Slide
Slide
Slide
previous arrow
next arrow

ನೌಕರನ ಅನುಚಿತ ವರ್ತನೆಗೆ ಬೇಸತ್ತ ಜನ: ಕ್ರಮಕ್ಕೆ ಆಗ್ರಹ

300x250 AD

ಸುಧೀರ್ ನಾಯರ್
ಬನವಾಸಿ: ಜನ ಸೇವೆಯೇ ಜನಾರ್ಧನ ಸೇವೆ ಎಂಬ ರೀತಿಯಲ್ಲಿ ಪ್ರಾಮಾಣಿಕ ಹಾಗೂ ಸೌಜನ್ಯತೆಯಿಂದ ಕೆಲ ಅಧಿಕಾರಿಗಳು ಸರ್ಕಾರದ ಕೆಲಸ ನಿರ್ವಹಿಸುತ್ತಿದ್ದರೆ ಇಲ್ಲಿಯ ನಾಡಕಛೇರಿಯಲ್ಲಿ ಆಧಾರ ಕಾಡ್೯ ಕಾರ್ಯ ನಿರ್ವಹಿಸುತ್ತಿರುವ ನೌಕರನೊಬ್ಬನ ದರ್ಪಕ್ಕೆ ಸಾರ್ವಜನಿಕರು ರೋಸಿ ಹೋಗಿದ್ದಾರೆ.

ಸರ್ಕಾರದ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಕಾಡ್೯ ಕಡ್ಡಾಯವಾಗಿದೆ. ಅದರೆ ಹೊಸ  ಆಧಾರ್ ಕಾಡ್೯  ಮಾಡುವುದು, ತಿದ್ದುಪಡಿಗೈಯುವುದು ಹರಸಾಹಸವಾಗಿದೆ. ಪ್ರತಿ ತಿಂಗಳ  ಎರಡನೇ ಶನಿವಾರ ಮತ್ತು ನಾಲ್ಕನೆಯ ಶನಿವಾರದಂದು ಇಲ್ಲಿಯ ನಾಡಕಛೇರಿಯಲ್ಲಿ ಹೊಸ ಆಧಾರ್ ಕಾಡ್೯ ಮತ್ತು ತಿದ್ದುಪಡಿ ಮಾಡಲು ತಾಲೂಕು ಆಡಳಿತ ಅವಕಾಶ ಕಲ್ಪಿಸಿದೆ. ಅದರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಧಾರ್ ಆಪರೇಟರ್ ಜನರ ಬಳಿ ಅನುಚಿತವಾಗಿ ವರ್ತಿಸುತ್ತಿರುವುದು ಸಾರ್ವಜನಿಕರ  ಆಕ್ರೋಶಕ್ಕೆ ಕಾರಣವಾಗಿದೆ. 

ಗ್ರಾಮೀಣ ಭಾಗವಾಗಿರುವ  ಬನವಾಸಿಯ ಭಾಗದಲ್ಲಿ ಬಡ ಕೂಲಿ ಮಾಡುವ ಜನರೇ ಹೆಚ್ಚು. ಹೊಸ ಆಧಾರ್ ಹಾಗೂ  ತಿದ್ದುಪಡಿಯನ್ನು ಮಾಡಿಕೊಳ್ಳಲು ಕೂಲಿ ಕೆಲಸವನ್ನು ಬಿಟ್ಟು ಬಂದು ಸರತಿ ಸಾಲಿನಲ್ಲಿ ನಿಂತು ತಮ್ಮ ಕೆಲಸ ಮಾಡಿಕೊಳ್ಳಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಈ ಆಧಾರ್ ಆಪರೇಟರ್ ಸಾರ್ವಜನಿಕರಿಗೆ ಮನ ಬಂದಂತೆ ಮಾತನಾಡುವುದು, ಹೆಚ್ಚಿನ ಹಣ ಪಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಸರ್ಕಾರದಿಂದ ಉಚಿತವಾಗಿ ಆಧಾರ್ ಮಾಡಿಕೊಡುವ ಆದೇಶವಿದ್ದರು  ಇಲ್ಲಿ ಪ್ರತಿಯೊಂದು ಆಧಾರ್ ಕಾಡ್೯  ಗೂ 100ರೂ.150 ರೂ. 200ರೂ. ಪಡೆದುಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ.  ಇದಕ್ಕೆ ಕೆಲವು ಮಧ್ಯವರ್ತಿಗಳು ಸಾತ್ ನೀಡುತ್ತಿದ್ದು ಮಧ್ಯವರ್ತಿಗಳಿಂದ ನಾಡಕಛೇರಿ ಹದಗೆಟ್ಟಿದೆ  ಎಂಬುವುದು  ಸಾರ್ವಜನಿಕರ  ಆರೋಪವಾಗಿದೆ.  ಈತನ ಕರ್ತವ್ಯಲೋಪ ಹಾಗೂ ಮಧ್ಯವರ್ತಿಗಳ ಹಾವಳಿ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಿದ್ದಲ್ಲಿ ದೂರು ನೀಡಿದವರ ಆಧಾರ್ ಕಾರ್ಡ್‌ನ ವಿಳಾಸಗಳನ್ನು ತಪ್ಪು ತಪ್ಪಾಗಿ ನಮೂದಿಸುವುದು ಇಲ್ಲವಾದರೇ ಆಧಾರ್ ಕಾಡ್೯ ರದ್ದು ಮಾಡುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.  ಈತನ ಬಗ್ಗೆ  ಹಲವಾರು ದೂರುಗಳಿದ್ದರು ಮೇಲಾಧಿಕಾರಿಗಳು ಮೌನವಹಿಸಿರುವುದು ಎಷ್ಟು ಸರಿಯೆಂಬ ಪ್ರಶ್ನೇ  ಸಾರ್ವಜನಿಕರ ಮೂಡಿದೆ.

