ಶಿರಸಿ: ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ದೇಶದ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಹಾಗೂ ಸಂವಿಧಾನಕ್ಕೆ ಅಗೌರವ ತೋರುವ ಮತ್ತು ಹಗುರವಾಗಿ ಮಾತನಾಡುವ ಕೆಲಸ ಯಾರು ಮಾಡಬಾರದು ಎಂದು ಸoಸ್ಥೆ ಉಪಾಧ್ಯಕ್ಷ ಕೆ.ವಿ. ಕೂರ್ಸೆ ಹೇಳಿದರು.
ಇಲ್ಲಿನ ಮರಾಠಿಕೊಪ್ಪದ ಸ್ಕೋಡ್‌ವೇಸ್ ಕಛೇರಿಯಲ್ಲಿ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ ನಂತರದ ಭಾರತದ ಅಭಿವೃದ್ಧಿಗೆ ಡಾ. ಬಿ ಅರ್ ಅಂಬೇಡ್ಕರ್ ಅಧ್ಯಕ್ಷತೆಯ ಸಮಿತಿಯಿಂದ ರಚಿತವಾದ ಸಮಿತಿಯು ನೀಡಿದ ಕಾನೂನು ಬದ್ಧವಾದ ಹಕ್ಕು ಮತ್ತು ಕರ್ತವ್ಯಗಳನ್ನು ಸದುಪಯೋಗ ಪಡಿಸಿಕೊಂಡು ದೇಶದ ಪ್ರಗತಿಗೆ ಸಹಕರಿಸಲು ತಿಳಿಸಿದರು
ಈ ಸಂದರ್ಭದಲ್ಲಿ ಶಿರಸಿ ನಗರದಲ್ಲಿ ಸ್ವಪ್ರೇರಣೆಯಿಂದ 30ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿ ಮಾರಿಕಾಂಬಾ ರಕ್ತದಾನ ತಂಡ ಕಟ್ಟಿಕೊಂಡು ಇತರರನ್ನು ಪ್ರೇರೇಪಿಸುತ್ತ ಸುಮಾರು 2000 ಕ್ಕೂ ಹೆಚ್ಚು ಜನರಿಗೆ ರಕ್ತದಾನದ ಮೂಲಕ ಸಮಾಜ ಸೇವೆ ಮಾಡುತ್ತಿರುವ ರವಿ ಹೆಗಡೆ ಇವರನ್ನು ಶ್ಲಾಘಿಸಿ ಸನ್ಮಾನಿಸಲಾಯಿತು. ಸಂಸ್ಥೆಯ ಸದಸ್ಯರಾದ ದಯಾನಂದ್ ಅಗಾಸೆ ಮಾತನಾಡಿ ದೇಶದ ಸಂವಿಧಾನದ ಮಹತ್ವವನ್ನು ಎಲ್ಲರೂ ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತರುವುದರ ಮೂಲಕ ಗೌರವ ಸಲ್ಲಿಸಲು ತಿಳಿಸಿದರು. ಅಲ್ಲದೆ ಸಂವಿದಾನ ರಚಿಸಿದ ಅನೇಕ ಮಹನೀಯರ ಶ್ರಮ ಮತ್ತು ಚಿಂತನೆಯ ಫಲವಾಗಿ ನಮಗೆ ಸಂವಿದಾನ ದೊರಕಿದೆ ಎಂದರು. ಸಂಸ್ಥೆ ಕಾರ್ಯದರ್ಶಿ ಸರಸ್ವತಿ ರವಿ ಮಾತನಾಡಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಕೈಲಾದಷ್ಟು ಒಳ್ಳೆಯ ಕೆಲಸಗಳನ್ನು ಸಮಾಜಕ್ಕೆ ಮಾಡುವ ಮೂಲಕ ದೇಶ ಸೇವೆಗೆ ಅಣಿಯಾಗಬೇಕು ಎಂದು ತಿಳಿಸಿ ಸಂವಿಧಾನ ಬಗ್ಗೆ ಯಾರು ಹಗುರವಾಗಿ ಮಾತನಾಡಬಾರದು ಎಂದು ತಿಳಿಸಿದರು
ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ್ ನಾಯ್ಕ ಮಾತನಾಡಿ ಸಂಸ್ಥೆಯು ಹಲವಾರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತಿದ್ದು ಗಣರಾಜ್ಯೋತ್ಸವದ ಸಂಭ್ರಮ ಮಹತ್ವದ್ದಾಗಿದ್ದು , ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದುಕೊಂಡು ದೇಶದ ಅಭಿವೃದ್ಧಿಗಾಗಿ ಶ್ರಮಿಸಲು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋ ಸೇವಕ , ಪ್ರಾಣಿಪ್ರಿಯ ಶಿರಸಿ ಹೊಸಪೇಟೆ ರಸ್ತೆಯ ರವಿ ಹೆಗಡೆ ತನ್ನ ತಾಯಿ ಪ್ರೇರಣೆಯಿಂದ ರಕ್ತದಾನ ಮಾಡಲು ಪ್ರಾರಂಭಿಸಿದ್ದು ಇಂದು ಮಾರಿಕಂಬಾ ರಕ್ತದಾನ ವಾಟ್ಸ್ಆ್ಯಪ್ ಗುಂಪಿನ ಸದಸ್ಯರ ಸಹಕಾರದಿಂದ ಸುಮಾರು 2000ಕ್ಕೂ ಹೆಚ್ಚು ರಕ್ತದಾನ ನೀಡಿದ್ದು ರಕ್ತದಾನ ಜೀವದಾನ ಎಂದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ರಿಯಾಜ್ ಸಾಗರ್ ಹಾಗೂ ಸಿಬ್ಬಂದಿಗಳು, ಅತಿಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.