Slide
Slide
Slide
previous arrow
next arrow

ಮಾನವೀಯತೆಯೇ ಮುಕ್ರಿ ಸಮಾಜದ ಬೆನ್ನೆಲುಬು : ಕೃಷ್ಣಮೂರ್ತಿ ಹೆಬ್ಬಾರ್

300x250 AD

ಜ್ಞಾನಗಂಗಾ ವೇದಿಕೆ ಆಶ್ರಯದಲ್ಲಿ ಯಶಸ್ವಿಯಾದ ನೃತ್ಯ ಸಂಭ್ರಮ-2024

ಹೊನ್ನಾವರ: ಮನುಷ್ಯತ್ವಕ್ಕೆ ಸದಾ ಮಿಡಿಯುವ ಮಾನವೀಯತೆ ತುಂಬಿದ ನಡವಳಿಕೆಯೇ ಮುಕ್ರಿ ಸಮಾಜದ ಬೆನ್ನೆಲುಬು. ಈ ಸ್ನೇಹಶೀಲತೆ ಎಲ್ಲ ಸಮಾಜದವರಿಗೂ ಅನುಕರಣೀಯ ಎಂದು ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್ ನುಡಿದರು.
ಏಪ್ರಿಲ್ 14ರಂದು ಕರ್ಕಿಯ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಜ್ಞಾನ ಗಂಗಾ ವೇದಿಕೆ ಆಶ್ರಯದಲ್ಲಿ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರ 133 ನೇ ಜಯಂತಿಯ ಸ್ಮರಣೆಯಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಮೇಲಿನಂತೆ ನುಡಿದರು.

ಈ ಸಮಾರಂಭವನ್ನು ಹೆಸರಾಂತ ಹಿರಿಯ ಸಾಹಿತಿ ಡಾ. ಶ್ರೀಪಾದ್ ಶೆಟ್ಟಿ ಉದ್ಘಾಟಿಸಿ ‘ಮುಕ್ರಿ ಸಮಾಜದ ಅಮಾಯಕತೆ ಮುಗ್ದತೆ ಕಂಡಾಗ ಕರುಳು ಮಿಡಿಯುತ್ತದೆ. ಈ ಸಮಾಜ ಕುಡಿತದಿಂದ ದೂರಾಗಿ ಹೆಚ್ಚೆಚ್ಚು ವಿದ್ಯಾವಂತರಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಕರೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಪೊಲೀಸ್ ಅಧಿಕಾರಿ ಎನ್.ಆರ್. ಮುಕ್ರಿ ,ನ್ಯಾಯವಾದಿ ಉದಯ ನಾಯ್ಕ್ ,ಶಿಕ್ಷಕ ಶ್ರೀಕಾಂತ್ ಹಿಟ್ನಳ್ಳಿ, ಜಾನಪದ ಕಲಾವಿದ ಶೈಲೇಶ ನಾಯಕ್ ,ಕರ್ನಾಟಕ ಹಿಂದೂ ಮುಕ್ರಿ ಸಂಘದ ರಾಜ್ಯಾಧ್ಯಕ್ಷ ರಾಘವೇಂದ್ರ ಮುಕ್ರಿ ನೀರ್ನಳ್ಳಿ, ಪಿ.ಡಿ.ಓ. ಅಣ್ಣಪ್ಪ ಮುಕ್ರಿ , ಮಹಿಳಾ ಅಧಿಕಾರಿ ಶ್ರೀಮತಿ ಬೇಬಿ ಎಸ್ ಮುಕ್ರಿ ,ಉದ್ಯಮಿ ವಿಘ್ನೇಶ್ವರ ಬೇರೊಳ್ಳಿ ಮೀನುಗಾರಿಕಾಧಿಕಾರಿ ದತ್ತಾತ್ರೇಯ ಬಿ.ಮುಕ್ರಿ,ತಿಮ್ಮಪ್ಪ ಮುಕ್ರಿ , ಭಾಗವಹಿಸಿ ಸಂಘಟನೆಗೆ ಶುಭ ಕೋರಿದರು.

