Slide
Slide
Slide
previous arrow
next arrow

‘ಕೃಷಿ ಗ್ರಾಮ ಫಾರ್ಮ ಮ್ಯಾನೇಜ್‌ಮೆಂಟ್’ ಉದ್ಘಾಟನೆ

300x250 AD

ಶಿರಸಿ: ಇಲ್ಲಿನ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ. ಪ್ರಧಾನ ಕಛೇರಿಯಲ್ಲಿ ಶನಿವಾರ  ಟಿ.ಎಸ್.ಎಸ್ ಲಿ., ಶಿರಸಿ ಹಾಗೂ ಕೃಷಿಗ್ರಾಮ್ ಪ್ರಿಷಿಷನ್ ಫಾರ್ಮಿಂಗ್ ಪ್ರೈವೇಟ್ ಲಿ. ಬೆಂಗಳೂರು,  ಇವರ ಸಹಭಾಗಿತ್ವದಲ್ಲಿ ರೈತ ಸದಸ್ಯರ ಜಮೀನಿನ ನಿರ್ವಹಣೆ ಹಾಗೂ ಅಭಿವೃದ್ಧಿ, ಬೆಳೆಗೆ ಸೂಕ್ತ ಮಾರುಕಟ್ಟೆ ಸೇವೆ ಒದಗಿಸುವ ಆಶಾದಾಯಕ ಸೇವಾ ಯೋಜನೆ “ಕೃಷಿ ಗ್ರಾಮ ಫಾರ್ಮ ಮ್ಯಾನೇಜ್‌ಮೆಂಟ್” ಇದರ ಉದ್ಘಾಟನೆ  ಹಾಗೂ “ಸಹಕಾರಿ ಜಾಗೃತಿ ಸಭೆ” ಹಮ್ಮಿಕೊಳ್ಳಲಾಗಿತ್ತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ  ಗೋಪಾಲಕೃಷ್ಣ ವೆಂ. ವೈದ್ಯ ಮತ್ತಿಘಟ್ಟಾ ವಹಿಸಿದ್ದು ಪ್ರಾಸ್ತಾವಿಕವಾಗಿ ಹಾಗೂ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಖ್ಯಾತ ಬರಹಗಾರ ಶಿವಾನಂದ ಕಳವೆ, ಟಿ.ಎಸ್.ಎಸ್.ಲಿ.ಹಣಕಾಸು ಹಾಗೂ ವ್ಯಾಪಾರ ಮಾರ್ಗದರ್ಶಕ ಪ್ರಕಾಶ ಶ್ರೀಧರ ಹೆಗಡೆ ಹುಳಗೋಳ, ಕೃಷಿಗ್ರಾಮ್ ಪ್ರಿಷಿಷನ್ ಫಾರ್ಮಿಂಗ್ ಪ್ರೈ.ಲಿ.ಬೆಂಗಳೂರು ಇದರ ಮುಖ್ಯ ಕಾರ್ಯನಿರ್ವಾಹಕ ಗಣೇಶ ರಾಜಾರಾಮ ಹೆಗಡೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಗ ಹೆಗಡೆ ಹುಳಗೋಳ ಭಾಗವಹಿಸಿದ್ದರು.

