ಜೋಯಿಡಾ: ನಮ್ಮ ದೇಶ ಉಳಿಯಬೇಕು ಮತ್ತು ದೇಶ ಉನ್ನತಿಗೆ ಸಾಗಬೇಕು ಎಂದರೆ ನಮ್ಮ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಬಿಜೆಪಿ ಪಕ್ಷ ಆಡಳಿತಕ್ಕೆ ಬರಬೇಕು ಎಂದು ಉತ್ತರಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಜೋಯಿಡಾ ತಾಲೂಕಿನ ಗುಂದದಲ್ಲಿ ಕಾರ್ಯಕರ್ತರ ಹಾಗೂ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ನಮ್ಮ ಒಂದು ಮತ ದೇಶ ಕಟ್ಟುವ ಕೆಲಸಕ್ಕೆ ಕೊಟ್ಟ ಮತವಾಗಿದೆ. ಕಾಂಗ್ರೆಸ್ ನವರು ಎಂದಿಗೂ ನಮ್ಮ ದೇಶ ಪ್ರಜಾಪ್ರಭುತ್ವವನ್ನು ಬಲ ಪಡಿಸಿಲ್ಲ, ಕೇವಲ ಗಾಂಧಿ ಕುಟುಂಬವನ್ನು ಮಾತ್ರ ಪ್ರೋತ್ಸಾಹ ನೀಡಿದೆ, ನಾವು ಹಾಕುವ ಮತ ಇನ್ನೂ ಐದು ವರ್ಷಗಳ ಅಭಿವೃದ್ಧಿಗೆ ಕಾರಣವಾಗಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಬಿಜೆಪಿ ಪಕ್ಷದ ಸಾಧನೆ ನಿಮ್ಮ ಕಣ್ಣ ಮುಂದೆಯೇ ಇದೆ. ನಮ್ಮ ಪಕ್ಷದಿಂದ ಇಡೀ ದೇಶಕ್ಕೆ ಸಿಲಿಂಡರ್ ನೀಡಲಾಗಿದೆ, ವಿದ್ಯುತ್ ನೀಡಲಾಗಿದೆ, ಔಷಧ ನೀಡಲಾಗಿದೆ, ಕರೋನಾ ಸಂದರ್ಭದಲ್ಲಿ ಮೋದಿಯರಿಂದ ನಮ್ಮ ಜೀವ ಉಳಿದಿದೆ,ಹೀಗೆ ಮೋದಿಯವರು ಮಾಡಿದ ಸಾಧನೆ ಸಾಕಷ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನಮ್ಮ ಜೀವಕ್ಕೆ ಮೊದಲು ಗ್ಯಾರಂಟಿ ಕೊಡಲಿ ಆಮೇಲೆ ಇವರ ಗ್ಯಾರಂಟಿ ನೀಡಲಿ, ಹಿಂದು ಜನರ ಹತ್ಯೆ ಆಗುತ್ತಿದ್ದರು ಸುಮ್ಮನೆ ಕುಳಿತುಕೊಳ್ಳುವ ಈ ಸರ್ಕಾರ ದೇಶದ ಆಡಳಿತ ಮಾಡುತ್ತಾ? ಹಾಗಾಗಿ ಬಿಜೆಪಿ ಪಕ್ಷದವನ್ನೇ ಗೆಲ್ಲಿಸೋಣ ದೇಶ ಮತ್ತು ರಾಜ್ಯ ಹಾಗೂ ಹಿಂದೂ ಗಳನ್ನು ಉಳಿಸೋಣ ಹಾಗೂ ನನಗೆ ಮತ ನೀಡಿ ನಾನು ಎಂದಿಗೂ ಅಭಿವೃದ್ಧಿಯ ಪರವಾಗಿದ್ದೇನೆ ಎಂದರು. ಅರಣ್ಯ ಅತಿಕ್ರಮಣದಾರರಿಗೆ ಯಾರೂ ತೊಂದರೆ ನೀಡಬಾರದು, ಅವರಿಗೆ ತೊಂದರೆ ನೀಡಿದರೆ ನಾನು ಅವರ ಜೊತೆಗೆ ನಿಲ್ಲುತ್ತೇನೆ ಎಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಅಖಂಡ ಭಾರತವನ್ನು ಉಳಿಸುವದೇ ಭಾರತೀಯ ಜನತಾ ಪಕ್ಷದ ಮೊದಲನೇ ಉದ್ದೇಶ, ಕಾಶ್ಮೀರವನ್ನು ಸ್ವತಂತ್ರ ಮಾಡಿದ್ದು ನಮ್ಮ ಸರ್ಕಾರ, ಹಿಂದೆ ಕಾಂಗ್ರೆಸ್ ಸರ್ಕಾರ ನಮ್ಮ ದೇಶವನ್ನೇ ತುಂಡು ಮಾಡಿ ದೇಶವನ್ನೇ ಹಾಳು ಮಾಡಿದೆ, 65 ವರ್ಷ ದೇಶವನ್ನು ಆಳಿದರು ಜನರಿಗೆ ಯಾವುದೇ ಮೂಲ ಸೌಕರ್ಯ ನೀಡಿಲ್ಲ,
ಈಗಿನ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಚೊಂಬು ಕೊಡುವ ಕೆಲಸ ಮಾಡಿದೆ. ಬ್ರಿಟಿಷ್ ಮತ್ತು ಮೊಘಲರಿಗಿಂತ ಕನಿಷ್ಟ ಆಡಳಿತ ಕಾಂಗ್ರೆಸ್ ಮಾಡಿದೆ, ಹೀಗಾಗಿ ದೇಶ ಉಳಿಯಬೇಕು ಎಂದರೆ ಬಿಜೆಪಿ ಪಕ್ಷ ಆಡಳಿತಕ್ಕೆ ಬರಬೇಕು ,ನರೇಂದ್ರ ಮೋದಿ ಪ್ರಧಾನಿ ಆಗಬೇಕು ಕಾಗೇರಿ ಅವರನ್ನು ಗೆಲ್ಲಿಸಬೇಕು ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ ಭಾರತ ದೇಶ ವಿಶ್ವದಲ್ಲಿ ಪ್ರಖ್ಯಾತಿ ಪಡೆಯಲು ನರೇಂದ್ರ ಮೋದಿಯವರೇ ಕಾರಣ, ನಮ್ಮ ಧರ್ಮ ಉಳಿಯಬೇಕು ಎಂದರೆ ಮೋದಿಯವರನ್ನೇ ಮತ್ತೋಮ್ಮೆ ಆಯ್ಕೆ ಮಾಡೋಣ ನಮ್ಮಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿದರೆ ದೇಶದಲ್ಲಿ ಮೋದಿ ಗೆದ್ದ ಹಾಗೆ ಎಂದರು.
ವೇದಿಕೆಯಲ್ಲಿ ಜೋಯಿಡಾ ಬಿಜೆಪಿ ಅಧ್ಯಕ್ಷ ಶಿವಾಜಿ ಗೋಸಾವಿ, ಜೆ.ಡಿ.ಎಸ್ ಅಧ್ಯಕ್ಷ ಅಜಿತ್ ಥೋರವಥ್ , ಬಿಜೆಪಿ ಪಕ್ಷದ ಅರುಣ ಕಾಂಬ್ರೇಕರ, ಉಮೇಶ್ ಭಾಗ್ವತ್,ಆರ್.ವಿ.ದಾನಗೇರಿ, ಗಣಪತಿ ಕರಂಜೆಕರ, ಸುಧಾಕರ ರೆಡ್ಡಿ, ಶೋಭಾ ಎಲ್ಲೆಕರ, ವಿಷ್ಣು ಬಿರಂಗತ್ ಚಂದ್ರಶೇಖರ ಸಾವರಕರ ಉಪಸ್ಥಿತರಿದ್ದರು.