Slide
Slide
Slide
previous arrow
next arrow

ರಿಪಬ್ಲಿಕ್ ಕಪ್ ಕ್ರಿಕೆಟ್ ಪಂದ್ಯಾವಳಿ: ಸತತ ಮೂರನೇ ಬಾರಿ ಪೊಲೀಸ್ ತಂಡ ಚಾಂಪಿಯನ್

300x250 AD

ದಾಂಡೇಲಿ : ಗಣರಾಜ್ಯೋತ್ಸವದ ನಿಮಿತ್ತ ದಾಂಡೇಲಿ ನಗರಸಭೆಯ ಆಶ್ರಯದಡಿ ನಗರದ ಡಿಎಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮುಕ್ತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೋಲಿಸ್ ಇಲಾಖೆಯ ಕ್ರಿಕೆಟ್ ತಂಡ ಜಯಭೇರಿ ಭಾರಿಸಿ ಸತತ ಮೂರನೇ ಬಾರಿ ಗೆಲುವು ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣ ಅರಕೇರಿ ನಾಯಕತ್ವದ ತಂಡ ಅಂತಿಮ ಪಂದ್ಯದಲ್ಲಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ್ ಮಲ್ಯ ಸಾರಥ್ಯದ ಪ್ರಬಲ ಹೆಸ್ಕಾಂ ತಂಡವನ್ನು ಮಣಿಸಿ ಗೆಲುವಿನ ನಗೆ ಬೀರಿದೆ. ದಾಂಡೇಲಿಯ ಸ್ಟಾರ್ ಕ್ರಿಕೆಟಿಗ ಸತೀಶ್ ಅವರ ಸವ್ಯಸಾಚಿ ಆಟ, ಚಿನ್ಮಯ ಪತ್ತಾರ್ ಅವರ ಸಿಡಿಲಬ್ಬರದ ಬ್ಯಾಟಿಂಗ್, ಸ್ಪಿನ್ ಮಾಂತ್ರಿಕ ಗೋವಿಂದ ಅವರ ಅಮೋಘ ಬೌಲಿಂಗ್, ಪಿಎಸ್ಐ ಕೃಷ್ಣ ಅರಕೇರಿಯವರ ಕಪ್ತಾನನ ಜವಾಬ್ದಾರಿಯುತ ಆಟ, ಗೋಪಾಲ್ ಅವರ ಆಲ್ರೌಂಡರ್ ಪ್ರದರ್ಶನ, ಇಮ್ರಾನ್ ಅವರ ಶಿಸ್ತಿನ ಆಟ ಇದರ ಇದರ ಜೊತೆಯಲ್ಲಿ ತಂಡದ ಎಲ್ಲಾ ಆಟಗಾರರ ಪರಿಪೂರ್ಣ ಪ್ರದರ್ಶನದಿಂದ ಪೊಲೀಸ್ ತಂಡ ಗೆಲುವಿನ ನಗೆ ಬೀರಿದೆ.

300x250 AD

ಅದೇ ರೀತಿ ಹೆಸ್ಕಾಂ ತಂಡವು ಪುರುಷೋತ್ತಮ್ ಮಲ್ಯ ನಾಯಕತ್ವದಲ್ಲಿ ವಿರೋಚಿತ ಪ್ರದರ್ಶನವನ್ನು ನೀಡಿ ಕ್ರೀಡಾಭಿಮಾನಿಗಳಿಗೆ ಕ್ರೀಡಾ ರಸದೌತಣವನ್ನು ನೀಡಿ ಗಮನ ಸೆಳೆದಿದೆ.

Share This
300x250 AD
300x250 AD
300x250 AD
Back to top