ಯಲ್ಲಾಪುರ: ಜನರನ್ನು ಪ್ರಚೋದಿಸುವ ಹೇಳಿಕೆ ಕೊಡುವುದನ್ನು ಬಿಟ್ಟು ಜನಪರ ಕೆಲಸ ಮಾಡುವುದನ್ನು ಸಂಸದ ಅನಂತ ಹೆಗಡೆ ಕಲಿಯಬೇಕು ಎಂದು ಎನ್.ಕೆ.ಭಟ್ ಹೇಳಿದರು.
ಅವರು ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿ,ಬಿಜೆಪಿಯವರು ಹಿಂದೂ ದೇಶ ಮಾಡುತ್ತೇವೆ ಹೇಳುತ್ತಾರೆ. ಸರ್ವಧರ್ಮ ಸಮನ್ವಯ ದೇಶದಲ್ಲಿ ಒಂದು ಧರ್ಮ ಮಾಡಲಾಗುತ್ತದೆ ಎಂದು ಹೇಳುತ್ತಾರೆ.ಬಿಜೆಪಿ ಧರ್ಮ ಹೆಸರಲ್ಲಿ ಆಳ್ವಿಕೆ ಮಾಡುವುದನ್ನು ಸಂವಿಧಾನ ಒಪ್ಪುವುದಿಲ್ಲ.ಅನಂತ ಕುಮಾರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಉಲ್ಲಾಸ ಶಾನಭಾಗ ಮಾತನಾಡಿ,ಅನಂತಕುಮಾರ್ ಹೆಗಡೆ ದಿನ ಬೆಳಗಾದರೆ ಮಸೀದಿ ಒಡೆಯುತ್ತೇನೆ ಹೇಳ್ತಾರೆ. ಹುಬ್ಬಳ್ಳಿ ಅಂಕೋಲಾ ರೈಲು ಶತಮಾನದ ಕೆಲಸ ಆಗಿಲ್ಲ. ಅನಂತಕುಮಾರ್ ಹೆಗಡೆ ಮಂತ್ರಿ ಆಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ? ಅವರು ತಮ್ಮ ಅವಧಿಯಲ್ಲಿ ಏನು ಮಾಡಿದ್ದಾರೆ. ಶೂನ್ಯ ಅಭಿವೃದ್ಧಿಯ ಇವರು ಬರೇ ವಿವಾದ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.ಇದೇ ರೀತಿಯ ಗೊಂದಲದ ಹೇಳಿಕೆ ನೀಡುವುದು ಮುಂದುವರಿದರೆ,ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದರು. ಕಾಂಗ್ರೆಸ್ ಪ್ರಮುಖರಾದ ರಾಘವೇಂದ್ರ ಭಟ್ಟ, ಎಂ ಡಿ ಮುಲ್ಲಾ, ಎಸ್ ಎಂ ಭಟ್ಟ, ವಿಜಯಲಕ್ಷ್ಮಿ ವೈದ್ಯ,ನರಸಿಂಹ ನಾಯ್ಕ,ಅನಿಲ್ ಮರಾಠೆ,ಫೈರೋಜ್ ಖಾನ್,ಇದ್ದರು.