Slide
Slide
Slide
previous arrow
next arrow

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸಾವಿತ್ರಿಬಾಯಿ ಪುಲೆ ದಿನಾಚರಣೆ

300x250 AD

ಹೊನ್ನಾವರ : ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹೊನ್ನಾವರದ ಸರ್ಕಾರಿ ನೌಕರ ಭವನದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸಾಧನಾ ಬರ್ಗಿರವರು ನೆರವೇರಿಸಿ ಸಾವಿತ್ರಿಬಾಯಿ ಪುಲೆರವರ ಧೈರ್ಯವಂತಿಕೆ ,ಹೆಣ್ಣಿನ ಶೋಷಣೆಯ ವಿರುದ್ಧ ಅವರು ಮಾಡಿದ ಹೋರಾಟವನ್ನು ನೆನೆದು ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರತಿವರ್ಷ ಈ ದಿನದಂದು ಅತ್ಯಂತ ಅರ್ಥಪೂರ್ಣವಾಗಿ ದಿನಾಚರಣೆಯನ್ನು ಆಚರಿಸುತ್ತಿರುವುದು ತುಂಬಾ ಖುಷಿಯ ಸಂಗತಿ ,ಹಾಗೂ ಶ್ರೀಮತಿ ಅಹಲ್ಯ ಭಟ್ಟರಂತ ಒಬ್ಬ ಉತ್ತಮ ಶಿಕ್ಷಕಿಯನ್ನು ಅತಿಥಿಯನ್ನಾಗಿ ಕರೆದು ಅವರನ್ನು ಗೌರವಿಸಿದ್ದು ತುಂಬಾ ಸಂತೋಷದ ಸಂಗತಿ ಎಂದು ಹೇಳಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಸ್ಎಂ ಹೆಗಡೆ ಅವರು ಸಾವಿತ್ರಿಬಾಯಿ ಫುಲೆ ರವರ ಜೀವನ ,ಆದರ್ಶ, ಹೆಣ್ಣು ಮಕ್ಕಳ ಶೋಷಿತರ ,ಶಿಕ್ಷಣಕ್ಕಾಗಿ ಅವರು ಶ್ರಮಿಸಿದ ಕ್ಷಣಗಳನ್ನು ಅತ್ಯಂತ ಮನೋಜ್ಞವಾಗಿ ತೆರೆದಿಟ್ಟು, ಹಾಗೂ ಪ್ರತಿ ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ದಿನವನ್ನು ಆಚರಿಸುತ್ತಿರುವುದು ತುಂಬಾ ಹೆಮ್ಮೆ ಮತ್ತು ಸಂತೋಷದ ವಿಚಾರ ಹಾಗೆ ಕಾರ್ಯಕ್ರಮದ ಅರ್ಥಪೂರ್ಣತೆಯನ್ನು ಹೆಚ್ಚಿಸಲು ಒಬ್ಬ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯನ್ನು ಗೌರವಿಸುತ್ತಿರುವುದು ತುಂಬಾ ಹೆಮ್ಮೆಯ ಮತ್ತು ಅಪರೂಪದ ಸಂಗತಿ ಎಂದು ಹೇಳಿದರು.

ಮತ್ತೊರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಜಕುಮಾರ್ ಟಿ. ನಾಯ್ಕ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಹೊನ್ನಾವರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒಂದು ಮಾದರಿ ಸಂಘ ,ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ಶಿಕ್ಷಕರಿಗೆ ಇದು ಒಂದು ಸ್ಪೂರ್ತಿಯ ಸೆಲೆಯಾಗಿದೆ ಎಂದು ಹೇಳಿದರು.

300x250 AD

ಈ ಸಂದರ್ಭದಲ್ಲಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರತಿಭಾನ್ವಿತ ,ಶಿಕ್ಷಕಿ, ಮಕ್ಕಳ ಕಣ್ಮಣಿ ,ಪ್ರಾಮಾಣಿಕ ,ಸರಳ ಸಜ್ಜನಿಕೆಯ ಯಾವ ಪ್ರಚಾರವನ್ನು ಬಯಸದ ಶ್ರೀಮತಿ ಅಹಲ್ಯ ಭಟ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಎಂ ಜಿ ನಾಯ್ಕ್ ರವರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಗೌರವ ಅಧ್ಯಕ್ಷರಾದ ಸುಧೀಶ್ ನಾಯ್ಕರು ಸಂಘದ ಕಾರ್ಯದರ್ಶಿಗಳಾದ ಕೆಎಂ ಹೆಗಡೆಯವರು ಮುಂತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಿಕ್ಷಕಿ ಗೌರಿ ಭಟ್ ಪ್ರಾರ್ಥಿಸಿದರು, ಶಾರದಾ ಹೆಗಡೆ ಸ್ವಾಗತಿಸಿದರು, ಪ್ರತಿಮಾ ಹೆಗಡೆ ವಂದಿಸಿದರು. ಲಕ್ಷ್ಮಿ ಎಚ್ ಕಾರ್ಯಕ್ರಮ ನಿರೂಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕಿಯರು, ಶಿಕ್ಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This
300x250 AD
300x250 AD
300x250 AD
Back to top