Slide
Slide
Slide
previous arrow
next arrow

ಜಿಲ್ಲೆ, ರಾಜ್ಯದ‌ ಕುರಿತಾಗಿನ ಬದ್ಧತೆಯನ್ನು ನಿಂಬಾಳ್ಕರ್ ಪ್ರದರ್ಶಿಸಲಿ; ಸದಾನಂದ ಭಟ್ ಆಕ್ರೋಶ

300x250 AD

ಶಿರಸಿ: ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಕೆಲವರ ಹೇಳಿಕೆ ಕುರಿತು ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಿಲುವು ಸ್ಪಷ್ಟ ಪಡಿಸಲಿ. ಉತ್ತರ ಕನ್ನಡ ಲೋಕ ಸಭಾ ಅಭ್ಯರ್ಥಿಯಾದ ಅಂಜಲಿ ನಿಂಬಾಳ್ಕರ್ ಅವರು ಮಾಧ್ಯಮದ ಮುಂದೆ ಕಾರವಾರ, ಜೋಯಿಡಾ ಹಳಿಯಾಳ, ಬೆಳಗಾವ್, ಬೀದರ್ ಅನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎನ್ನುವ ಕನ್ನಡ ರಾಜ್ಯವನ್ನು ವಿಭಜಿಸುವ ಹೇಳಿಕೆಯ ಕುರಿತು ತಮ್ಮ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಲಿ ಎಂದು ಜಿಲ್ಲಾ ಮಾದ್ಯಮ ವಕ್ತಾರ ಸದಾನಂದ ಭಟ್ಟ ನಡಗೋಡು ಹೇಳಿದರು.

ರಾಜ್ಯ ವಿಭಜನೆಯ ವಿಷಯದ ಕುರಿತು ಉತ್ತರ ಕನ್ನಡದ ಮತದಾರರ ಮುಂದೆ ತಮ್ಮ ಸ್ಪಷ್ಟ ನಿಲುವನ್ನು ಅಭ್ಯರ್ಥಿ ಮತ್ತು ಕಾಂಗ್ರೆಸ್ ಸ್ಪಷ್ಟಪಡಿಸಲಿ. ಅಖಂಡ ಕನ್ನಡ ನಾಡಿನ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಸ್ತಾವನೆಯನ್ನು ಹೇಳಿಕೆಯನ್ನು ಸ್ಪಷ್ಟವಾಗಿ ವಿರೋಧಿಸುವ ನಿಲುವನ್ನು ಅವರು ಯಾಕೆ ಹೊಂದಿಲ್ಲ? ಇದು ಯಾರನ್ನು ಓಲೈಸುವ ತಂತ್ರವಾಗಿದೆ? ಕಾಂಗ್ರೆಸ್ಸಿನ ಲೋಕಸಭೆ ಅಭ್ಯರ್ಥಿಗಳು ಸ್ಪಷ್ಟವಾಗಿ ಈ ವಿಷಯದ ಕುರಿತು ತಮ್ಮ ನಿರ್ಧಾರವನ್ನು ಜನರ ಮುಂದೆ ಪ್ರಕಟಿಸಿ ಉತ್ತರ ಕನ್ನಡ ಜಿಲ್ಲೆಯ ಜನರ ಮತವನ್ನು ಕೇಳಲಿ. ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎನ್ನುವ ಹಾಗೆ ಸ್ಪಷ್ಟವಾದ ತಮ್ಮ ನಿಲುವು ಇಲ್ಲದೆ ಯಾರನ್ನು ಓಲೈಸುವ ಸಲುವಾಗಿ ಅಖಂಡ ಕನ್ನಡ ನಾಡನ್ನು ಒಡೆಯುವ ಹೇಳಿಕೆಯನ್ನು ಖಂಡಿಸಲಿಲ್ಲ ಅಥವಾ ಇದರ ಬಗ್ಗೆ ಗುಪ್ತ ಕಾರ್ಯ ಸೂಚನೆ ಇದೆಯೋ ಹೇಗೆ ಎನ್ನುವುದು ಅನಿಸುತ್ತಿದೆ. ಕರ್ನಾಟಕ ರಾಜ್ಯದ ಬಗ್ಗೆ ಮತ್ತು ಸಮಗ್ರತೆಯ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿರದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಚುನಾವಣಾ ರಾಜಕಾರಣದ ಕಾರಣದಿಂದ ಭಾಷೆ ಪ್ರಾದೇಶಿಕತೆಯ ಮೇಲೆ ರಾಜ್ಯ ವಿಭಜನೆಯಂತಹ ಹೇಳಿಕೆಯನ್ನು ಖಂಡಿಸಿ ಸಮಗ್ರ ಕರ್ನಾಟಕ ರಾಜ್ಯದ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ತಮ್ಮ ಬದ್ಧತೆಯನ್ನು ಪ್ರದರ್ಶಿಸಲಿ.

