ಸಿದ್ದಾಪುರ: ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಜನ್ಮದಿನದ ಅಂಗವಾಗಿ ದೇಶಪಾಂಡೆ ಅಭಿಮಾನಿ ಬಳಗದ ವತಿಯಿಂದ ತಾಲೂಕಿನ ಮುಗದೂರಿನ ಪುನೀತ ರಾಜಕುಮಾರ ಅನಾಥಾಶ್ರಮಕ್ಕೆ ವಾಷಿಂಗ್ ಮಶಿನ್ ನೀಡಲಾಯಿತು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ. ನಾಗರಾಜ ನೇತ್ರತ್ವದಲ್ಲಿ ಆಶ್ರಮವಾಸಿಗಳಿಗೆ ಸಿಹಿ ಹಂಚಿ ಉಚಿತವಾಗಿ ವಾಶಿಂಗ್ ಮಶಿನ್ ನೀಡಲಾಯಿತು. ಆಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ಹಾಗೂ ಮಮತಾ ನಾಯ್ಕ ಅವರ ಅನಾಥರ ಸೇವೆಗೆ ಕೆ.ಜಿ.ನಾಗಾರಾಜ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಜನಾರ್ಧನ ನಾಯ್ಕ ಗೋಳಗೋಡ, ಉಮೇಶ ನಾಯ್ಕ ಕಡಕೇರಿ, ಎನ್.ಟಿ.ನಾಯ್ಕ, ಕೆ.ಟಿ.ಹೊನ್ನೆಗುಂಡಿ, ಜನಾರ್ಧನ ನಾಯ್ಕ ಹೊಸೂರ, ನಾಗರಾಜ ಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.
ಆರ್‌ವಿಡಿ ಜನ್ಮದಿನ: ಅಭಿಮಾನಿ ಬಳಗದಿಂದ ಅನಾಥಾಶ್ರಮಕ್ಕೆ ವಾಷಿಂಗ್‌ಮಶಿನ್ ದೇಣಿಗೆ