300x250 AD

ಸಮಾಜದ ಪ್ರತಿಭಾವಂತ ಯುವಜನರ ವೈವಿಧ್ಯಮಯ ಆಕರ್ಷಕ, ನೃತ್ಯಗಳು ನಡೆದವಲ್ಲದೆ ಆದ್ಯ ನಾರಾಯಣ ಮುಕ್ರಿ ಹೆಸರಿನ ಪುಟ್ಟ ಮಗುವಿನ ಯಕ್ಷಗಾನ ನೃತ್ಯ ಜನರ ಅಪಾರ ಮೆಚ್ಚುಗೆಯನ್ನು ಪಡೆಯಿತು. ಜನರು ಅವಳಿಗೆ ಸಾವಿರಾರು ರೂಪಾಯಿ ಬಹುಮಾನ ಕೊಟ್ಟರು.ಹೊನ್ನಾವರ ತಾಲೂಕಿನ ಸರ್ವ ಸಮಾಜದವರಿಗಾಗಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಆರು ತಂಡಗಳು ಆಕರ್ಷಕವಾಗಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದವು.ಪ್ರಥಮ ಸ್ಥಾನವನ್ನು ದುಗ್ಗೂರು ಕಬ್ಬಿನ ಮಕ್ಕಿ ಜಟ್ಟು ಗೌಡರ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಕಡತೋಕಾ, ಹೆಬ್ಬಳೇಕೇರಿಯ ನಾರಾಯಣ ಮುಕ್ರಿ ತಂಡ ಹಾಗೂ ಮೂರನೇ ಸ್ಥಾನವನ್ನು ಶಿಕಾರಿನ ಗಣಪು ಗೌಡ ತಂಡ ,ನಾಲ್ಕನೇ ಸ್ಥಾನವನ್ನು -ಹೊರೆಸಾಲಿನ ಗಿರಿಯ ಗೌಡ ನೇತೃತ್ವದ ತಂಡ ತನ್ನದಾಗಿಸಿಕೊಂಡಿತು.
ಬಹುಮಾನಗಳನ್ನು ವಿಘ್ನೇಶ್ ಮುಕ್ರಿ ಬೋರಳ್ಳಿ ಮಂಜುನಾಥ್ ಆರ್ ಭಟ್ ಬುರುಡೆ, ಐಶ್ವರ್ಯ ಟೈಲ್ಸ್ ಕರ್ಕಿ, ಗಣೇಶ್ ಎಂ.ಮುಕ್ರಿ ,ಬೀಬಿ ಮುಕ್ರಿ,ಭಕ್ತ ಹಾರ್ಡ್ ವೇರ್ ಹೊನ್ನಾವರ ಪ್ರಯೋಜಿಸಿದ್ದರು. ಈ ಕಾರ್ಯಕ್ರಮ ಸಂಪೂರ್ಣ ಭೋಜನ ವ್ಯವಸ್ಥೆಯನ್ನು ಪರಮೇಶ್ವರ್ ಮುಕ್ರಿ ತಲಗೋಡ್ ಇವರು ನೀಡಿರುತ್ತಾರೆ.ಸ್ಪರ್ಧೆಯ ನಿರ್ಣಯಕ್ಕಾಗಿ ಕೃಷ್ಣಮೂರ್ತಿ ಹೆಬ್ಬಾರ್, ಶೈಲೇಶ ನಾಯ್ಕ್, ವಿಶ್ವನಾಥ್ ಗುನಗಾ, ಕವಿತಾ ದೇವಾಡಿಗ ಭಾಗವಹಿಸಿ ಸಹಕರಿಸಿದರು.

ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಎ.ಜೆ ರವಿ ನಿರೂಪಿಸಿದರೆ, ಖ್ಯಾತ ಗಾಯಕಿ ಸಹನಾ ಗಾಂವಕರ್, ಗೋವಾ, ಅಶ್ವಿನಿ ಮುಕ್ರಿ ಸಹಕರಿಸಿದರು.
ನೃತ್ಯ ಸಂಗಮದ ಸಂಚಾಲಕರಾದ ,ರವಿ.ಎಸ್.ಮುಕ್ರಿ ಸರ್ವರನ್ನು ಸ್ವಾಗತಿಸಿದರೆ, ಈಶ್ವರ್ ಮುಕ್ರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಂಕರ್ ಮುಕ್ರಿ ಸ್ವರಚಿತ ಕವನದಿಂದ ಪ್ರಾರ್ಥನೆ ಮಾಡಿದರು. ಜ್ಞಾನದಿಂದ ವೇದಿಕೆಯ ರವಿ ಮುಕ್ರಿ, ಈಶ್ವರ ಮುಕ್ರಿ, ಶಂಕರ ಮುಕ್ರಿ,‌ ಮಹೇಶ ಮುಕ್ರಿ,ತಿಮ್ಮಪ್ಪ ಮುಕ್ರಿ, ಪ್ರತೀಶ್ ಮುಕ್ರಿ, ಮಣಿಕಂಠ ಮುಕ್ರಿ ಮಂಜುನಾಥ ಮುಕ್ರಿ,ಶಿವು ಮುಕ್ರಿ,ಸುದೀಪ ಮುಕ್ರಿ,ಶ್ರೀನಿವಾಸ್ ಮುಕ್ರಿ, ಗಣೇಶ ಮುಕ್ರಿ,ಸಂತೋಷ್ ಮುಕ್ರಿ,ರೋಹಿತ್ ಮುಕ್ರಿ ಮುಂತಾದ ಗೆಳೆಯರು ಸೇರಿ ಇಡೀ ಕಾರ್ಯಕ್ರಮವನ್ನು ಬಹು ಯಶಸ್ವಿಯಾಗಿ ಸಂಘಟಿಸಿ ಸಾರ್ವಜನಿಕರ ಮೆಚ್ಚುಗೆಯನ್ನು ಪಡೆದರು.

Share This
300x250 AD
300x250 AD
300x250 AD
Back to top