ಶಿರಸಿ: ರಾಜ್ಯದ ಸುಪ್ರಸಿದ್ಧ ಮಾರಿಕಾಂಬಾ ಜಾತ್ರೆಯು ಯಶಸ್ವಿಯಾಗಿ ನಡೆಯಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಕಾರ್ಯವನ್ನು ನಾವು ಅಭಿನಂದಿಸಲೇಬೇಕು ಎಂದು ಕುಳವೆ ಗ್ರಾಪಂ ಹಿರಿಯ ಸದಸ್ಯ ಗಂಗಾಧರ ನಾಯ್ಕ ತಿಳಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಮಾರಿಕಾಂಬೆ ಜಾತ್ರೆಗೆ ರಾಜ್ಯ, ಅಂತರರಾಜ್ಯಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿ, ತಾಯಿ ಮಾರಿಕಾಂಬೆಯ ದರ್ಶನ ಪಡೆದು ಸೇವೆಯನ್ನು ಮಾಡಿ ಆಶೀರ್ವಾದ ಪಡೆದುಕೊಂಡು ಹೋಗಿದ್ದಾರೆ. ಇನ್ನು ಯುಗಾದಿಗೆ ಶ್ರೀ ಮಾರಿಕಾಂಬೆಯು ದೇವಸ್ಥಾನದ ಪೀಠದಲ್ಲಿ ವಿರಾಜಮಾನಗಳಾಗಿ, ಬಂದಂತ ಭಕ್ತರಿಗೆ ಆಶೀರ್ವದಿಸಲು ತಾಯಿಯಾಗಿ, ಭಕ್ತರೆಲ್ಲರಿಗೂ ಆಶೀರ್ವದಿಸುತ್ತಾಳೆ. ಜಾತ್ರೆಯಲ್ಲಿ ಬಹಳಷ್ಟು ದಾನಿಗಳು ಅನ್ನದಾನ ಮಾಡಿರುವುದು, ಮಜ್ಜಿಗೆ, ಪಾನಕ ಹಂಚಿರುವುದು ವಯೋವೃದ್ಧರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡುವುದು, ತಾಯಿಯ ಕ್ಷೇತ್ರದಲ್ಲಿ ಹಲವಾರು ಸೇವೆಗಳನ್ನು ಮಾಡಿರುವುದು ನಾವೆಲ್ಲ ನೋಡಿದ್ದೇವೆ. ಅವರಿಗೆಲ್ಲ ಅಭಿನಂದನೆಗಳು. ಹಗಲಿರುಳು ಶ್ರಮಿಸಿದ ಪೌರಕಾರ್ಮಿಕರಿಗೆ ನಾವೆಲ್ಲ ಒಂದು ಸಲಾಂ ಹೇಳಲೇಬೇಕು. ಪೌರಕಾರ್ಮಿಕರು ಜಾತ್ರೆಯ ಸಂದರ್ಭದಲ್ಲಿ ಬೆಳಗಿನ ಜಾವ ಸುಮಾರು ನಾಲ್ಕು ಐದು ಗಂಟೆಯಿಂದ ನಗರವನ್ನು ಸ್ವಚ್ಛವಾಗಿಟ್ಟು, ಬಂದಂತ ಭಕ್ತರಿಗೆ, ಅಂಗಡಿಕಾರರಿಗೆ ತೊಂದರೆಯಾಗದಂತೆ ತಮ್ಮ ಕರ್ತವ್ಯ ನಿಭಾಯಿಸಿದ ಮಹನೀಯರು. ಸ್ವಚ್ಛ ಭಾರತ್, ಸ್ವಚ್ಛ ನಗರದ ಅವಾರ್ಡ್ ಇಂತಹ ಮಹನೀಯರಿಗೆ ಸಲ್ಲತಕ್ಕದ್ದು, ಅವರಿಲ್ಲದೆ ಸ್ವಚ್ಛ ಭಾರತದ ಕನಸು ಕಾಣುವುದೇ ಕಷ್ಟ, ಸಾಧ್ಯ, ಲಕ್ಷ ಲಕ್ಷ ಜನರು ಬಂದು ಹೋದಂತ ಜಾಗದಲ್ಲಿ ಹರಡಿಕೊಂಡಂತ ಪ್ಲಾಸ್ಟಿಕ್ ತ್ಯಾಜ್ಯ ವಿವಿಧ ಕಚ್ಚಾ ಪದಾರ್ಥಗಳು ಪ್ರತಿನಿತ್ಯ ೧೫ ರಿಂದ ೨೦ ಟಿಪ್ಪರ್‌ಗಳಿಗೆ ಲೋಡ್ ಮಾಡಿ, ಆನ್‌ಲೋಡ್ ಮಾಡಿ, ಇಡೀ ಸಿರಸಿ ನಗರವನ್ನು ಸ್ವಚ್ಛಂದವಾಗಿ ಇಟ್ಟಿದ್ದು ಇದೇ ಪೌರಕಾರ್ಮಿಕರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದ್ದಾರೆ.