ದಾಂಡೇಲಿ : ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ ಕರೆಯನ್ವಯ ನಗರದ ಜಂಗಲೇಶ್ವರ ದೇವಸ್ಥಾನ ಮತ್ತು ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು.
ಸ್ವಚ್ಚತಾ ಶ್ರಮದಾನದಲ್ಲಿ ಯೋಗೇಶ್ ಸಿಂಗ್, ವೆಂಕಟೇಶ್ ಪಾಂಡೆ ,ಕೇಶವ ರಾಂದಡ, ಕ್ಷಿರಸಾಗರ, ಹನುಮಂತ ಕಾರಗಿ, ಪ್ರಮೋದ್ ಕದಂ, ಪ್ರಮೋದ್ ಕುಡತರಕರ, ವೀರಸಂಗಯ್ಯ ಕುಲಕರ್ಣಿ, ಚಂದ್ರು ಮಾಳಿ, ಲಿಂಗಯ್ಯ ಪೂಜಾರ್, ನಾಗರಾಜ ಅನಂತಪುರ, ಲಾಲ್ ಸಿಂಗ್, ಮಹೇಶ್ ಮಂಜು ರಾಮಸ್ವಾಮಿ, ಸಂಜು, ಶಂಕರ ಕಾರೆಕಾರ , ಮಹಾಲಿಂಗ, ರಮೇಶ ದೊಡ್ದಮನಿ,ರವಿಂದ್ರ ಶಾ, ಸುದಾಕರ ಶೆಟ್ಟಿ, ಸುನೀಲ್.ಎಚ್.ಕೆ ಮೊದಲಾದವರು ಭಾಗವಹಿಸಿದ್ದರು.