ಕುಮಟಾ : ಸ್ಥಳೀಯ ಕೆನರಾ ಕಾಲೇಜ್ ಸೊಸೈಟಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಸಮಾಜ ವಿಜ್ಞಾನ ಸಂಘದ ಅಡಿಯಲ್ಲಿ ಕೈಗೊಂಡ ಲಘು ಪ್ರವಾಸವು ಯಶಸ್ವಿಯಾಗಿ ನಡೆಯಿತು.
ಮಿರ್ಜಾನ ಕೋಟೆಗೆ ಭೇಟಿ ನೀಡಿ ಅಲ್ಲಿನ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಸಂಗ್ರಹಿಸಲಾಯಿತು. ಇತಿಹಾಸದ ಸಹಪ್ರಾಧ್ಯಾಪಕರಾದ ಪ್ರೊ. ಉಮೇಶ ನಾಯ್ಕ ಎಸ್. ಜೆ. ಮಿರ್ಜಾನ ಕೋಟೆಯ ಪೂರ್ಣ ಮಾಹಿತಿಯನ್ನು ವಿವರಿಸಿದರು.
ನಂತರ ಶಿಕ್ಷಕ ವಿದ್ಯಾರ್ಥಿಗಳಾದ ಶೇಮಾ ಮತ್ತು ಆಶಾರವರು ಹಲವು ವೃತ್ತಪತ್ರಿಕೆಯಲ್ಲಿಯ ಮಾಹಿತಿಯನ್ನು ಪ್ರಸ್ತುತ ಪಡಿಸಿದರು. ಇತಿಹಾಸ ಸಂಘದ ಕಾರ್ಯದರ್ಶಿಯಾದ ದರ್ಶನ ಗೌಡರವರು ಎಲ್ಲರನ್ನು ವಂದಿಸಿದರು. ಕೋಟೆಯ ಮಾರ್ಗದರ್ಶಕರಾದ ಮಾಜಿ ಸೈನಿಕ ಸೋಲಂಕಿಯವರು ಕೋಟೆಯಲ್ಲಿರುವ ಆಳ್ವಿಕೆ, ಸುರಂಗ ಮಾರ್ಗ ಮತ್ತು ಹಲವು ಬಾವಿಗಳನ್ನು ಪರಿಚಯಿಸಿದರು. ನಂತರ ಕಲಾವಿಭಾಗದ ಎಲ್ಲ ವಿದ್ಯಾರ್ಥಿಗಳು ಮಹಿಷಾಸುರ ಮರ್ದಿನಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕಿಯರಾದ ಶ್ರೀಮತಿ. ರಾಧಾ ನಾಯ್ಕ ಹಾಗೂ ಸಮಾಜವಿಜ್ಞಾನ ವಿಭಾಗದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.