ ರಮೇಶ್ ದುಭಾಶಿ ಪ್ರಧಾನ ಕಾರ್ಯದರ್ಶಿ ರಾಜು ನರಸಿಂಹ ಉಗ್ರಾಣಕರ ಸಮಿತಿಯ ಸದಸ್ಯರಾದ ನಜೀರ್ ಮೂಡಿ,ಶಾಂತಾರಾಮ್ ನಾಯ್ಕ,ವಿ ಎಂ ಹೆಗಡೆ, ಸೈಯದ್ ಮುಜೀಬ್, ಕೆಪಿಸಿಸಿ ಕಾರ್ಯದರ್ಶಿ ಸಂದೀಪ್, ಪಕ್ಷದ ಹಿರಿಯರಾದ ಎಸ್ ಕೆ ಭಾಗ್ವತ್ ಶ್ರೀಪಾದ ಕಡವೆ ಕುಮಾರ್ ಜೋಶಿ ಜಿಲ್ಲಾ ಅಲ್ಪ ಸಂಖ್ಯಾತ ಅಬ್ದುಲ್ ಮಜೀದ್, ಸಾಮಾಜಿಕ ಜಾಲತಾಣದ ಪ್ರಸನ್ನ ಶೆಟ್ಟಿ. ಶೈಲೇಶ್ ಗಾಂಧಿ, ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top