ಜೊಯಿಡಾ: ಗಂಡು ಮಕ್ಕಳನ್ನು ಹೇಗೆ ಬೆಳೆಸುತ್ತೇವೆಯೋ ಹಾಗೆ ಹೆಣ್ಣು ಮಕ್ಕಳನ್ನೂ ಉತ್ತಮವಾಗಿ ಬೆಳೆಸೋಣ. ಅವರಿಗೆ ಉತ್ತಮ , ಆರೋಗ್ಯ ಉತ್ತಮ ಶಿಕ್ಷಣ ಕೊಡುವುದೇ ಬೇಟಿ ಬಚಾವ್ ಬೇಟಿ ಪಡಾವ್ ಯೋಜನೆಯ ಉದ್ದೇಶ ಎಂದು ಸಿಡಿಪಿಒ ಕಲ್ಪನಾ ಹೇಳಿದರು. ಅವರು ನಂದಿಗದ್ದಾ ಗ್ರಾಪಂ ವ್ಯಾಪ್ತಿಯಲ್ಲಿ ಅಂಗನವಾಡಿ , ಶಾಲೆಗಳಿಗೆ ಬೇಟಿ ನೀಡಿ, ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಹೆಣ್ಣು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸರಕಾರದ ಯೋಜನೆಗಳ ಮಾಹಿತಿ ಒದಗಿಸಿದರು.