ಭಟ್ಕಳ: ಊರಲ್ಲೆಲ್ಲಾ ಜಾತ್ರೆ ಸಂಭ್ರಮದಲ್ಲಿದ್ದರೆ ಇದನ್ನೇ ಉಪಯೋಗ ಪಡಿಸಿಕೊಂಡ ಯುವಕರಿಬ್ಬರು ಹೆಲ್ಮೆಟ್ ಧರಿಸಿ ಬ್ಯಾಂಕ್ ಶೆಟರ್ ಮುರಿದು ಒಳ ನುಗ್ಗಿದ ಕಳ್ಳರು ಒಳಗಡೆ ಇದ್ದ ಸೇಫ್ ಲಾಕರನ್ನೇ ಕದ್ದ ಘಟನೆ ತಾಲೂಕಿನ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವಿನಾಯಕ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ.
ಭಟ್ಕಳ ಜಾತ್ರೆ ಹಿನ್ನೆಲೆಯಲ್ಲಿ ಭಟ್ಕಳ ಚನ್ನಪಟ್ಟಣ ಹನುಮಂತ ದೇವಸ್ಥಾನದ ಸುತ್ತಮುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇಡೀ ಪೊಲೀಸ್ ಇಲಾಖೆ ಗಮನ ಜಾತ್ರೆ ಕಡೆ ಇದ್ದರೆ, ಈ ಇಬ್ಬರು ಕಳ್ಳರ ಗಮನ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಬಿದ್ದಿದೆ. ಬುಧವಾರ ಬೆಳಗಿನ ಜಾವ 3.30ಕ್ಕೆ ಕಳ್ಳತನಕ್ಕೆ ಬಂದ ಕಳ್ಳರು, ಕಳ್ಳತನಕ್ಕೆ ಇಳಿಯುವ ಮೊದಲು ಗುರುತು ಪತ್ತೆಯಾಗದಂತೆ ಓರ್ವ ಹೆಲ್ಮೆಟ್ ಧರಿಸಿದರೆ ಇನ್ನೋರ್ವ ಮುಖಕ್ಕೆ ಮುಖಗವಸು ಧರಿಸಿದ್ದಾನೆ.
ಈ ಬ್ಯಾಂಕ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಒಂದನೇ ಮಹಡಿಯಲ್ಲಿದ್ದು, ಕಳ್ಳರು ಕಳ್ಳತನಕ್ಕೆ ಬರುವ ಸಣ್ಣ ತುಣುಕು ಮಾತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು. ಮತ್ತೆ ಯಾವುದೇ ದೃಶ್ಯ ಕೂಡ ಸೆರೆಯಾಗಿಲ್ಲವಾಗಿದೆ. ಶೆಟರ್ ಮುರಿದು ಒಳ ನುಗ್ಗಿದ ಕಳ್ಳರು ಬ್ಯಾಂಕ್ ಒಳಗಡೆ ಇದ್ದ ಸೇಫ್ ಲಾಕರ್ ಕದ್ದು ಪರಾರಿಯಾಗಿದ್ದಾರೆ.
ಮುಂಜಾನೆ ಕಳ್ಳತವಾಗಿರುವ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು. ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದ್ರಶ್ಯ ಆದರಿಸಿ ಕಳ್ಳರ ಸುಳಿವಿಗಾಗಿ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬಿಸಿದ್ದಾರೆ. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಭಟ್ಕಳ ಗ್ರಾಮೀಣ ಠಾಣೆ ಹಾಗೂ ಮುರುಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲು ಕೂಡ ಕಳ್ಳತನವಾಗಿರುವ ಮಾಹಿತಿ ಲಭ್ಯವಾಗಿದೆ.