ಅಂಕೋಲಾ: ಆತ್ಮಹತ್ಯೆ ಮಾಡಿಕೊಂಡಿರುವ ಅಂಕೋಲಾದ ಗುತ್ತಿಗೆದಾರ ರಾಮಚಂದ್ರ ನಾಯ್ಕ ಸಾವಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪಿಸಿ ಕಾರವಾರ-ಅಂಕೋಲಾ ತಾಲ್ಲೂಕಿನ ನೋಂದಾಯಿತ ಗುತ್ತಿಗೆದಾರ ಸಂಘದಿಂದ ಇಲ್ಲಿನ ಹರಿಓಂ ಸರ್ಕಲ್ ಬಳಿ ಇರುವಜಿಎಸ್ಟಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಗುತ್ತಿಗೆದಾರರ ಸಂಘದ ಕಾರವಾರ ತಾಲೂಕಾ ಅಧ್ಯಕ್ಷ ಮಾಧವ ನಾಯ್ಕ, ಮೃತ ಗುತ್ತಿಗೆದಾರರು ಸರಕಾರದಿಂದ ಮಂಜೂರಾಗಿರುವ ವಿವಿಧ ಕಾಮಗಾರಿಗಳನ್ನು ನಡೆಸಿದ್ದು ಬಿಲ್ ಬಾರದ ಕಾರಣ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಇದರ ಜೊತೆಗೆ ಜಿಎಸ್ಟಿ ಇಲಾಖೆ ಅಧಿಕಾರಿಗಳು ಅವರ ಅಕೌಂಟ್ ಸೀಜ್ ಮಾಡಿದ್ದರು. ಇದಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸರಕಾರದಿಂದ ಸಾಕಷ್ಟು ಹಣ ಬರುವುದು ಬಾಕಿ ಇದೆ. ನಾಲ್ಕೈದು ವರ್ಷದ ಹಿಂದಿನ ಜಿಎಸ್ಟಿ ಬಿಲ್ಗಳಿಗೆ ಇದೀಗ ನೋಟಿಸ್ ನೀಡುತ್ತಿದ್ದಾರೆ. ಹಣ ತುಂಬದೆ ಇದ್ದಲ್ಲಿ ಖಾತೆಯಲ್ಲಿ ಇರುವ ಹಣವನ್ನೆ ಹೇಳದೆ ಕೇಳದೆ ಜಮಾ ಮಾಡಿಕ್ಕೊಳ್ಳುತ್ತಾರೆ ಎಂದು ಅಸಮಾಧಾನ ಹೊರಹಾಕಿದರು. ಇದಕ್ಕೂ ಪೂರ್ವ ಮೌನಾಚರಣೆ ಮೂಲಕ ಮೃತ ಬಾಲಚಂದ್ರ ನಾಯ್ಕ ಶ್ರದ್ದಾಂಜಲಿ ಅರ್ಪಿಸಿದರು. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ಇಲಾಖೆಯ ಆಯುಕ್ತರಿಗೆ ಸಲ್ಲಿಸಿದರು. ಪ್ರೀತಂ ಮಾಸೂರಕ್, ಸಿದ್ದಾರ್ಥ ನಾಯ್ಕ, ಸಂತೋಷ ಸೈಲ್, ಅನೀಲ್ಕುಮಾರ್ ಮಾಳಸೇಕರ್, ಸುಮಂತ್ ಅಸ್ನೋಟಿಕರ್ ಹಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.