Slide
Slide
Slide
previous arrow
next arrow

ಡಮಾಮಿ -ಸಮುದಾಯ ಪ್ರವಾಸೋದ್ಯಮ : ರಾಜ್ಯದಲ್ಲಿಯೇ ವಿನೂತನ ಪ್ರಯತ್ನ

300x250 AD

ಉತ್ತರ ಕನ್ನಡ ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶಗಳಿವೆ. ಈ ಉದ್ದೇಶದಿಂದ ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಸಮುದಾಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ ಯಲ್ಲಾಪುರ ಯೋಜನೆಯನ್ನು ರೂಪಿಸಿತ್ತು. ಯಲ್ಲಾಪುರ ತಾಲೂಕಿನಲ್ಲಿ ಇರುವ ಸಿದ್ದಿ ಸಮುದಾಯದ ಸ್ವಸಹಾಯ ಸಂಘದ ಮಹಿಳೆಯರಿಗೆ ಸಮುದಾಯ ಪ್ರವಾಸೋದ್ಯಮದಲ್ಲಿ ಆದಾಯೋತ್ಪನ್ನದ ಅವಕಾಶಕಲ್ಪಿಸುವ ದೃಷ್ಠಿಯಿಂದ ರಾಜ್ಯದಲ್ಲಿಯೇ ವಿನೂತನವಾಗಿ ಸಿದ್ದಿ ಸಮುದಾಯದ ಪ್ರವಾಸೋದ್ಯಮಕ್ಕೆ ಯೋಜನಾ ವರದಿಯನ್ನು ಎನ್.ಆರ್.ಎಲ್.ಎಂ ರಾಜ್ಯ ಅಭಿಯಾನ ಘಟಕಕ್ಕೆ ಸಲ್ಲಿಸಲಾಗಿದ್ದು ಕಾಟೇಜ್ ನಿರ್ಮಾಣ ಮತ್ತು ತರಬೇತಿ ಹಾಗೂ ಕಲಿಕಾ ಪ್ರವಾಸಕ್ಕೆ ಅನುದಾನ ಅನುಮೋದನೆಯಾಗಿರುತ್ತದೆ. ಇದೊಂದು ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನವಾಗಿರುತ್ತದೆ.

ಸದರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ನಿರ್ಮಿತಿ ಕೇಂದ್ರ ಕಾರವಾರ ರವರಿಗೆ ಕಾಮಗಾರಿಯ ಜವಾಬ್ದಾರಿಯನ್ನು ವಹಿಸಿದ್ದು ನಿಗದಿತ ಕಾಲಮಿತಿಯಲ್ಲಿ ಕಾಟೇಜಗಳನ್ನು ನಿರ್ಮಿಸಲಾಗಿರುತ್ತದೆ, ಸದರಿ ಕಾಮಗಾರಿಯ ಉದ್ಘಾಟನೆಯನ್ನು ಫೆಬ್ರವರಿ 3 ರಂದು ನಿಗದಿಗೊಳಿಸಲಾಗಿತ್ತು. ನಿಗದಿತ ಅಧಿಯಲ್ಲಿಯೇ ಪೂರ್ಣಗೊಳಿಸಲು ವೇಗವಾಗಿ ಕೆಲಸ ಮಾಡಿಸುವುದು ಅನಿವಾರ್ಯವಾಗಿತ್ತು.

