ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಪ್ರತಿ ತಿಂಗಳ ಮೊದಲ ಸೋಮವಾರ ಸ್ಥಳೀಯ ರಾಗ ಮಿತ್ರ ಪ್ರತಿಷ್ಠಾನವು ಸಂಘಟಿಸುತ್ತಿರುವ ಗುರು ಅರ್ಪಣೆ ಹಾಗೂ ಕಲಾ ಸಾಧಕರಿಬ್ಬರಿಗೆ ಸನ್ಮಾನವು ಮಾ.4ರಂದು ಇಳಿ ಹೊತ್ತು 5.30ರಿಂದ ನಡೆಯಲಿದೆ.
ಕಾರ್ಯಕ್ರಮದಲ್ಲಿ ಗಾಯಕಿ ಹಾಗೂ ಚಿತ್ರ ಕಲಾವಿದೆ ರೇಖಾ ಸತೀಶ ಭಟ್ಟ ನಾಡಗುಳಿ ಮತ್ತು ಹೀಪನಳ್ಳಿ ಚೈತನ್ಯ ಸಂಗೀತ ಶಾಲೆಯ ಉಪನ್ಯಾಸಕ ಗಾಯಕ ಶ್ರೀಧರ ಹೆಗಡೆ ದಾಸನಕೊಪ್ಪ ಅವರನ್ನು ಸನ್ಮಾನಿಸಲಾಗುವುದು.ಸನ್ಮಾನ ಮತ್ತು ಉದ್ಘಾಟನೆಯನ್ನು ಯಡಳ್ಳಿ ಮಾಶಿಪ್ರ ಸದಸ್ಯ, ಸಮಾಜ ಸೇವಕ ದತ್ತಾತ್ರೇಯ ವಿಶ್ವೇಶ್ವರ ಹೆಗಡೆ ಕಾನಗೋಡ ನೆರವೇರಿಸಲಿದ್ದು ಅಧ್ಯಕ್ಷತೆ ಸಂಗೀತಾಭಿಮಾನಿ ಆರ್.ಎನ್. ಭಟ್ಟ ಸುಗಾವಿ ಹಾಗೂ ಅತಿಥಿಯಾಗಿ ನಿವೃತ್ತ ಇಂಜಿನೀಯರ್ ಎಮ್.ಎನ್.ಹೆಗಡೆ ಮಾಳೇನಳ್ಳಿ ಪಾಲ್ಗೊಳ್ಳಲಿದ್ದರೆ.
ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ರಾಗಮಿತ್ರ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ , ಜಾಹ್ನವಿ ಹೆಗಡೆ ಕಿಬ್ಬಳ್ಳಿ ಇವರಿಂದ ಗಾಯನ, ತದನಂತರ ವಿ.ಶ್ರೀಧರ ಹೆಗಡೆ ದಾಸನಕೊಪ್ಪ ಅವರ ಸಂಗೀತ ಕಛೇರಿ ನಡೆಯಲಿದೆ. ಗಾಯನಕ್ಕೆ ಶಂಕರ ಹೆಗಡೆ ಹಿರೇಮಕ್ಕಿ ಮತ್ತು ವಿಜಯೇಂದ್ರ ಹೆಗಡೆ ಅಜ್ಜೀಬಳ ತಬಲಾ ಸಾಥ್ ನೀಡಲಿದ್ದು, ಹಾರ್ಮೋನಿಯಂನಲ್ಲಿ ವಿ. ಪ್ರಕಾಶ ಹೆಗಡೆ ಯಡಳ್ಳಿ ಮತ್ತು ಉನ್ನತಿ ಕಾಮತ್ ಶಿರಸಿ ಸಾಥ್ ನೀಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.