Slide
Slide
Slide
previous arrow
next arrow

‘ಕೃತಕ ಬುದ್ಧಿಮತ್ತೆ’ ಮಾನವ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದೆ: ಸಚಿನ್ ಭಟ್

300x250 AD

ಸಿದ್ದಾಪುರ: ಸ್ಥಳೀಯ ಎಂಜಿಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಒಂದು ದಿನದ ಕಾರ್ಯಾಗಾರ  ಮಂಗಳವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಕೃಷಿಕರಾದ ರಾಮಚಂದ್ರ ಹೆಗಡೆ ಬಿದ್ರಕಾನ ಉಳ್ಳಾನೆ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ಅವಶ್ಯಕತೆ ಮತ್ತು ನೂತನ ಆವಿಷ್ಕಾರದ ಅಗತ್ಯ ಇದೆ. ಸಮಾಜದ ಒಳಿತಿಗೆ ಯುವಕರು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಅಮೇರಿಕಾದ ಮೆಸೆಚುಸ್ಯಾಟ್ಸ್ ಬೋಧನಾ ಸಹಾಯಕರು ಹಾಗೂ ರಿಸರ್ಚ್ ಸ್ಕಾಲರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಸಚಿನ್ ಬಾಲಚಂದ್ರ ಭಟ್ಟ ಚಟ್ನಳ್ಳಿ ಮಾತನಾಡಿ, ಕೃತಕ ಬುದ್ಧಿಮತ್ತೆ ಈಗ ವಿಶ್ವವನ್ನು ಆಳುತ್ತಿದೆ. ಅದನ್ನು ಮಾನವ ಕಲ್ಯಾಣಕ್ಕಾಗಿ ಬಳಸಬೇಕಾದ ಅವಶ್ಯಕತೆ ಇದೆ. ಇವತ್ತಿನ ಎಲ್ಲ ಕ್ಷೇತ್ರಗಳಲ್ಲೂ ಕೃತಕಬುದ್ಧಿ ಮತ್ತೆ ಬಳಕೆಯನ್ನು ಕಾಣಬಹುದಾಗಿದೆ.ವಿದೇಶಗಳಲ್ಲಿ ಕೃತಕ ಬುದ್ಧಿ ಮತ್ತೆಯ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುವುದರಿಂದ ಭಾರತ ಈ ಕ್ಷೇತ್ರದಲ್ಲಿ ಹಿಂದುಳಿಯಬಾರದು. ಆದ್ದರಿಂದ ಯುವಕರು ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶ ಎಸ್. ಗುತ್ತಿಕರ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀಧರ ವೈದ್ಯ, ಬಾಲಚಂದ್ರ ಭಟ್ಟ ಚಟ್ನಳ್ಳಿ, ಶಶಿಕಲಾ ಹೆಗಡೆ,   ಡಿ.ಎಂ.ಭಟ್ಟ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ವತಿಯಿಂದ ಡಾ.ಸಚಿನ್ ಬಾಲಚಂದ್ರ ಭಟ್ಟ  ಚಟ್ನಳ್ಳಿ ಇವರಿಂದ ಅಭಿನಂದಿಸಲಾಯಿತು. ವಿದ್ಯಾರ್ಥಿ ಸಂಸತ್ತಿನ ಉಪಾಧ್ಯಕ್ಷ ಡಾ. ದೇವನಾಂಪ್ರಿಯ ಎಂ. ಪ್ರಾಸ್ತಾವಿಕ ಮಾತನಾಡಿದರು. ಶಮಿತಾ ಎಸ್. ಸ್ವಾಗತಿಸಿದರು. ಪ್ರತೀಕ್ ಭಟ್ಟ ವಂದಿಸಿದರು. ಭಾವನಾ ಪಿ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ನಂತರ ಡಾ.ಸಚಿನ್ ಬಾಲಚಂದ್ರ ಭಟ್ಟ ಚಟ್ನಳ್ಳಿ ಕಾರ್ಯಾಗಾರ ನಡೆಸಿಕೊಟ್ಟರು. 85 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top