300x250 AD

ಜನವರಿ ಮೊದಲ ವಾರದಲ್ಲಿ ನಿಸರ್ಗ ಸ್ಪರ್ಶ ಸಂಜೀವಿನಿ ಪರಿಸರ ಪ್ರವಾಸೋದ್ಯಮ ಗುಂಪಿನ ಸದಸ್ಯರಿಗೆ ಪ್ರೊಡಕ್ಟ್ ಅಭಿವೃದ್ಧಿಯ ಕುರಿತು ತರಬೇತಿಯ ಸಂದರ್ಭದಲ್ಲಿ ಸಂಘದ ಸಹಭಾಗಿತ್ವದಲ್ಲಿಯೇ “ಡಮಾಮಿ- ಸಮುದಾಯ ಮನೆ” ಎಂದು ಹೆಸರಿಡಲು ನಿರ್ಧರಿಸಲಾಗಿದ್ದು, ಇದು ನಿಸರ್ಗ ಸ್ಪರ್ಶ ಸಂಘದ ನಿರ್ಧಾರವೇ ಆಗಿರುತ್ತದೆ. ಇಲ್ಲಿ ಪ್ರವಾಸೋದ್ಯಮ ಚಟುವಟಿಕೆಯ ಸಂಪೂರ್ಣ ನಿರ್ವಹಣೆಯು “ನಿಸರ್ಗ ಸ್ಪರ್ಶ ಸಂಜೀವಿನಿ ಪರಿಸರ ಪ್ರವಾಸೋದ್ಯಮ ಗುಂಪಿಗೆ “ ಸೇರಿದ್ದು ಅಲ್ಲಿನ ಸದಸ್ಯರ ಬದಲಾವಣೆ ಮತ್ತು ಇತರೆ ನಿರ್ಧಾರಗಳು ಸಂಘಗಳಲ್ಲಿಯೇ ತೀರ್ಮಾನವಾಗುತ್ತದೆ.
ಸದರಿ ಪ್ರವಾಸೋದ್ಯಮವು ಒಂದು ಮಾದರಿ ಚಟುವಟಿಕೆಯಾಗಿದ್ದು ಸಂಪೂರ್ಣ ಸಿದ್ದಿ ಸಮುದಾಯಕ್ಕೆ ಉತ್ತಮ ಜೀವನೋಪಾಯ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಮುಂದುವರಿದು ಈ ಪ್ರವಾಸೋದ್ಯಮ ಚಟುವಟಿಕೆಯಡಿಲ್ಲಿ ವಿವಿಧ ಪರಿಸರ ಸ್ನೇಹಿ ಚಟುವಟಿಕೆಗಳಾದ ಟ್ರೆಕ್ಕಿಂಗ್, ಸ್ಥಳೀಯ ಸ್ವಸಹಾಯ ಸಂಘದ ಉತ್ಪನ್ನಗಳಿಗೆ ಮಾರುಕಟ್ಟೆ, ಪಕ್ಷಿ ವೀಕ್ಷಣೆ, ಔಷಧೀಯ ಸಸ್ಯಗಳ ಮಾಹಿತಿ, ಸಿದ್ದಿ ಸಮುದಾಯದ ವಿವಿಧ ಸಾಂಸ್ಕ್ರತಿಕ ಆಚರಣೆ, ಇತ್ಯಾದಿ ಚಟುವಟಿಕೆಗಳನ್ನು ಒಳಗೊಂಡಿದೆ.
ಫೆಬ್ರವರಿ 3 ರಂದು ರಂದು ಉದ್ಘಾಟನೆಯಾಗಬೇಕಿದ್ದ ಈ ವಿಶೇಷ ಕಾರ್ಯಕ್ರಮದ ಕುರಿತು ಯೋಜನೆಯ ಬಗ್ಗೆ ಸ್ಥಾಪಿತ ಹಿತಾಸಕ್ತಿಗಳು ತಪ್ಪು ಮಾಹಿತಿ ಹರಡಿರುತ್ತಾರೆ. ಈ ವಿಷಯದ ಬಗ್ಗೆ ದೂರುದಾರರು ಜಿಲ್ಲಾ ಪಂಚಾಯತ ಕಛೇರಿಗೆ ಸಂಪರ್ಕಿಸಿ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳದೇ ಸುಳ್ಳು ಮಾಹಿತಿಯನ್ನು ಹಬ್ಬಿಸಿ ಗೊಂದಲ ಸೃಷ್ಠಿಸುತ್ತಿದ್ದಾರೆ. ಈ ಯೋಜನೆಯ ಕುರಿತು ಯಾವುದೇ ದೂರು ಅಥವಾ ಮಾಹಿತಿ ಬೇಕಿದ್ದಲ್ಲಿ ಖುದ್ದಾಗಿ ತಾಲೂಕು ಪಂಚಾಯತ ಯಲ್ಲಾಪುರ ಮತ್ತು ಓಖಐಒ ಶಾಖೆ ಜಿಲ್ಲಾ ಪಂಚಾಯತ ಕಾರವಾರಕ್ಕೆ ಬಂದು ಮಾಹಿತಿ ಪಡೆಯಬಹುದಾಗಿದೆ. ಸೂಕ್ತ ದಾಖಲೆ, ಆಧಾರ ಹಾಗೂ ಪುರಾವೆಗಳಿಲ್ಲದೇ ಸುಳ್ಳು ಹಾಗೂ ತಪ್ಪು ಮಾಹಿತಿ ಹರಡಿಸುವವರ ವಿರುದ್ದ ಕಾಯ್ದೆಯನ್ವಯ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು. –ಈಶ್ವರ ಕುಮಾರ ಕಾಂದೂ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ

Share This
300x250 AD
300x250 AD
300x250 AD
Back to top