ಸರ್ಕಾರದ ಕೆಲಸ ದೇವರ ಕೆಲಸವೆಂಬಂತೆ ಕರ್ತವ್ಯ ನಿರ್ವಹಿಸುತ್ತಿರುವ  ತಾಲೂಕು ದಂಡಾಧಿಕಾರಿಗಳು ಇಂತಹ ನೌಕರ ಮೇಲೆ ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

300x250 AD

ಕೋಟ್:
ಬನವಾಸಿಯ ನಾಡಕಛೇರಿಯಲ್ಲಿ ಆಧಾರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರನು ಅನುಚಿತವಾಗಿ ವರ್ತಿಸುತ್ತಿದ್ದು, ಈತನ ಕರ್ತವ್ಯಲೋಪವನ್ನು ತಹಶೀಲ್ದಾರರ ಗಮನಕ್ಕೆ ತಂದ ಕಾರಣಕ್ಕಾಗಿ ಅಕ್ರೋಶಗೊಂಡು ನನ್ನ ಸಹೋದರಿಯ ಮಗುವಿನ ಆಧಾರ್ ಕಾರ್ಡ್‌ನಲ್ಲಿ ವಿಳಾಸ ತಪ್ಪಾಗಿ ನಮೂದಿಸಿದ್ದಾರೆ. ಆ ತಕ್ಷಣವೇ ಸರಿಪಡಿಸಲು ತಿಳಿಸಿದರೆ ಅದು ಇವಾಗ ಸಾಧ್ಯವಿಲ್ಲ. ಆಧಾರ್ ಕಾರ್ಡ್ ಬಂದ ಮೇಲೆ  ಸರಿಪಡಿಸುತ್ತೇನೆ ಎಂಬ ಉಡಾಫೆ ಉತ್ತರ ನೀಡಿದ್ದಾರೆ. 200ರೂ. ಪಡೆದು ಈ ರೀತಿ ಮಾಡಿದರೇ ಹೇಗೆ?   ಇಂತಹ ನೌಕರರಿಂದ ಬಡ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.  ಅಧಿಕಾರಿಗಳು ಇಂತವರ ವಿರುದ್ದ ಕ್ರಮಕೈಗೊಳ್ಳಬೇಕು. — ಚೇತನಾ, ಬನವಾಸಿ ನಿವಾಸಿ

ಆಧಾರ್ ಆಪರೇಟರ್ ಬಗ್ಗೆ ಹಲವಾರು ದೂರುಗಳು ನಮ್ಮ ಗಮನಕ್ಕೂ ಬಂದಿವೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು.– ಶ್ರೀಧರ ಮುಂದಲಮನಿ, ತಹಶೀಲ್ದಾರ ಶಿರಸಿ

Share This
300x250 AD
300x250 AD
300x250 AD
Back to top