Slide
Slide
Slide
previous arrow
next arrow

ಹಾಸ್ಟೆಲ್’ಗೆ ನುಗ್ಗಿ ಗಲಾಟೆ: ಬಾಲಕರ ಮೇಲೆ ಹಲ್ಲೆ

300x250 AD

ಭಟ್ಕಳ: ಪಟ್ಟಣದ ಸರ್ಕಾರಿ ಆಸ್ಪತ್ರೆ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿರುವ ಬಾಲಕರ ಹಾಸ್ಟೆಲ್’ಗೆ ಏಕಾಏಕಿ ಕೆಲವರು ನುಗ್ಗಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಾಬು ನಾಯ್ಕ, ನಂದನ್ ಜೈನ್ ಹಾಗೂ ಮತ್ತೋರ್ವನಿರುವುದು ತಿಳಿದು ಬಂದಿದೆ. ಇವರು ಏಕಾಏಕಿ ಅಲ್ಪ ಸಂಖ್ಯಾತರ ಮೆಟ್ರಿಕಾ ನಂತರದ ಬಾಲಕರ ವಸತಿ ನಿಲಯಕ್ಕೆ ನುಗ್ಗಿ ಕೈಯಲ್ಲಿ ಕೋಲು, ಕ್ರಿಕೆಟ್ ಸ್ಟಂಪ್’ನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಹಾಸ್ಟೆಲ್ ಒಳಗೆ ನುಗ್ಗಿ ರೂಮಿನ ಬಾಗಿಲು ಪ್ಲಾಸ್ಟೀಕ್ ಖುರ್ಚಿನ್ನು ಒಡೆದು ಅಲ್ಲೇ ಇದ್ದ ಹಾಸ್ಟೇಲ್ ಬಾಲಕ ನವೀದ ಮನ್ಸೂರ ಎಂಬಾತನಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.

300x250 AD

ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top