Slide
Slide
Slide
previous arrow
next arrow

ಶ್ರೀರಾಮ ಕ್ಷತ್ರಿಯ ಸಮಾಜದಿಂದ ಶ್ರೀರಾಮ ತಾರಕ ಜಪಯಜ್ಞ

300x250 AD

ಶಿರಸಿ: ಇಲ್ಲಿನ ಶ್ರೀರಾಮ ಕ್ಷತ್ರಿಯ ಸಮಾಜದಿಂದ ದುಂಡಸಿ ನಗರದಲ್ಲಿರುವ ಸಮಾಜದ ಜಾಗದಲ್ಲಿ ಶ್ರೀರಾಮ ತಾರಕ ಜಪ ಯಜ್ಞ ಮಾಡಲಾಯಿತು. ಕಳೆದ 15 ದಿವಸಗಳಿಂದ ಸಮಾಜದ ಪ್ರತಿಯೊಂದು ಮನೆಗಳಲ್ಲಿ ರಾಮ ತಾರಕ ಜಪವನ್ನು ಪಠಿಸಿದ್ದು, ಅದರಂತೆಯೇ ಸೋಮವಾರ ರಾಮಜನ್ಮ ಭೂಮಿಯಲ್ಲಿ ನಡೆಯುತ್ತಿರುವ ಶ್ರೀರಾಮ ರಾಮಲಲ್ಲ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ತಾರಕ ಜಪ ಯಜ್ಞವನ್ನು ನೆರವೇರಿಸಲಾಯಿತು. ಪೂಜೆಯಲ್ಲಿ ಸುಮಾರು 200 ಜನರು ಪಾಲ್ಗೊಂಡಿದ್ದು, ಪೂಜೆಯನಂತರ ಪಾನಕ, ಪಚ್ಚಡಿ ಮತ್ತು ಲಘುಉಪಹಾರವನ್ನು ವಿತರಿಸಲಾಯಿತು. ಸಮಾಜದ ಅಧ್ಯಕ್ಷ ರಮೇಶ್ ದುಬಾಶಿ, ಉಪಾಧ್ಯಕ್ಷರಾದ ಸದಾನಂದ್ ಮದ್ದೊಡಿ, ವಿನೋದ, ಕಾರ್ಯದರ್ಶಿಗಳಾದ ಗಜಾನನ ಸಕಲಾತಿ,ನಾಗರಾಜ್ ಬೈಂದೂರ್, ಮಂಜುನಾಥ್ ಕ್ಷತ್ರಿಯ, ಉದಯ್ ಕಳೂರ್, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು, ಮಕ್ಕಳು ಪಾಲ್ಗೊಂಡಿದ್ದರು

300x250 AD
Share This
300x250 AD
300x250 AD
300x250 AD
Back to top