ಬನವಾಸಿ: ಇಲ್ಲಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ಸಿ.ಎಸ್.ಆರ್. ನಿಧಿಯಿಂದ ನೀಡಿರುವ 1,96,600 ರೂ.ಮೊತ್ತದ ಎರಡು ಸ್ಮಾರ್ಟ ಕ್ಲಾಸ್ ಉದ್ಘಾಟನೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶುಕ್ರವಾರ ನಡೆಯಿತು.
ಕೆನರಾ ಬ್ಯಾಂಕಿನ ರೀಜನಲ್ ಮ್ಯಾನೇಜರ್ ನಂದ ಕಿಶೋರ್ ಕಾಸ್ಕರ್ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ಕೆನರಾ ಬ್ಯಾಂಕ್ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮಗೆ ಆರ್ಥಿಕ ಸಹಕಾರ ಬೇಕಾದಲ್ಲಿ ಮರೆಯದೆ ಕೆನರಾ ಬ್ಯಾಂಕ್ ಅನ್ನು ಸಂಪರ್ಕಿಸಬೇಕು ಮತ್ತು ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಬೀಳ್ಕೊಂಡು ಹೋಗುತ್ತಿರುವ ವಿದ್ಯಾರ್ಥಿಗಳು ತಮ್ಮ ತಂದೆ, ತಾಯಿ, ಪೋಷಕರ ಕುರಿತು ಕಾಳಜಿಯನ್ನು ಹೊಂದಿರಬೇಕು ಎಂದು ನುಡಿದರು. ಬನವಾಸಿ ಕೆನರಾ ಬ್ಯಾಂಕ ಶಾಖೆಯ ವ್ಯವಸ್ಥಾಪಕ ಶಿವಕುಮಾರ್ ಕಾಂಚೆ ಹಾಗೂ ಸಹಾಯಕ ವ್ಯವಸ್ಥಾಪಕ ಪ್ರಫುಲ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮಾನವ ಚನ್ನಯ್ಯ, ಉಷಾ ಆರ್. ದಿವ್ಯಾ ಗೌಡ್ರು, ರಂಜಿತಾ ಚನ್ನಯ್ಯ, ದೀಕ್ಷಿತಾ ಸಿ. ಕಾಲೇಜಿನಲ್ಲಿ ಎರಡು ವರ್ಷಗಳ ತಮ್ಮ ಕಲಿಕೆಯ ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸಕರಾದ ಅಶೋಕ್ ಶೆಟ್ಟಿ ಹಾಡಿನ ಮೂಲಕ ವಿದ್ಯಾರ್ಥಿಗಳಿಗೆ ಶುಭ ಕೋರಿದರೆ, ತನುಜಾ ನಾಯ್ಕ, ಎ.ಆರ್.ಪ್ರಕಾಶ , ಶೋಭಾ ಮೊಗೇರ್ ಮಂಜುನಾಥ ಗಂಗೆಮತ, ರಾಜೇಶ ಡೊಳ್ಳೇಶ್ವರ ಮಾತುಗಳಲ್ಲಿ ವಿದ್ಯಾರ್ಥಿಗಳಿಗೆ ಶುಭ ನುಡಿದರು. ಮುಖ್ಯ ಅತಿಥಿಯಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಪ್ರಕಾಶ್ ಬಂಗಲೆ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಾಚಾರ್ಯ ಎಂ. ಕೆ. ನಾಯ್ಕ ಹೊಸಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಿವೇದಿತ ಮತ್ತು ರಕ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ವರ್ಗ ಉಪನ್ಯಾಸಕರಾದ ದೀಪಿಕಾ ನಾಯ್ಕ ಸ್ವಾಗತಿಸಿದರು. ನವೀನ್ ಕುಮಾರ್ ಕೆರೂರ ವಂದಿಸಿದರು. ಪ್ರಭಾವತಿ ಹೆಗಡೆ ನಿರೂಪಿಸಿದರು.