Slide
Slide
Slide
previous arrow
next arrow

ಶ್ರೀರಾಮ್ ಫೈನಾನ್ಸ್ ಆಶ್ರಯದಡಿ ವಿದ್ಯಾರ್ಥಿವೇತನ ವಿತರಣೆ

300x250 AD

ದಾಂಡೇಲಿ : ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಆಶ್ರಯದಡಿ ನಗರದ ವಾಣಿಜ್ಯ ವಾಹನಗಳ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಬುಧವಾರ ಕುಳಗಿ ರಸ್ತೆಯಲ್ಲಿರುವ ಶ್ರೀವಿದ್ಯಾಧಿರಾಜ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟರ್ ವಾಹನ ನಿರೀಕ್ಷಕರಾದ ಎ.ಎಸ್.ಕಟ್ಟಿಮನಿ ಉದ್ಘಾಟಿಸಿ ಮಾತನಾಡುತ್ತಾ, ನಿರುದ್ಯೋಗಿ ಜನರಿಗೆ ಸಾಲ ಸೌಲಭ್ಯಗಳನ್ನು ಒದಗಿಸಿ ವಾಣಿಜ್ಯ ವಾಹನಗಳನ್ನು ಖರೀದಿಸಲು ಮಹತ್ವದ ಸಹಕಾರವನ್ನು ನೀಡಿ, ನಿರುದ್ಯೋಗಿಗಳನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಕೊಡುಗೆ ಮಹತ್ವಪೂರ್ಣವಾಗಿದೆ ಎಂದರು. ಆರ್ಥಿಕ ಲಾಭದಾಯಕ ಚಟುವಟಿಕೆ ಜೊತೆಗೆ ವಾಣಿಜ್ಯ ವಾಹನಗಳ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಪ್ರತಿವರ್ಷ ನೀಡುತ್ತಾ ಬಂದಿರುವುದು ಸಂಸ್ಥೆಯ ಶೈಕ್ಷಣಿಕ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರ ಠಾಣೆಯ ಪಿಎಸ್ಐ ಐ.ಆರ್.ಗಡ್ಡೇಕರ್, ಜನತಾ ವಿದ್ಯಾಲಯ ಪಿಯು ಕಾಲೇಜಿನ ಪ್ರಾಚಾರ್ಯ ಎಂಎಸ್ ಇಟಗಿ, ಹಿರಿಯ ನ್ಯಾಯವಾದಿ ಎಂ.ಸಿ.ಹೆಗಡೆ ಮೊದಲಾದವರು ಮಾತನಾಡಿ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಶ್ರೀರಾಮ್ ಫೈನಾನ್ಸ್ ಅಗ್ರಸ್ಥಾನದಲ್ಲಿದೆ. ವಾಣಿಜ್ಯ ವಾಹನಗಳ ಮೂಲಕ ಬದುಕನ್ನು ಕಟ್ಟಿಕೊಳ್ಳುವ ಬಡ ನಿರುದ್ಯೋಗಿಗಳ ಕನಸು ನನಸು ಮಾಡಲು ಶ್ರೀರಾಮ್ ಫೈನಾನ್ಸ್ ಅಗತ್ಯ ಸಾಲ ನೀಡುವುದರ ಮೂಲಕ ಬಡವರ ಬದುಕಿಗೆ ಆಸರೆಯಾಗಿ ನಿಂತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀರಾಮ್ ಫೈನಾನ್ಸ್ ಇದರ ಮಂಗಳೂರು ವಲಯದ ವಲಯ ವ್ಯವಹಾರ ಮುಖ್ಯಸ್ಥರಾದ ಶರಶ್ಚಂದ್ರ ಭಟ್.ಕೆ ಅವರು ಶ್ರೀರಾಮ್ ಫೈನಾನ್ಸ್ ಕೇವಲ ವಾಹನಗಳ ಖರೀದಿಗಾಗಿ ಸಾಲವನ್ನು ನೀಡುವುದರ ಜೊತೆಗೆ ಅತ್ಯಂತ ಬದ್ಧತೆಯಿಂದ ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕಳೆದ 11 ವರ್ಷಗಳಿಂದ ಈವರೆಗೆ 60 ಸಾವಿರಕ್ಕೂ ಅಧಿಕ ವಾಣಿಜ್ಯ ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಶೈಕ್ಷಣಿಕ ಕಾಳಜಿಯನ್ನು ಮೆರೆದಿದೆ ಎಂದರು. ಶಿಕ್ಷಣಕ್ಕೆ ನೀಡುವ ಸಹಾಯ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಎಂದರು.

ಮುಖ್ಯ ಅತಿಥಿಗಳಾಗಿ ತೋಹಿದ್ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಮೊಹಿದ್ದೀನ್ ಶೇಖ್ ಹಸನ್, ಶ್ರೀರಾಮ್ ಫೈನಾನ್ಸ್ ಇದರ ವಲಯ ಕಲೆಕ್ಷನ್ ಮುಖ್ಯಸ್ಥರಾದ ನಾಗರಾಜ್.ಬಿ, ಶ್ರೀರಾಮ್ ಫೈನಾನ್ಸ್ ಇದರ ರಾಜ್ಯ ಮುಖ್ಯಸ್ಥರಾದ ಸದಾಶಿವ್ ಪೂಜಾರಿ, ವಿವಿಧ ಕಂಪನಿಗಳ ದ್ವಿಚಕ್ರ ವಾಹನ ವಿತರಕರುಗಳಾದ ಟಿ.ಎಸ್.ಬಾಲಮಣಿ, ಮಹಮ್ಮದ್ ಜುಬೇರ್ ಶೇಖ್, ಗುರುಮಿತ್ ಸಿಂಗ್, ರಾಜಕಿರಣ್ ಕಲಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

300x250 AD

ಕಾರ್ಯಕ್ರಮದಲ್ಲಿ ವಾಣಿಜ್ಯ ವಾಹನಗಳ‌ ಚಾಲಕರುಗಳ ಒಟ್ಟು 130 ವಿದ್ಯಾರ್ಥಿಗಳಿಗೆ ತಲಾ ರೂ:3 ಸಾವಿರದಂತೆ ವಿದ್ಯಾರ್ಥಿ ವೇತನ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗಣ್ಯರನ್ನು ಸಂಸ್ಥೆ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಶ್ರೀರಾಮ್ ಫೈನಾನ್ಸ್ ನಿಂದ ಸಾಲವನ್ನು ಪಡೆದು ವಾಹನ ಖರೀದಿಸಿದ ಗ್ರಾಹಕರಿಗೆ ವಾಹನಗಳ ಕೀಯನ್ನು ಹಸ್ತಾಂತರಿಸಲಾಯಿತು

ಶ್ರೀರಾಮ್ ಫೈನಾನ್ಸ್ ವಿಭಾಗಿಯ ವ್ಯವಹಾರ ಮುಖ್ಯಸ್ಥರಾದ ಜಾರ್ಜ್ ಡಿಸೋಜಾ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರೀಜನಲ್ ವ್ಯವಹಾರ ಮುಖ್ಯಸ್ಥರಾದ ಪ್ರಶಾಂತ್ ಕೆ.ಎಸ್ ವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು, ವಾಣಿಜ್ಯ ವಾಹನಗಳ ಚಾಲಕರ ಸಂಘಟನೆಯ ಪದಾಧಿಕಾರಿಗಳು, ವಾಣಿಜ್ಯ ವಾಹನಗಳ ಚಾಲಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top