300x250 AD

2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಮತಗಟ್ಟೆಯ ಬಳಿ ಕೇಸರಿ ಶಾಲನ್ನು ಹಾಕಿಕೊಂಡು ಬಂದಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ತಕರಾರನ್ನು ಮಾಡಿ ದೂರು ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಅಂಜಲಿ ನಿಂಬಾಳ್ಕರ್ ಅವರಿಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೇಸರಿ ಬಣ್ಣದ ಮೇಲೆ ಪ್ರೀತಿ ಉಕ್ಕಿರುವುದು ಸಕೇದಾಶ್ಚರ್ಯವನ್ನುಂಟು ಮಾಡುತ್ತದೆ. ಕೇವಲ ಕೇಸರಿ ಬಣ್ಣದ ಪೋಷಕು ಧರಿಸಿದ ತಕ್ಷಣ ಪ್ರಬಲ ಹಿಂದುತ್ವವಾದಿಗಳಾಗಲು ಯಾರಿಗೂ ಸಾಧ್ಯವಿಲ್ಲ. ಕೃತಿಯಲ್ಲಿ ಒಂದು ಸಮುದಾಯವನ್ನು ಓಲೈಕೆ ಮಾಡುತ್ತಾ ತುಷ್ಟಿ ಕರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಜನರಿಗೆ ಚುನಾವಣೆಯ ಸಂದರ್ಭದಲ್ಲಿ ತಾವು ಹಿಂದೂ ಪರ ಎಂದು ತೋರಿಸಿಕೊಳ್ಳಲು ಕೇಸರಿ ಬಣ್ಣದ ಮೊರೆ ಹೋಗಿರುವುದು ನಿಜಕ್ಕೂ ಕಾಂಗ್ರೆಸ್ನ ಚುನಾವಣಾ ಗಿಮಿಕ ಆಗಿದೆ. ಭಾರತ್ ಮಾತಾ ಕಿ ಜೈ ಎನ್ನಲು ಕಾಂಗ್ರೆಸ್ ಅಧ್ಯಕ್ಷರ ಅಪ್ಪಣೆ ಕೇಳುವ ಕಾಂಗ್ರೆಸ್ಸಿಗರು ತಮ್ಮ ಅಧಿಕಾರದ ಅವಧಿಯಲ್ಲಿ ಅಮಾಯಕ ಹಿಂದುಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಸದಾ ವಿವಿಧ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಾ ಬಂದಿರುವ ಕಾಂಗ್ರೆಸ್ ತಾನು ಹಿಂದೂ ಪರ ಅಂತ ಹೇಳಿಕೊಳ್ಳಲು ಹೊರಟಿರುವುದು ಕೇವಲ ಭೂಕಟಿಕೆಯ ಪ್ರದರ್ಶನವಾಗಿದೆ. ಕೃತಿಯಲ್ಲಿ ಹಿಂದೂಗಳ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಾ ಕೇವಲ ತುಷ್ಟಿ ಕರಣದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಗೆ ಈ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡದ ಜನತೆ ತಕ್ಕ ಪ್ರತ್ಯುತ್ತರವನ್ನು ನೀಡಲಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಿತ್ತೂರು ಖಾನಾಪುರ ಒಳಗೊಂಡಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಜೆಪಿ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ಜನರ ಒಲವು ಮತ್ತು ನರೇಂದ್ರ ಮೋದಿಜಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಲು ಜನತೆ ಅಭೂತಪೂರ್ವ ವಾದ ಪ್ರತಿಕ್ರಿಯೆ ನೀಡುತ್ತಿರುವುದನ್ನು ಗಮನಿಸಿ ಕಾಂಗ್ರೆಸ್ ಇಬ್ಬಗೆಯ ನೀತಿಯನ್ನು ಪ್ರದರ್ಶಿಸಿ ಈ ರೀತಿಯಾಗಿ ಚುನಾವಣಾ ಗಿಮಿಕನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Share This
300x250 AD
300x250 AD
300x250 AD
Back to top