ಶಿರಸಿ: ತಾಲೂಕಿನ ಮಂಜುಗುಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಜಿಲ್ಲಾ ಶಾಖೆ ಉತ್ತರ ಕನ್ನಡ, ಗ್ರೀನ್ ಕೇರ್ (ರಿ.) ಶಿರಸಿ, ಇಕೋ ಕೇರ್ (ರಿ.) ಶಿರಸಿ. ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ.) ಶಿರಸಿ, ಇವರ ಸಹಯೋಗದಲ್ಲಿ ನಡೆದ ಆರೋಗ್ಯ ಶಿಕ್ಷಣ ಮತ್ತು ಔಷಧಗಳ ಬಗ್ಗೆ ಉಪನ್ಯಾಸ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಸಿಯ ಕೆ.ಡಿ.ಸಿ.ಸಿ ಬ್ಯಾಂಕಿನ ಎ.ಜಿ.ಎಂ. ಶ್ರೀಮತಿ ಸುಮಾ. ಬಿ. ನಾಯಕ ಮತ್ತು ದಿವೇಕರ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಪಿ.ಜಿ. ಸೆಂಟರ್ ಕಾರವಾರದ ನಿವ್ರತ್ತ ಪ್ರಾಂಶುಪಾಲರು ಡಾ. ಬಿ.ಎಚ್. ನಾಯಕ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಿ. ಎಚ್. ನಾಯಕ ಆಹಾರ ಪದ್ಧತಿಯ ಬಗ್ಗೆ ಮಕ್ಕಳಿಗೆ ಉಪನ್ಯಾಸ ನೀಡಿದರು. ಶ್ರೀಮತಿ ಸುಮಾ. ಬಿ. ನಾಯಕ ಮಕ್ಕಳಿಗೆ ಜೀವನ ಶೈಲಿಯ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸ.ಹಿ.ಪ್ರಾ ಶಾಲೆ ಮಂಜಗುಣಿಯ ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ನಾಯ್ಕ ಮತ್ತು ಶಿರಸಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಧರ್ ಎಸ್ ನಾಯ್ಕ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಗಳ ಸಂಘ, ಜಿಲ್ಲಾ ಶಾಖೆ ಅಧ್ಯಕ್ಷರಾದ ಮಹೇಶ್ ಡಿ. ನಾಯಕ, ಆರೋಗ್ಯ ಶಿಕ್ಷಣದ ಕುರಿತು ಮಾಹಿತಿ ನೀಡಿದರು. ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿಗಳಾದ ಜಿತೇಂದ್ರ ಕುಮಾರ್ ತೋನ್ಸೆ ಮಾತನಾಡಿ ಮಾನಸಿಕ ಆರೋಗ್ಯ ಮತ್ತು ಪರಿಸರದ ಸ್ವಚ್ಛತೆ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಿದರು. ಮಾನವ ಹಕ್ಕುಗಳ ರಕ್ಷಣಾ ಪರಿಷತ್ತಿನ ಉಪಾಧ್ಯಕ್ಷರಾದ ಮಹೇಶ್ ಗಾಳಿಮನೆ ಮಾನವ ಹಕ್ಕುಗಳ ಕುರಿತು ಮಾಹಿತಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್ ಡಿ ನಾಯ್ಕ, ಗ್ರೀನ್ ಕೇರ್ ಸಂಸ್ಥೆಯ ಸದಸ್ಯರಾದ ಯಶವಂತ್ ನಾಯ್ಕ, ಸ.ಹಿ.ಪ್ರಾ. ಶಾಲೆ ಮಂಜುಗುಣಿಯ ಮುಖ್ಯೋಧ್ಯಾಪಕರಾದ ಶ್ರೀಮತಿ ದೀಪ ನಾಯ್ಕ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇಕೋ ಕೇರ್ ನಿರ್ದೇಶಕರಾದ ಜಗದೀಶ್ ನಾಯಕ, ಜೆ.ಕೆ. ಎಂಟರ್ಪ್ರೈಸಸ್ ವ್ಯವಸ್ಥಾಪಕರಾದ ಮಹಾಂತೇಶ್ ಪ್ರಭುದೇವ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಸಹಶಿಕ್ಷಕರು, ಪಾಲಕರು, ಉಪಸ್ಥಿತರಿದ್ದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಸಂಸ್ಥೆಯವರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹಸ್ತಾಂತರಿಸಿದರು. ಶ್ರೀ ರಾಜೇಶ್ ವರ್ಣೇಕರ್ ಅವರು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಉಪಯೋಗಿಸುವ ಬಗ್ಗೆ ಮತ್ತು ಅದರ ಉಪಯೋಗದ ಬಗ್ಗೆ ತಿಳಿಸಿದರು. ಇಕೋ ಕೇರ್ ನ ಅಧ್ಯಕ್ಷರಾದ ಸುನಿಲ್ ಭೋವಿಯವರು ಸ್ವಾಗತಿಸಿ, ರಮೇಶ್ ಬಿ ನಾಯ್ಕ್, ಕಾರ್ಯದರ್ಶಿ, ಔಷಧ ಮಾರಾಟ ಪ್ರತಿನಿಧಿಗಳ ಸಂಘ, ಶಿರಸಿ ಘಟಕ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲಾ ಶಿಕ್ಷಕರಾದ ಅಶೋಕ್ ಹಡಪದ್ ವಂದಿಸಿದರು.