ಶಿರಸಿ: ಇಲ್ಲಿನ ಟಿಎಂಎಸ್ ಸಭಾಭವನದಲ್ಲಿ ಫೆ.3ರಂದು ಮಧ್ಯಾಹ್ನ 3 ಘಂಟೆಯಿಂದ ಹಿಲ್ಲೂರು ಯಕ್ಷಮಿತ್ರ ಬಳಗದ ವಾರ್ಷಿಕೋತ್ಸವ ನಡೆಯಲಿದೆ.
ಆರಂಭಿಕವಾಗಿ ಆಮಂತ್ರಿತ ಕಲಾವಿದರಿಂದ ‘ಅಂಬಾ ಶಪಥ’ ಎಂಬ ತಾಳಮದ್ದಲೆ ನಡೆಯಲಿದ್ದು, ಮುಮ್ಮೇಳದ ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೆಕೈ ಭೀಷ್ಮನಾಗಿ, ಮೋಹನ ಹೆಗಡೆ ಹೆರವಟ್ಟಾ ಅಂಬೆಯಾಗಿ, ಪರಶುರಾಮನಾಗಿ ಮಂಜುನಾಥ ಹೆಗಡೆ ಗೋರಮನೆ ಪಾಲ್ಗೊಳ್ಳಲಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಗೋಪಾಲ ಗಾಣಿಗ ಹೆರಂಜಾಲು, ಗಜಾನನ ಭಟ್ಟ ತುಳಗೇರಿ ಹಾಗೂ ಮದ್ದಲೆಯಲ್ಲಿ ಎ.ಪಿ.ಪಾಠಕ, ಚಂಡೆಯಲ್ಲಿ ಪ್ರಸನ್ನ ಭಟ್ಟ ಹೆಗ್ಗಾರ ಭಾಗವಹಿಸಲಿದ್ದಾರೆ.
ನಂತರದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಯಕ್ಷಗುರು ಹೆರಂಜಾಲು ಗೋಪಾಲ ಗಾಣಿಗ ಹಾಗೂ ಪ್ರೋತ್ಸಾಹ ಸಮ್ಮಾನವಾಗಿ ರಕ್ತದಾನಿ ರವಿ ಹೆಗಡೆ ಶಿರಸಿ ಮತ್ತು ಸಹಾಯಧನ ಸಮರ್ಪಣೆ ಚಂಡೆವಾದಕ ಗಜಾನನ ಭಂಡಾರಿ ಕರ್ಕಿರವರಿಗೆ ನಡೆಯಲಿದೆ.
ಸಭಾ ಕಾರ್ಯಕ್ರಮದ ನಂತರ ಕವಿ ದಿನೇಶ ಹೆಗಡೆ ತಲಕಾಲಕೊಪ್ಪ ವಿರಚಿತ ಶಿಖಿ ಚರಿತ (ಭಕ್ತ ಸುಧಾಮ) ಎಂಬ ಸುಂದರ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದ ಭಾಗವತರಾಗಿ ಯಕ್ಷಮಿತ್ರ ಬಳಗದ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಜಾನನ ಭಟ್ಟ ತುಳಗೇರಿ ಹಾಗೂ ಮದ್ದಲೆ ವಾದನದಲ್ಲಿ ಅನಿರುದ್ಧ ವರ್ಗಾಸರ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ ಭಾಗವಹಿಸಲಿದ್ದಾರೆ. ಮುಮ್ಮೇಳದ ಪಾತ್ರಧಾರಿಗಳಾಗಿ ಕೃಷ್ಣಯಾಜಿ ಬಳ್ಕೂರು, ಅಶೋಕ ಭಟ್ಟ ಸಿದ್ದಾಪುರ, ಕಾರ್ತಿಕ ಚಿಟ್ಟಾಣಿ, ಶ್ರೀಧರ ಹೆಗಡೆ ಚಪ್ಪರಮನೆ, ಮಾಬ್ಲೇಶ್ವರ ಭಟ್ಟ ಇಟಗಿ, ಸುಧೀರ ಉಪ್ಪೂರ, ಮಂಜುನಾಥ ಹೆಗಡೆ ಹಿಲ್ಲೂರು ಪಾಲ್ಗೊಳ್ಳಲಿದ್ದಾರೆ. ಸಂಪೂರ್ಣ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸಂಘಟಕರು ವಿನಂತಿಸಿದ್ದಾರೆ.