300x250 AD

ದೀಪ ಬೆಳಗಿಸುವುದರ ಮೂಲಕ ಕಾರ‍್ಯಕ್ರಮ ಉದ್ಘಾಟಿಸಿ  ಮತ್ತು ಕೃಷಿ ಗ್ರಾಮ ನೂತನ ಲೋಗೋ ಅನಾವರಣಗೊಳಿಸಿ ಕೃಷಿ ಗ್ರಾಮದ ಉದ್ದೇಶ ಮತ್ತು ಅವಶ್ಯಕತೆಗಳ ಕುರಿತು ಅತಿಥಿಗಳು ಮಾತನಾಡಿದರು ಮತ್ತು ಸಮಾಲೋಚನೆ ನಡೆಸಲಾಯಿತು.ಅತಿಥಿಗಳಾಗಿ ಆಗಮಿಸಿದ ಡೆವೆಲೊಪಮೆಂಟ್ ಸೊಸೈಟಿ ಅಧ್ಯಕ್ಷರಾದ ಭಾಸ್ಕರ ಹೆಗಡೆ ಕಾಗೇರಿ ಈ ಸಂದರ್ಭದಲ್ಲಿ ಮಾತನಾಡಿದರು. ಸಿಬ್ಬಂದಿಗಳಾದ ಶ್ರೀಮತಿ ಪೂರ್ಣಿಮಾ ಹೆಗಡೆ ಹಾಗೂ ತೇಜಸ್ವಿನಿ ಹೆಗಡೆ ಕಾರ‍್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆ ನೆರವೇರಿಸಿದರು. ನಿರ್ದೇಶಕರಾದ ಶ್ರೀಮತಿ ವಸುಮತಿ ಭಟ್ಟ ಸ್ವಾಗತಿಸಿದರು. ನಿರ್ದೇಶಕರಾದ ರವೀಂದ್ರ ಹೆಗಡೆ ವಂದನಾರ್ಪಣೆ ಮಾಡಿದರು. ಗೋಪಾಲ ಹೆಗಡೆ ಕಾರ‍್ಯಕ್ರಮ ನಿರ್ವಹಣೆ ಮಾಡಿದರು.
ಸಹಕಾರಿ ಜಾಗೃತಿ ಸಭೆಯಲ್ಲಿ ಸಹಕಾರ ಸಂಘಗಳ ಪ್ರತಿನಿಧಿಗಳಾದ ಜಿ.ಆರ್. ಹೆಗಡೆ, ವಿಷ್ಣು ಹೆಗಡೆ, ಗಿರೀಶ ಹೆಗಡೆ, ನಾಗಪತಿ ಭಟ್ಟ ಮಾತನಾಡಿದರು. ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ. ವೈದ್ಯ ಮತ್ತಿಘಟ್ಟಾ, ಸಹಕಾರ ಸಂಘಗಳ ನಿರ್ವಹಣೆ ಕುರಿತು ಕಳಕಳಿ ವ್ಯಕ್ತಪಡಿಸಿದರು. ಸಂಘದ ಹಣಕಾಸು ಹಾಗೂ ವ್ಯಾಪಾರ ಮಾರ್ಗದರ್ಶಕರಾದ ಪ್ರಕಾಶ ಶ್ರೀಧರ ಹೆಗಡೆ ಹುಳಗೋಳ ಸಹಕಾರ ಸಂಸ್ಥೆಗಳ ಉತ್ತಮ ನಿರ್ವಹಣೆಗೆ ಉತ್ಕೃಷ್ಟ ಸಲಹೆ ಸೂಚನೆಗಳನ್ನು ನೀಡಿದರು.  ಇದೇ ಸಂದರ್ಭದಲ್ಲಿ ಸಂಘದಲ್ಲಿ ಹಲವು ವರ್ಷಗಳಿಂದ ಕೃಷಿ ತಜ್ಜರು, ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಕಾಂತ ಆರ್ ಭಟ್ಟ ಗೋರೇಬೈಲ್ ಇವರು ಸೇವಾ ನಿವೃತ್ತಿ ಹೊಂದಿದ ಕಾರಣ ಗೌರವಿಸಿ ಬೀಳ್ಕೊಡಲಾಯಿತು. ಈ ವೇಳೆ ಉಪಾಧ್ಯಕ್ಷರಾದ ಮಹಾಬಲೇಶ್ವರ ಎನ್. ಭಟ್ಟ ತೋಟಿಮನೆ, ಆಡಳಿತ ಮಂಡಳಿ ಸದಸ್ಯರು, ಶಾಖಾ ಸಲಹಾ ಸಮಿತಿ ಸದಸ್ಯರು ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ವಿಜಯಾನಂದ ಎಸ್. ಭಟ್ಟ ಉಪಸ್ಥಿತರಿದ್ದರು. ಸಹಕಾರಿ ಸಂಘದ  ಪ್ರತಿನಿಧಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ಅದೇ ದಿನ ಬೆಳಿಗ್ಗೆ ಸಂಘದಲ್ಲಿ ಗೊಬ್ಬರ ಖರೀದಿ ಲಕ್ಕಿಡಿಪ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಪ್ರಭಾರಿ ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಹುಮಾನ ವಿಜೇತರು ಬಹುಮಾನ ಸ್ವೀಕರಿಸಿ ಅಭಿನಂದನೆ ವ್ಯಕ್ತ ಪಡಿಸಿದರು.

Share This
300x250 AD
300x250 AD
300x250 AD
Back to top