Slide
Slide
Slide
previous arrow
next arrow

ಸೃಷ್ಟಿ ಸಂಸ್ಥೆಯಿಂದ ನ್ಯೂಟ್ರೀಶನ್ ಕಿಟ್ ಕೊಡುಗೆ

300x250 AD

ಹೊನ್ನಾವರ: ಕ್ಷಯ ರೋಗ ಸೇರಿದಂತೆ ನಾನಾ ಆರೋಗ್ಯದ ತೊಂದರೆಗಳಿಂದ ಬಳಲುತ್ತಿರುವವರಿಗೆ ಔಷಧಿಗಳ ಜೊತೆ ಪೌಷ್ಠಿಕಾಂಶದ ಅಗತ್ಯ ಇರುತ್ತದೆ. ದಿನನಿತ್ಯದ ಆಹಾರ ಸೇವನೆ ಜೊತೆಗೆ ಹೆಚ್ಚಿನ ಪೌಷ್ಠಿಕಾಂಶ ಸೇವಿಸಿದರೆ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಂಘ ಸಂಸ್ಥೆಗಳ ನೆರವಿನಿಂದ ಪೌಷ್ಠಿಕಾಂಶಗಳನ್ನು ಒದಗಿಸಿಕೊಡುವ ಕಾರ್ಯ ಮಾಡುತ್ತಿದೆ. ‘ಪೋಷಣಾ ಮಿತ್ರ’ ಕಾರ್ಯಕ್ರಮದಡಿಯಲ್ಲಿ ಸೃಷ್ಟಿ ಸಂಸ್ಥೆ ಕ್ಷಯ ರೋಗದಿಂದ ತೊಂದರೆಗೆ ಒಳಗಾದವರಿಗೆ ನ್ಯೂಟ್ರಿಶನ್ ಕಿಟ್ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ ಹೇಳಿದರು.

ಅವರು ಸೃಷ್ಟಿ (ರಿ) ಸಂಸ್ಥೆ ಉತ್ತರಕನ್ನಡ, ಮತ್ತು ಆರೋಗ್ಯ ಇಲಾಖೆ ಹೊನ್ನಾವರ ಇವರ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಕೂರನಲ್ಲಿ ನಡೆದ ನ್ಯೂಟ್ರೀಶನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನ್ಯೂಟ್ರೀಶನ್ ಕಿಟ್ ವಿತರಿಸಿ ಮಾತನಾಡಿದರು. ಮಾತನ್ನು ಮುಂದುವರೆಸುತ್ತಾ, ಸೃಷ್ಟಿ ಸಂಸ್ಥೆ ಆರೋಗ್ಯದ ತೊಂದರೆಯಿಂದ ಬಳಲುತ್ತಿರುವವರಿಗೆ ಸಹಾಯಹಸ್ತ ಚಾಚಿರುವುದು ಶ್ಲಾಘನೀಯವಾಗಿದೆ. ನ್ಯೂಟ್ರೀಶನ್ ಕಿಟ್‌ನ್ನು ಸರಿಯಾಗಿ ಉಪಯೋಗಿಸಿಕೊಳ್ಳುವದರ ಮೂಲಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಳಕೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಗೌತಮಿ ನ್ಯೂಟ್ರಿಶನ್ ಕಿಟ್ ವಿತರಿಸಿದರು. ಕ್ಷಯ ರೋಗದ ಮೇಲ್ವಿಚಾರಕರಾದ ಪ್ರವೀಣ, ಆರೋಗ್ಯ ನಿರೀಕ್ಷಕರಾದ ಗಣೇಶ ನಾಯ್ಕ ಮತ್ತು ಆಸ್ಪತ್ರೆಯ ಸಿಬ್ಬಂಧಿಗಳು, ಪಲಾನುಭವಿಗಳು ಹಾಜರಿದ್ದರು. ಟಿಬಿ ಮೇಲ್ವಿಚಾರಕರಾದ ರಾಜಶೇಖರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top