Slide
Slide
Slide
previous arrow
next arrow

ನಲಿ-ಕಲಿ ಶಿಕ್ಷಕರಿಗೆ ಸಾಹಿತಿ ಸುಮುಖಾನಂದ ಜಲವಳ್ಳಿ ಪಾಠ

300x250 AD

ಹೊನ್ನಾವರ: ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಚಟುವಟಿಕೆ ನಲಿ-ಕಲಿ ಅಭ್ಯಾಸ ಪುಸ್ತಕದಲ್ಲಿ ಅಳವಡಿಸಲಾಗಿದೆ.ಅಧ್ಯಯನ ಮತ್ತು ಅಧ್ಯಾಪನದ ಮೂಲಕ ಬೋಧಕರು ಕಥೆ ಕಟ್ಟುವ, ಕವನ ಕಟ್ಟುವ ಸೃಜನಶೀಲ ಕೌಶಲ್ಯವನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಕಲಿಕಾ ವೇಗಕ್ಕೆ ಅಣಿಯಾಗಬೇಕು ಎಂದು ಸುಮುಖಾನಂದ ಜಲವಳ್ಳಿ ಹೇಳಿದರು.

ಇತ್ತೀಚೆಗೆ ಸಮೂಹ ಸಂಪನ್ಮೂಲ ಕೇಂದ್ರ ಕರ್ಕಿಯಲ್ಲಿ ನಡೆದ ಕರ್ಕಿ, ಹೊನ್ನಾವರ, ಹಡಿನಬಾಳ, ಮಾಗೋಡ ಸಂಪನ್ಮೂಲ ಕೇಂದ್ರದ ನಲಿ-ಕಲಿ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಮುಂದೆ ವಿದ್ಯಾರ್ಥಿ, ಬಹು ದೂರ ಶಿಕ್ಷಕ ಎನ್ನುವಂತಾಗದೆ ಮಕ್ಕಳ ಬೆನ್ನಿಗಿರುವ ಶಿಕ್ಷಕನಾಗಬೇಕಾದರೆ ಸಾಹಿತ್ಯದ ಅಧ್ಯಯನ ತೀರ ಅಗತ್ಯವಾಗಿದೆ. ಪ್ರಕೃತಿಯ ಮಡಿಲಲ್ಲಿ ಮಕ್ಕಳನ್ನು ಬಿಟ್ಟು ಅವರು ಪಡೆದುಕೊಳ್ಳುವ ಅನುಭವದ ಹಿನ್ನೆಲೆಯಲ್ಲಿ ಒಂದು ವಸ್ತುವಿನ ಕುರಿತಾದ ಸಂವೇದನೆಯಿಂದ ಪದ್ಯ ರಚಿಸುವ ಸಾಮರ್ಥ್ಯ ಮಕ್ಕಳಲ್ಲಿ ಬೆಳೆಯಲು ಸಾಧ್ಯ. ಇದಕ್ಕೆ ಪೂರಕವಾಗಿ ಶಿಕ್ಷಕನಾದವನಿಗೆ ಕಾವ್ಯ ರಚಿಸುವ ಕೌಶಲ್ಯ ಇರಬೇಕು ಎಂದರು. ಒಂದರಿಂದ ಮೂರನೇ ತರಗತಿಯ ಭಾಷಾ ವಿಷಯವು ಮಗುವಿನ ಕಲಿಕಾ ಅನುಭವ ಮತ್ತು ಪರಿಸರದ ಅನುಭವವನ್ನು ಇತರ ಗೆಳೆಯರೊಂದಿಗೆ, ಶಿಕ್ಷಕರೊಂದಿಗೆ, ಹಿರಿಯರೊಂದಿಗೆ ಹಂಚಿಕೊಳ್ಳುವ ಪಠ್ಯಾಧಾರಿತ ಕಲಿಕೆಯಾಗಿದೆ. ವೈವಿಧ್ಯಮಯವಾದ ಚಟುವಟಿಕೆಯ ಮೂಲಕ ಕಲಿತ ವಿದ್ಯಾರ್ಥಿ ತನ್ನ ಕಲಿಕಾ ಮಟ್ಟ ಎತ್ತರಿಸಿಕೊಂಡು, ಇನ್ನಷ್ಟು ಅನುಭವ ಪಡೆಯಲು ಹುಡುಕಾಟದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಸಾಹಿತ್ಯ ಎನ್ನುವುದು ಪ್ರತಿಯೊಬ್ಬರಲ್ಲೂ ಇದೆ. ಓದು ಮತ್ತು ಬರಹದ ಮೂಲಕ ಅದನ್ನು ಮುನ್ನೆಲೆಗೆ ತರಬೇಕಾದ ಅಗತ್ಯತೆ ಇದೆ. ಒಂದು ವಸ್ತುವಿನ ಮೇಲೆ ಕಾವ್ಯ ರಚಿಸುವಾಗ ವಸ್ತುವನ್ನು ಇಡಿಯಾಗಿ ಪರಿಚಯಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಮಕ್ಕಳು ಸಮಾಜದ ಸಂಪತ್ತು. ಆ ಸಂಪತ್ತನ್ನು ಒಟ್ಟುಗೂಡಿಸಿ ಸಮಾಜಕ್ಕೆ ನೀಡಬೇಕಾಗಿದೆ. ಶಿಕ್ಷಕನಾದವನು ತನ್ನ ಸಾಮಾಜಿಕ ಜವಾಬ್ದಾರಿಯ ಮೂಲಕ ರಾಷ್ಟ್ರಕ್ಕೆ ಬೇಕಾದ ಜೀವಂತ ಶಿಲ್ಪಿಯನ್ನು ತಯಾರು ಮಾಡುವ ಸಿದ್ಧತೆಯಲ್ಲಿ ಇಂದಿನ ಶಿಕ್ಷಕರು ತೊಡಗಿಸಿಕೊಂಡಾಗ ಮಾತ್ರ ಮಕ್ಕಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿ ಮೂಡಲು ಸಾಧ್ಯ. ಒಂದರಿಂದ ಮೂರನೇ ತರಗತಿಯ ಭಾಷಾ ವಿಷಯದ ಅಭ್ಯಾಸ ಪುಸ್ತಕದಲ್ಲಿ ಮಗುವಿನ ಆಲೋಚನೆಗಳಿಗೆ ಪೂರಕವಾದ ಚರ್ಚೆಗಳು ನಡೆದವು.

300x250 AD

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಪ್ರಕಾಶ ಶೇಟ್, ಬಿ.ಆಯ್.ಇ.ಆರ್. ಟಿ. ಹೊನ್ನಿ ಮುಕ್ರಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಿಕ್ಷಕ ಪಿ.ಆರ್.ನಾಯ್ಕ ಸ್ವಾಗತಿಸಿದರೆ, ಸಂಪನ್ಮೂಲ ವ್ಯಕ್ತಿ ಸಚ್ಚಿದಾನಂದ ಭಟ್ಟ ವಂದಿಸಿದರು.

Share This
300x250 AD
300x250 AD
300x250 AD
Back to top