Slide
Slide
Slide
previous arrow
next arrow

ದಾಂಡೇಲಿ ನಗರಸಭೆಯಲ್ಲಿ ಆಯ-ವ್ಯಯ ಸಭೆ ಯಶಸ್ವಿ

300x250 AD

ದಾಂಡೇಲಿ : ನಗರಸಭೆಯ ಸಭಾ ಭವನದಲ್ಲಿ  ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಆಯವ್ಯಯ ಸಭೆಯು ಬುಧವಾರ ಜರುಗಿತು.

ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ್ 2024-25ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. 2024-25ನೇ ಸಾಲಿನಲಿ ರಾಜಸ್ವ ಸ್ವೀಕೃತಿಗಳು ರೂ: 18,46,70,065/-, ಬಂಡವಾಳ ಜಮಾ ರೂ: 13,70,00,000/-,  ಅಸಾಧಾರಣ ಜಮಾ ರೂ: 20,98,22,721/- ಹೀಗೆ ಒಟ್ಟು ರೂ: 53,14,92,786/- ಜಮಾ ಆಗಲಿದ್ದು, ಖರ್ಚು ರಾಜಸ್ವ ಖರ್ಚು ರೂ: 17,57,10,000/-,  ಬಂಡವಾಳ ಖರ್ಚು ರೂ: 14,05,00,000/-, ಅಸಾಧಾರಣ ಖರ್ಚು ರೂ: 20,98,22,721/- ಹೀಗೆ ಒಟ್ಟು ಖರ್ಚು ರೂ: 52,60,32,721/- ಆಗಲಿದ್ದು, ಒಟ್ಟು  ರೂ: 54,60,065/- ಉಳಿತಾಯ ಬಜೆಟನ್ನು ಮಂಡಿಸಿದ್ದಾರೆ.

ಸಭೆಯಲ್ಲಿ ಮನೆ ಮನೆಗೆ ಯುಜಿಡಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸದಸ್ಯ ಮೋಹನ‌ ಹಲವಾಯಿ ಅದಕ್ಕೆ ಒಂದು‌ ಮನೆಯಲ್ಲಿ ಶೌಚಾಲಯ ಎಷ್ಟೇ ಇದ್ದರೂ,‌ ಯುಜಿಡಿ ಸಂಪರ್ಕಕ್ಕೆ ಪ್ರತ್ಯೇಕ ಪ್ರತ್ಯೇಕ ದರವನ್ನು ಆಕರಣೆ ಮಾಡದೇ ಒಂದೇ ದರವನ್ನು ಆಕರಣೆ ಮಾಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಒಂದು ಮನೆಗೆ ಎಷ್ಟೇ ಶೌಚಾಲಯವಿದ್ದರೂ ಒಂದೇ ದರವನ್ನು ಆಕರಣೆ ಮಾಡಲಾಗುವುದು, ಆದರೆ ಮನೆ ಹೊರತುಪಡಿಸಿ ಕಟ್ಟಡವನ್ನು ಬಾಡಿಗೆ ನೀಡಿದ್ದ ಸಂದರ್ಭದಲ್ಲಿ ಅಥವಾ ವಾಣಿಜ್ಯ ಬಳಕೆಯ ಸಂದರ್ಭದಲ್ಲಿ ಪ್ರತ್ಯೇಕ ದರವನ್ನು ಆಚರಣೆ ಮಾಡಲಾಗುವುದು ಎಂದರು.

2023-24 ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಶೇ: 24.10 ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ಕಾರ್ಯಕ್ರಮಗಳ ಕಾರ್ಯಕ್ರಮಗಳ ಬಗ್ಗೆ ನಗರಸಭೆಯ ಸರ್ವ ಸದಸ್ಯರ ಜೊತೆ ಚರ್ಚಿಸಿ ಫಲಾನುಭವಿಗಳ ಪಟ್ಟಿಯನ್ನು ತಯಾರಿಸುವಂತೆ ನಗರಸಭೆಯ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಜಿಲ್ಲಾಧಿಕಾರಿಯವರು ಒಪ್ಪಿಗೆಯನ್ನು ಸೂಚಿಸಿದರು. 2024 -25 ನೇ ಸಾಲಿನ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಸಭೆಯಲ್ಲಿ ಮಂಜೂರಿ ನೀಡಲಾಯಿತು .

300x250 AD

ನಗರಸಭೆಯ ಸದಸ್ಯರ ಪ್ರಶ್ನೆಗಳಿಗೆ ಅತ್ಯಂತ ತಾಳ್ಮೆಯಿಂದ ತದೇಕಚಿತ್ತದಿಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಉತ್ತರಿಸಿ ಗಮನ ಸೆಳೆದರು. ಆಸ್ತಿ ತೆರಿಗೆಗೆ ಸಂಬಂಧಪಟ್ಟಂತೆ ವಿವರವಾದ ಮಾಹಿತಿಯನ್ನು ಒದಗಿಸಿದರು. ನಗರದ ಸಮಗ್ರ ಅಭಿವೃದ್ಧಿಗೆ ಎಲ್ಲ ಸದಸ್ಯರು ಕೈಜೋಡಿಸುವಂತೆ ಈ ಸಂದರ್ಭದಲ್ಲಿ ಹೇಳಿದರು.

ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ನಗರಸಭೆಯ ಸದಸ್ಯರು, ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top