ಶಿರಸಿ: ಭೌತಿಕ ಪರಿಸರ ನಾಶವಾದರೆ ಅದನ್ನು ಪುನಃ ಸೃಷ್ಟಿಸಬಹುದು. ಆದರೆ ಸಾಮಾಜಿಕ ಪರಿಸರ ನಾಶವಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸಮಾಜಶಾಸ್ತ್ರ ಪ್ರಾಧ್ಯಾಪಕ ಜಿ.ಟಿ. ಭಟ್ ಹೇಳಿದರು.
ಅವರು ದೊಡ್ನಳ್ಳಿ ಗ್ರಾಮದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ 5ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣು, ವಾಯು,ಜಲ ,ತಾಪಮಾನ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವುದು ಮಾತ್ರವೇ ಪರಿಸರ ಸಂರಕ್ಷಣೆಯಲ್ಲ. ಡಾ. ಇರಾವತಿ ಕರ್ವೆ ಹೇಳುವಂತೆ ಭಾರತವೊಂದನ್ನು ಸುತ್ತಿದರೆ ಜಗತ್ತನ್ನೇ ಸುತ್ತಿದಂತೆ. ಜಗತ್ತಿನಲ್ಲಿ ಭಾರತವನ್ನು ಹೊರತುಪಡಿಸಿದರೆ ಎಲ್ಲಿಯೂ ಸೂರ್ಯನ ದೇವಾಲಯ ಕಾಣ ಸಿಗುವುದಿಲ್ಲ. ಭಾರತದಲ್ಲಿನ ವಿವಿಧತೆಯಲ್ಲಿ ಏಕತೆ ವಿಶ್ವಕ್ಕೆ ಮಾದರಿಯಾಗಿದೆ. ಭಾರತೀಯರಲ್ಲಿರುವಷ್ಟು ಸಹಿಷ್ಣುತಾ ಮನೋಭಾವ ಜಗತ್ತಿನ ಬೇರಾವ ರಾಷ್ಟ್ರದಲ್ಲಿಯೂ ಕಾಣಸಿಗುವುದಿಲ್ಲ. ವಿಭಿನ್ನ ಧರ್ಮ ಮತ ಪಂಥಗಳು ನಮ್ಮಲ್ಲಿದ್ದರು ಏಕತೆಯಿಂದ ಬಾಳುತ್ತಿದ್ದೇವೆ ಎಂದರು. ಎನ್ಎಸ್ಎಸ್ ಸಂಚಾಲಕ ಡಾ.ಆರ್.ಆರ್. ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಸಿದರು.