Slide
Slide
Slide
previous arrow
next arrow

ಪವಿತ್ರವಾದ ಮತದಾನ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ: ಸಿದ್ದಪ್ಪ ಮಹಾಜನ

300x250 AD

ದಾಂಡೇಲಿ : ಮತದಾನ ಪವಿತ್ರವಾದ ಹಕ್ಕು. ಈ ದೇಶದ ಸಂವಿಧಾನ ಪ್ರತಿಯೊಬ್ಬ ಮತದಾರಣೆಗೂ ಈ ಹಕ್ಕನ್ನು ದಯಪಾಲಿಸಿದೆ. ಈ ಪವಿತ್ರವಾದ ಮತದಾನದ ಹಕ್ಕನ್ನು ಪ್ರತಿಯೊಬ್ಬ ಮತದಾರರು ಚಲಾಯಿಸಬೇಕೆಂದು ನಗರ ಸಭೆಯ ಪೌರಾಯುಕ್ತರಾದ ಸಿದ್ದಪ್ಪ ಮಹಾಜನ್ ಕರೆ ನೀಡಿದರು.

ಅವರು ಗುರುವಾರ ನಗರಸಭೆಯ ಸಭಾಭವನದಲ್ಲಿ ಮತದಾನದ ಜಾಗೃತಿ ನಿಮಿತ್ತವಾಗಿ ಮೆಹಂದಿ ಹಚ್ಚುವ ಮೂಲಕ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಿ ಎಂಬ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು.

300x250 AD

ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳಾದ ಪರಶುರಾಮ‌ ಶಿಂಧೆ, ಮೈಕಲ್ ಫರ್ನಾಂಡಿಸ್, ಬಾಲು ಗವಾಸ್, ವಿ.ಎಸ್.ಕುಲಕರ್ಣಿ, ಎಚ್.ಬಿ.ಉಪ್ಪಾರ್, ಫೀಲೀಪ್ ಮಾದರ, ಶುಭಂ ರಾಯ್ಕರ್, ವಿಲಾಸ್ ದೇವಕರ, ಕರಣ್ ಜೋಶಿ, ಕಿರಣ್ ಕಮ್ಮಾರ್, ನಾಗರಾಜ ತೇರದಾಳ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top