Slide
Slide
Slide
previous arrow
next arrow

ಪರಶುರಾಮ ಸ್ಪೋರ್ಟ್ಸ್ ಕ್ಲಬ್ ನೂತನ ಕಟ್ಟಡ ಉದ್ಘಾಟನೆ

300x250 AD

ಭಟ್ಕಳ: ಸ್ವಸ್ಥ ಆರೋಗ್ಯ ಮತ್ತು ಮನಸ್ಸಿಗೆ ಕ್ರೀಡೆಗಳು ಸಹಕಾರಿ. ಕ್ರೀಡೆಯಿಂದ ದೈಹಿಕವಾಗಿ ಲಾಭ ಮಾತ್ರವಲ್ಲದೆ, ಮಾನಸಿಕ ಬೆಳವಣಿಗೆಗಳಿಗೂ ಸಹಕಾರಿ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಹೇಳಿದರು.

ಅವರು ಮೂಡಭಟ್ಕಳದಲ್ಲಿ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದರು. ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಉತ್ತರಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲೂ ಸಂಚಲನ ಮೂಡಿಸಿದೆ. ಇದರ ಸದಸ್ಯರು ಕಬಡ್ಡಿ ಆಟದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ಪರಶುರಾಮ ತಂಡದ ಹೆಸರು ಕೇಳಿದರೆ ಎದುರಾಳಿಗಳಲ್ಲಿ ನಡುಕು ಉಂಟಾಗುತ್ತಿತ್ತು. ಅಂತಹ ತರಬೇತಿ ಪರಶುರಾಮ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನೀಡಲಾಗುತ್ತಿದೆ. ತಾನು ಕೂಡ ಪರಶುರಾಮ ಗರಡಿಯಲ್ಲಿ ಪಳಗಿ ಇದರ ಸದಸ್ಯನಾಗಿರುವುದು ಸಂತಸದ ವಿಚಾರ ಎಂದು ಹೇಳಿದರು.

ನೂತನ ಕಟ್ಟಡದ ಉದ್ಘಾಟನೆಯನ್ನು ಇನ್ನೊರ್ವ ಮುಖ್ಯ ಅತಿಥಿ ನಿವೃತ್ತ ದೈಹಿಕ ಶಿಕ್ಷಕ ಎಂ.ಬಿ.ನಾಯ್ಕ ಮಾತನಾಡಿ, ಕಬಡ್ಡಿ ಅಂದರೆ ಪರಶುರಾಮ ಸ್ಪೋರ್ಟ್ಸ್ ಅನ್ನುವ ವಾತವಾರಣ ಇದೆ. ಮಾಜಿ ಶಾಸಕ ಸುನೀಲ ನಾಯ್ಕ ಕೂಡ ನಮ್ಮ ತಂಡದ ಸದಸ್ಯರಾಗಿ ಹಲವಾರು ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ತಂಡದ ಹಲವು ವಿದ್ಯಾರ್ಥಿಗಳು ಉತ್ತಮ ಹುದ್ದೆಯಲ್ಲಿದ್ದಾರೆ. ಪ್ರೋ ಕಬಡ್ಡಿಯಲ್ಲಿ ದಿ.ಮನೋಜ ನಾಯ್ಕ ಆಯ್ಕೆಯಾಗಿದ್ದು ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದರು.

300x250 AD

ಈ ಸಂದರ್ಭದಲ್ಲಿ ಪರಶುರಾಮ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ಗಣೇಶ ನಾಯ್ಕ, ಮುಟ್ಟಳ್ಳಿ ಗ್ರಾ.ಪಂ ಅಧ್ಯಕ್ಷೆ ರಜನಿ ನಾಯ್ಕ, ಅನಂತ ನಾಯ್ಕ ಚೌಥನಿ, ದುರ್ಗಪ್ಪ ನಾಯ್ಕ, ಚಂದ್ರಶೇಖರ ನಾಯ್ಕ, ದೇವೇಂದ್ರ ನಾಯ್ಕ, ಕೃಷ್ಣಮೂರ್ತಿ ನಾಯ್ಕ, ಈಶ್ವರ ನಾಯ್ಕ, ರಾಮಕೃಷ್ಣ ಕೋಡಿಯಾ ಇತರರು ಇದ್ದರು. ಮಂಜುನಾಥ ಟಿ. ನಾಯ್ಕ ಸ್ವಾಗತಿಸಿದರೆ, ವೆಂಕಟ್ರಮಣ ಮೊಗೇರ ವಂದಿಸಿದರು.

Share This
300x250 AD
300x250 AD
300x250 AD
Back to top