Slide
Slide
Slide
previous arrow
next arrow

ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆಗೈದ ವ್ಯಕ್ತಿ

300x250 AD

ಕಾರವಾರ: ಕಾರವಾರ ಸಮೀಪದ ಶಿರವಾಡದ ಜಾಂಬಾ ಕ್ರಾಸ್ ಬಳಿ ಬೈಕ್ ಸವಾರನೊಬ್ಬ ಸಾರಿಗೆ ಬಸ್ ಅಡ್ಡಗಟ್ಟಿ ಬಸ್‌ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ತನಗೆ ಬಸ್ ಚಾಲಕ ಸೈಡ್ ಬಿಟ್ಟಿಲ್ಲ ಎನ್ನುವ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸಾರಿಗೆ ಬಸ್‌ ಕಾರವಾರ ನಗರದಿಂದ ಸಿದ್ದರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಬಸ್ ಶಿರವಾಡಕ್ಕೆ ತಲುಪುತ್ತಿದ್ದಂತೆ ಹಿಂಬದಿಯಿಂದ ಬಂದ್ ಬೈಕ್ ಸವಾರನಿಗೆ ಬಸ್ ಚಾಲಕ ಸೈಡ್ ನೀಡಿಲ್ಲ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ಬೈಕ್‌ ಸವಾರ ಸಾರಿಗೆ ಬಸ್ ಮುಂದೆ ಬೈಕ್‌ ನಿಲ್ಲಿಸಿ ಬಸ್‌ ತಡೆದು ಕರ್ತವ್ಯದಲ್ಲಿದ್ದ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದಾನೆ.

ಹಲ್ಲೆ ಮಾಡಿದ ವ್ಯಕ್ತಿ ಶಿರವಾಡದ ಸುಭಾಷ್ ಎಂದು ಗುರುತಿಸಲಾಗಿದ್ದು, ಬಸ್ ಚಾಲಕ ಮಹಮ್ಮದ ಎಂಬವರ ತೆಲೆಗೆ ಗಾಯವಾಗಿದೆ. ಚಾಲಕ ಹಾಗೂ ನಿರ್ವಾಹಕರ ಷರ್ಟ್ ಹಿಡಿದು ಗಲಾಟೆ ಮಾಡಿ ಬೆದರಿಕೆ ಹಾಕಿದ್ದಾನೆ.

300x250 AD

ಮೊದಲು ನಿರ್ವಾಹಕನ ಶರ್ಟ್‌ ಕಾಲರ್‌ ಹಿಡಿದು ಎಳೆದಾಡಿದ್ದಾನೆ, ಈ ಘಟನೆ ಚಿತ್ರಿಕರಣ ಮಾಡಿದ ಚಾಲಕನ ಮೊಬೈಲ್ ನೆಲಕ್ಕೆಸೆದು ಹಾನಿ ಮಾಡಿದ್ದು ಹಾಗೂ ಬಸ್ ಮುಂದೆ ನಿಲ್ಲಿಸಲಾಗಿದ್ದ ಬೈಕ್ ತೆಗೆಯುವಂತೆ ಪ್ರಯಾಣಿಕನೊಬ್ಬ ಹೇಳಿದ್ದಕ್ಕೆ ಪ್ರಯಾಣಿಕನ ಮೇಲೂ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ನಗರದ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top