Slide
Slide
Slide
previous arrow
next arrow

ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

300x250 AD

ಶಿರಸಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಆನೆಹೊಂಡ ಹತ್ತಿರದ ಅರಣ್ಯ ಪ್ರದೇಶದ ಕಚ್ಚಾ ರಸ್ತೆಯಲ್ಲಿ ಮಂಗಳವಾರ ಗಾಂಜಾ ಸಾಗಾಟ ಮಾರುತ್ತಿದ್ದ ವ್ಯಕ್ತಿಯೋರ್ವನನ್ನು ಗಾಂಜಾ ಸಹಿತವಾಗಿ ಪೋಲಿಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿ ಗಣೇಶನಗರದ ನಿಹಾಲ್ ಡಿಯೋಗ್ ಫರ್ನಾಂಡಿಸ್, ಈತನ ಬಳಿ ಸುಮಾರು 8500/- ರೂ ಮೌಲ್ಯದ 114.30ಗ್ರಾಂ ಗಾಂಜಾ, ನಗದು ಹಣ 610/- ರೂ. ಹಾಗೂ ಸಾಗಾಟಕ್ಕೆ ಬಳಸಿದ ಗಾಡಿಯನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

300x250 AD

ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಸಿಟಿ, ಜಗದೀಶ್ ಎಮ್., ಡಿ.ವೈ.ಎಸ್.ಪಿ. ಕೆ.ಎಲ್. ಗಣೇಶ, ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಶಿರಸಿ ನಗರ ಪೊಲೀಸ್ ಠಾಣೆಯ ಪಿಎಸ್ಐ ನಾಗಪ್ಪ ಬಿ. ನೇತೃತ್ವದಲ್ಲಿ ಪಿಎಸ್ಐ ಮಾಹಾಂತೇಶ ಕೆ., ಎಎಸ್ಐ ಅಶೋಕ ಆರ್ ರಾಠೋಡ. ಹಾಗೂ ಸಿಬ್ಬಂದಿಗಳಾದ ಪ್ರಶಾಂತ ಪಾವಸ್ಥರ, ನಾಗಪ್ಪ ಲಮಾಣಿ, ಪ್ರವೀಣ ಎನ್. ಅರುಣ ಲಮಾಣಿ, ಸದ್ದಾಂಹುಸೇನ್, ಚೇತನಕುಮಾರ, ರಾಜಶೇಖರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top