Slide
Slide
Slide
previous arrow
next arrow

ಡಿಪಿಎಲ್ ಕಪ್: ಡ್ಯೂ ಡ್ರಾಪ್ಸ್ ಥಂಡರ್ಸ್ ತಂಡ ಚಾಂಪಿಯನ್

300x250 AD

ದಾಂಡೇಲಿ : ನಗರದ ಕ್ರೀಡಾ ಕ್ಷೇತ್ರದಲ್ಲಿ ಇತಿಹಾಸ ಬರೆದ ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಡಿ ನಡೆದ ಡಿಪಿಎಲ್ ಸೀಸನ್ 3 ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಡಿಪಿಎಲ್ ಕಪ್ ಅನ್ನು ಅಪ್ಪಿಕೊಂಡ ಡ್ಯೂ ಡ್ರಾಪ್ಸ್ ಥಂಡರ್ಸ್ ತಂಡವು ಗೆಲುವಿನ ಸಂಭ್ರಮವನ್ನು ಸೋಮವಾರ ಸಂಜೆ ಆಚರಿಸಿತು.

ನಗರದ ಬಸ್ ನಿಲ್ದಾಣದ ಮುಂಭಾಗದ ಸ್ಟೇಟ್ ಎಂಪೋರಿಯಂನಿಂದ ತೆರೆದ ವಾಹನದಲ್ಲಿ ಡಿಪಿಎಲ್ ಕಪ್ ಅನ್ನು ಇಟ್ಟು ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

300x250 AD

ತಂಡದ ಮಾಲಕರಗಳಾದ ಅನಿಲ್ ಪಾಟ್ನೇಕರ್, ಶಮಲ್ ಅಬ್ದುಲ್ಲಾ, ತಂಡದ ನಾಯಕ ಮುಜಫರ್ ಖಾನ್, ಪ್ರಮುಖರಾದ ನಿತಿನ್ ಕಾಮತ್, ಸಂಜಿದ್ ಅಹ್ಮದ್, ಅತುಲ್ ಮಾಡ್ದೊಳ್ಕರ್, ಕರೀಂ‌ ಖತೀಬ್, ವಿನಯ್ ಪಾಟ್ನೇಕರ್, ಅನೂಪ್ ಪಾಟ್ನೇಕರ್, ಅನಿಲ್ ಪಾಲ್ಕರ್, ಕ್ಲಿಂಟನ್, ಮೋಸಿನ್, ಶಹಬಾದ್ ಹಾಗೂ ಆಟಗಾರರು, ಸ್ಟೇಟ್ ಅಡ್ವೆಂಚರ್ಸ್, ನಿಸರ್ಗ ಪ್ರವಾಸೋಧ್ಯಮ, ಡ್ಯೂ ಡ್ರಾಪ್ಸ್ ರೆಸಾರ್ಟಿನ ಅಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top