Slide
Slide
Slide
previous arrow
next arrow

ರಾಷ್ಟ್ರಮಟ್ಟದ ಜ್ಯೋತಿಷ್ಯ ಭಾಷಣ: ಕರ್ಕಿಯ ಗಜಾನನ್ ಭಟ್‌ಗೆ ಸ್ವರ್ಣ

300x250 AD

ಹೊನ್ನಾವರ: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ತಿರುಪತಿ ಇವರು ನಡೆಸಿದ ೨೦೨೩-೨೪ನೇ ದ್ವಿತೀಯ ವರ್ಷದ ಅಖಿಲ ಭಾರತೀಯ ಛಾತ್ರ ಪ್ರಾತಿಭ ಸಮಾರೋಹದಲ್ಲಿ ಕರ್ಕಿಯ ಶ್ಯಾಮ ಭಟ್ರಮನೆಯ ಕುಮಾರ್ ಗಜಾನನ ಮಂಜುನಾಥ ಭಟ್ಟ ಇವರು ಜ್ಯೋತಿಷ್ಯ ಭಾಷಣದಲ್ಲಿ ಸತತ ಎರಡನೇ ವರ್ಷ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕಕ್ಕೆ ಭಾಜನನಾಗಿದ್ದಾರೆ. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ನವದೆಹಲಿ ಅವರು ನಡೆಸುವ 61ನೇ ಅಖಿಲ ಭಾರತೀಯ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜ್ಯೋತಿಷ್ಯ ಭಾಷಣದಲ್ಲಿ ಸ್ವರ್ಣ ಪದಕವನ್ನು ಪಡೆದಿದ್ದಾರೆ . ಈತನು ಎಸ್ಎಂಎಸ್‌ಪಿ ಉಡುಪಿಯಲ್ಲಿ ಜ್ಯೋತಿಷ್ಯವನ್ನು ಅಧ್ಯಯನ ಮಾಡುತ್ತಿದ್ದು, ಮಂಜುನಾಥ ಭಟ್ಟ ಹಾಗೂ ಮಧುರಾ ದಂಪತಿಗಳ ಪ್ರಥಮ ಪುತ್ರರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top