ಹೊನ್ನಾವರ : ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಗಣೇಶ ನಾಯ್ಕ ಸೇವಾ ನಿವೃತ್ತಿ ಹೊಂದಿದ್ದಾರೆ. ಜಿಲ್ಲೆಯ ವಿವಿಧೆಡೆಯಲ್ಲಿ ಸೇವೆ ಸಲ್ಲಿರುವ ಇವರು ತಮ್ಮ ಸುದೀರ್ಘ ಅವಧಿಯ ಸೇವೆಯಲ್ಲಿ ಕರ್ತವ್ಯನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ಸರಳ ವ್ಯಕ್ತಿತ್ವ ಹೊಂದಿದ್ದರು.
ಪೊಲೀಸ್ ಇಲಾಖೆಯಲ್ಲಿ ೩೯ ವರ್ಷಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದ್ದಾರೆ. 1984 ಆಗಷ್ಟ 15 ರಂದು ಪೊಲೀಸ್ ಇಲಾಖೆಯಲ್ಲಿ ಸೇವೆ ಪ್ರಾರಂಭಮಾಡಿದ್ದು, ಇಪ್ಪತ್ತೈದು ವರ್ಷ ಪೊಲೀಸ್ ಸಿಬ್ಬಂದಿಯಾಗಿ, ಏಳು ವರ್ಷ ಹವಾಲ್ದಾರ್ ಆಗಿ, ಆರು ವರ್ಷ ಎಎಸ್ಐ ಆಗಿ, ಒಂದೂವರೆ ವರ್ಷ ಪಿಎಸ್ಐ ಆಗಿ ಕೆಲಸ ಮಾಡಿದ್ದು, ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಥಮ ಸೇವೆ ಪ್ರಾರಂಭ ಮಾಡಿರುತ್ತಾರೆ. ನಂತರ ಹೊನ್ನಾವರ, ಸಿದ್ದಾಪುರ, ಬನವಾಸಿ, ಮಂಕಿ ಯಲ್ಲಿ ಕೆಲಸ ಮಾಡುವುದರೊಂದಿಗೆ ಹೊನ್ನಾವರದಲ್ಲಿ ಸೇವಾ ನಿರ್ವತ್ತಿಗೊಳ್ಳುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಮತ್ತು ಸರಳ ಅಧಿಕಾರಿ ಆಗಿರುವ ಗಣೇಶ ನಾಯ್ಕ ರವರ ಸೇವಾ ನಿವೃತ್ತಿ ಸುಖಕರವಾಗಿರಲಿ ಎಂದು ತಾಲೂಕಿನಿಂದ ಅನೇಕರು ಕೃತಜ್ಞತೆ ಸಲ್ಲಿಸಿದ್ದಾರೆ.