ಶಿರಸಿ: ಕದಂಬೋತ್ಸವ ಮೆರವಣಿಗೆ ಸಮಿತಿಯಿಂದ ಫೆ.24ರಂದು ಜರುಗುವ ಕದಂಬೋತ್ಸವ 2024ರ ಸಾಂಸ್ಕೃತಿಕ ನಡಿಗೆ ಕಾರ್ಯಕ್ರಮದಲ್ಲಿ ಭಾಗವಸಲಿಚ್ಛಿಸುವ ಸ್ಥಳೀಯ ಕಲಾತಂಡಗಳು ಮತ್ತು ರೂಪಕಗಳನ್ನು ಮಾಡಲಿಚ್ಛಿಸುವವರು ತಮ್ಮ ತಂಡಗಳ ನೊಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸುವವರು ಕ್ಷೇತ್ರಶಿಕ್ಷಣಾಧಿಕಾರಿ ಶಿರಸಿ, ಬಿ.ವಿ. ಗಣೇಶ ದೈಹಿಕ ಶಿಕ್ಷಣ ಪರಿವೀಕ್ಷಕರು ಮೊ.ನಂ.:Tel:+919448893933, ಪ್ರಸನ್ನ ಗುನಗ ಬನವಾಸಿ ಮೊ.ನಂ.:Tel:+919481111979 ಇವರನ್ನು ತಮ್ಮ ಭಾಗವಹಿಸುವ ತಂಡ / ಸ್ಥಬ್ದಚಿತ್ರದ ಹೆಸರಿನೊಂದಿಗೆ ಅರ್ಜಿ ಸಲ್ಲಿಸುವುದು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ದೂರವಾಣಿ ಸಂಪರ್ಕಿಸಬಹುದಾಗಿದೆ.